More

    Kargil Vijay Diwas 2023: “ನಿಮ್ಮಿಂದಾಗಿ ನಾವು ಬದುಕುತ್ತಿದ್ದೇವೆ”… ಭಾರತೀಯ ಸೇನೆಯ ಶೌರ್ಯಕ್ಕೆ ಸೆಲೆಬ್ರಿಟಿಗಳಿಂದ ಸೆಲ್ಯೂಟ್

    ಬೆಂಗಳೂರು: ಕಾರ್ಗಿಲ್ ವಿಜಯ್ ದಿವಸ್ ಅನ್ನು 1999 ರ ಕಾರ್ಗಿಲ್ ಯುದ್ಧದ ಸಮಯದಲ್ಲಿ ಪ್ರಾಣ ಕಳೆದುಕೊಂಡ ನಿಜ ಜೀವನದ ವೀರರ ವಿಜಯ ಮತ್ತು ಶೌರ್ಯವನ್ನು ಸ್ಮರಿಸುವ ಸಲುವಾಗಿ ಪ್ರತಿ ವರ್ಷ ಜುಲೈ 26 ರಂದು ಆಚರಿಸಲಾಗುತ್ತದೆ. ಈ ದಿನ ಪಾಕಿಸ್ತಾನಿ ನುಸುಳುಕೋರರ ಹಿಡಿತದಿಂದ ಕಾರ್ಗಿಲ್ ಬೆಟ್ಟಗಳನ್ನು ಯಶಸ್ವಿಯಾಗಿ ಮುಕ್ತಗೊಳಿಸುವ ಮೂಲಕ ಭಾರತವು ವಿಜಯಶಾಲಿಯಾಗಿ ಹೊರಹೊಮ್ಮಿತು. ಭಾರತೀಯ ಸೇನೆಯು ಶತ್ರುಗಳನ್ನು ಪಲಾಯನ ಮಾಡುವಂತೆ “ಆಪರೇಷನ್ ವಿಜಯ್” ಅನ್ನು ಪ್ರಾರಂಭಿಸಿತು. ಯುದ್ಧದ ಸಮಯದಲ್ಲಿ ಹುತಾತ್ಮರಾದ ನೂರಾರು ಭಾರತೀಯ ಸೈನಿಕರಿಗೆ ಗೌರವ ಸಲ್ಲಿಸಲು ಕಾರ್ಗಿಲ್ ವಿಜಯ್ ದಿವಸ್ ಅನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ. ಅಂದಹಾಗೆ ಹಲವಾರು ಗಣ್ಯರು ಕಾರ್ಗಿಲ್ ವಿಜಯ್ ದಿವಸ್‌ ಪ್ರಯುಕ್ತ ಶುಭಾಶಯ ತಿಳಿಸಿ, ತಮ್ಮ ಮಾತೃಭೂಮಿಯ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದ ಸೈನಿಕರನ್ನು ಸ್ಮರಿಸಿಕೊಂಡಿದ್ದಾರೆ.

    ಅಕ್ಷಯ್ ಕುಮಾರ್
    ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು 1999 ರಲ್ಲಿ ಹುತಾತ್ಮರಾದ ಕೆಚ್ಚೆದೆಯ ಹೃದಯಗಳನ್ನು ಸ್ಮರಿಸಲು ಟ್ವೀಟ್ ಶೇರ್ ಮಾಡಿದ್ದಾರೆ. “ಹೃದಯದಲ್ಲಿ ಕೃತಜ್ಞತೆ ಮತ್ತು ತುಟಿಯ ಮೇಲೆ ಪ್ರಾರ್ಥನೆಯೊಂದಿಗೆ, ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ನಮ್ಮ ಕೆಚ್ಚೆದೆಯ ಹೃದಯಗಳನ್ನು ಸ್ಮರಿಸುತ್ತೇನೆ. ನಿಮ್ಮಿಂದಾಗಿ ನಾವು ಬದುಕುತ್ತಿದ್ದೇವೆ,’’ ಎಂದು ಬರೆದುಕೊಂಡಿದ್ದಾರೆ.

    ನಿಮ್ರತ್ ಕೌರ್
    ನಟಿ ನಿಮ್ರತ್ ಕೌರ್ ಅವರ ತಾಯಿ ಭಾರತೀಯ ಸೈನಿಕರಿಗೆ ಗೌರವ ಸಲ್ಲಿಸಲು ಮುಂಜಾನೆ ಆಯೋಜಿಸಲಾದ ಸೈಕ್ಲಿಂಗ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಬಗ್ಗೆ ಟ್ವೀಟ್ ಮಾಡಿ, “ಕಾರ್ಗಿಲ್ ವಿಜಯ್ ದಿವಸ್‌ನಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಅಪ್ರತಿಮ ತ್ಯಾಗ ಮತ್ತು ಶೌರ್ಯವನ್ನು ಸ್ಮರಿಸುತ್ತಿದ್ದೇನೆ. ನೋಯ್ಡಾದಲ್ಲಿ ನನ್ನ ಅಮ್ಮ, 20 ಕಿಮೀ ಸೈಕ್ಲಿಂಗ್ ಮ್ಯಾರಥಾನ್ ಅನ್ನು ಪೂರ್ಣಗೊಳಿಸಿದರು. ಕಾರ್ಗಿಲ್ ಯುದ್ಧದಲ್ಲಿ ವೀರರ ಸರ್ವೋಚ್ಚ ಸೇವೆಯನ್ನು ನಾವು ಎಂದಿಗೂ ಮರೆಯಬಾರದು” ಎಂದು ಪೋಸ್ಟ್ ಮಾಡಿದ್ದಾರೆ.

    ಯುವರಾಜ್ ಸಿಂಗ್
    ಭಾರತೀಯ ಸೇನೆಯ ತ್ಯಾಗವನ್ನು ಎಂದಿಗೂ ಮರೆಯಬಾರದು ಎಂದು ಕ್ರಿಕೆಟ್ ಪವರ್ ಹೌಸ್ ಯುವರಾಜ್ ಸಿಂಗ್ ಹೇಳಿದರು. “ನಮ್ಮ ರಾಷ್ಟ್ರದ ಕೆಚ್ಚೆದೆಯ ಹೃದಯಗಳಿಗೆ ನಾವು ಸಲ್ಲಿಸಬಹುದಾದ ನಿಜವಾದ ಗೌರವವೆಂದರೆ ಅವರ ತ್ಯಾಗವನ್ನು ಎಂದಿಗೂ ಮರೆಯದಿರುವುದು. ಅವರ ಕುಟುಂಬಗಳ ನಿಸ್ವಾರ್ಥ ಧೈರ್ಯವನ್ನು ಅಭಿನಂದಿಸುತ್ತೇನೆ” ಎಂದು ಯುವರಾಜ್ ಟ್ವೀಟ್ ಮಾಡಿದ್ದಾರೆ.

    ಅಭಿಷೇಕ್ ಬಚ್ಚನ್
    ಅಭಿಷೇಕ್ ಬಚ್ಚನ್ ಅವರು ಭಾರತದ ವಿಜಯದ ದೇಶಭಕ್ತಿಯ ಗ್ರಾಫಿಕ್ ಅನ್ನು ಹಂಚಿಕೊಂಡಿದ್ದು, ರಾಷ್ಟ್ರಕ್ಕೋಸ್ಕರ ತಮ್ಮ ಜೀವನವನ್ನು ತ್ಯಾಗ ಮಾಡಿದ ಸೈನಿಕರ ಅವಿರತ ಪ್ರಯತ್ನಕ್ಕಾಗಿ ವಂದಿಸಿದ್ದಾರೆ.

    ಸುದರ್ಶನ್ ಪಟ್ನಾಯಕ್
    ಕಲಾವಿದ ಸುದರ್ಶನ್ ಪಟ್ನಾಯಕ್ ದೇಶಭಕ್ತಿಯನ್ನು ಮರಳು ಕಲೆಯಲ್ಲಿ ರಚಿಸಿದರು. ಇದನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡ ಅವರು, “ಕಾರ್ಗಿಲ್ ವಿಜಯ್ ದಿವಸ್. ಭಾರತೀಯ ಸೇನೆಯ ವೀರ ಹುತಾತ್ಮರಿಗೆ ಶ್ರದ್ಧಾಂಜಲಿ. ಜೈ ಹಿಂದ್.” ಎಂದು ಬರೆದುಕೊಂಡಿದ್ದಾರೆ.

    ಖ್ಯಾತ ಗಾಯಕ ಸುರಿಂದರ್ ಶಿಂದ ಇನ್ನಿಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts