More

    ಭುಗಿಲೆದ್ದಿತು ನಾಮಫಲಕ ವಿವಾದ, ಕರವೇ ಕಾರ್ಯಕರ್ತರಿಂದ ಮಸಿ…

    ಉತ್ತರಕನ್ನಡ: ರಾಜ್ಯದಲ್ಲಿ ಈಗಾಗಲೇ ಕಾವೇರಿರುವ ವಿವಿಧ ಸಂಘರ್ಷಗಳ ಜತೆಗೆ ಇದೀಗ ಭಾಷಾ ಸಂಘರ್ಷ ಮತ್ತೆ ಮುನ್ನೆಲೆಗೆ ಬಂದಿದ್ದು, ನಾಮಫಲಕವೊಂದು ಅದಕ್ಕೆ ಮುನ್ನುಡಿ ಹಾಡಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ ಈ ನಾಮಫಲಕ ವಿವಾದ ಭುಗಿಲೆದ್ದಿದ್ದು, ಕರ್ನಾಟಕ ರಕ್ಷಣಾ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ.

    ಕಾರವಾರದಲ್ಲಿ ಕಾಣಿಸಿಕೊಂಡಿರುವ ಹಿಂದಿ ಹಾಗೂ ಕೊಂಕಣಿ-ಮರಾಠಿ ಮಿಶ್ರಿತ ನಾಮಫಲಕಗಳ ವಿರುದ್ಧ ಕರವೇ ಪ್ರವೀಣ್​ಕುಮಾರ್​ ಶೆಟ್ಟಿ ಬಣದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ, ಅಂಥ ಫಲಕಗಳಿಗೆ ಮಸಿ ಬಳಿದು ವಿರೋಧ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದ್ದಾರೆ.

    ಕೆಲ ದಿನಗಳಿಂದ ಕಾರವಾರ ನಗರಸಭೆ ಕನ್ನಡದ ಜೊತೆ ಕೊಂಕಣಿ-ಮರಾಠಿ ಮಿಶ್ರಿತ ಹಿಂದಿ ನಾಮಫಲಕ ಬರೆಸಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಬಳಿ ನಗರಸಭೆ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರು ನಗರಸಭೆ ಆಯುಕ್ತರಿಗೆ ಎಚ್ಚರಿಕೆಯನ್ನು ನೀಡಿದರು.

    ಪೊಲೀಸ್ ದಂಡ ವಿಧಿಸಿದ್ದಕ್ಕೆ ಸ್ಟೇಷನ್​ ಪವರ್​ ಕಟ್ ಮಾಡಿದ ಲೈನ್​ಮ್ಯಾನ್​; ಠಾಣೆಯಲ್ಲಿ ಮೀಟರೇ ಇರ್ಲಿಲ್ಲ!

    ಕದ್ದವರ ಸುಳಿವು ಕೊಟ್ಟ ಬ್ಲೇಡ್​; 400 ಅಂಗಡಿಗಳಿಗೆ ಅಲೆದಾಡಿ ಕಳ್ಳರನ್ನು ಪತ್ತೆ ಮಾಡಿದ ಪೊಲೀಸರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts