More

    ನಾನು ಉರ್ಫಿಯಂತೆ ಧೈರ್ಯಶಾಲಿಯಲ್ಲ: ಕರೀನಾ ಕಪೂರ್‌

    ಮುಂಬೈ: ಬಾಲಿವುಡ್​ ನಟಿ ಕರೀನಾ ಕಪೂರ್‌ ಮುಂಬೈನಲ್ಲಿರುವ ಫಿಜ್ಜಿ ಗೋಬ್ಲೆಟ್ ಹೊಸ ಅಂಗಡಿ ಓಪನಿಂಗ್ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಮಾಧ್ಯಮ ಮಿತ್ರರು ಉರ್ಫಿ ಜಾವೇಸ್ ಸ್ಟೈಲ್ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಕೆಲವು ನಿಮಿಷಗಳ ಕಾಲ ಯೋಚನೆ ಮಾಡಿ ಕರೀನಾ ಉತ್ತರ ಕೊಟ್ಟಿದ್ದಾರೆ.

    ನಾನು ಉರ್ಫಿಯಂತೆ ಧೈರ್ಯಶಾಲಿಯಲ್ಲ ಆದರೆ ಆಕೆ ಅತ್ಯಂತ ಧೈರ್ಯಶಾಲಿ ಮತ್ತು ಅತ್ಯಂತ ಧೈರ್ಯಶಾಲಿ ಎಂದು ನಾನು ಭಾವಿಸುತ್ತೇನೆ. ಫ್ಯಾಷನ್ ಅಂದ್ರೆ ಅಭಿವ್ಯಕ್ತಿ ಮತ್ತು ನಮ್ಮ ಸ್ವಾತಂತ್ರ್ಯ. ವಿಚಿತ್ರ ರೀತಿಯಲ್ಲಿ ಬಟ್ಟೆ ಡಿಸೈನ್ ಮಾಡಿದ್ದರೂ ಕೇರ್ ಮಾಡದೆ ತುಂಬಾ ಧೈರ್ಯದಿಂದ ಆಕೆ ಅದನ್ನು ಧರಿಸುವುದಕ್ಕೆ ಮಚ್ಚಬೇಕು. ಆಕೆಗೆ ಯಾವ ರೀತಿ ಬೇಕೋ ಅದೇ ರೀತಿ ಫ್ಯಾಶನ್​ ಮಾಡುತ್ತಾಳೆ. ನನ್ನ ಪ್ರಕಾರ ಇದೇ ಫ್ಯಾಷನ್ ಎಂದಿದ್ದಾರೆ.

    ಇದನ್ನೂ ಓದಿ: ಏ.1ರಿಂದ 2,000 ರೂ. ಕ್ಕಿಂತ ಹೆಚ್ಚಿನ ಯುಪಿಐ ವಹಿವಾಟುಗಳಿಗೆ 1.1% ವಿನಿಮಯ ಶುಲ್ಕ!
    ನಾವು ಕಂಫರ್ಟ್‌ ಹಾಗೂ ನಮಗೆ ಇಷ್ಟ ಪಟ್ಟ ರೀತಿಯಲ್ಲಿ ಬಟ್ಟೆ ಧರಿಸಬೇಕು. ಆಕೆಯ ಆತ್ಮವಿಶ್ವಾಸ ನನಗೆ ಇಷ್ಟವಾಗುತ್ತದೆ. ನಾನು ಕೂಡ ಆತ್ಮವಿಶ್ವಾಸವನ್ನು ನಂಬುವ ವ್ಯಕ್ತಿ ಹೀಗಾಗಿ ಅವಳಲ್ಲಿ ಆತ್ಮವಿಶ್ವಾಸ ಇರುವುದಕ್ಕೆ ನನಗೆ ಇಷ್ಟವಾಗುತ್ತಾಳೆ. ಹ್ಯಾಟ್ಸ್‌ ಆಫ್‌’ ಎಂದು ಉರ್ಫಿ ಜಾವೇದ್‌ ಎಂದು ಕರೀನಾ ಕಪೂರ್ ಮಾತನಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಉರ್ಫಿ ತನ್ನ ಟ್ವೀಟ್ ಪೋಸ್ಟ್‌ನಲ್ಲಿ “ಏನಪ್ಪಾ, ಕರೀನಾ ಅವರು ನನ್ನನ್ನು ಇಷ್ಟಪಡುತ್ತಾರೆ ಎಂದು ಹೇಳಿದ್ದಾರೆ ??? ಎಂದು ಪ್ರತಿಕ್ರಿಯಿಸಿದ್ದಾರೆ

    ಮತ್ತೊಬ್ಬರ ಮೇಲೆ ಕಾಮೆಂಟ್ ಮಾಡುವುದಕ್ಕೂ ಮುನ್ನ ನಟ-ನಟಿಯರು ಸಾವಿರ ಸಲ ಯೋಚನೆ ಮಾಡುತ್ತಾರೆ. ಆದರೆ ಕರೀನಾ ಕಪೂರ್ ಯಾವುದಕ್ಕೂ ಕೇರ್ ಮಾಡಿದ ತುಂಬಾ ಕೂಲ್ ಅಗಿ ‘ಉರ್ಫಿ ರೀತಿ ನನಗೆ ಧೈರ್ಯವಿಲ್ಲ…ಆಕೆಗೆ  ತುಂಬಾ ಧೈರ್ಯ ಎಂದು ಹೇಳುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

    ರಾಜ್ಯ ರಾಜಧಾನಿಯಲ್ಲಿ ಮುಂದಿನ‌ ಐದು ದಿನ ಮಳೆಯಾಗುವ ಸಾಧ್ಯತೆ: ಹವಾಮಾನ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts