More

    ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಶರಣ ಸಂಸ್ಕೃತಿ ಉತ್ಸವಕ್ಕೆ 40 ಕ್ವಿಂಟಾಲ್ ಅಕ್ಕಿ ರವಾನೆ

    ಕಾರಟಗಿ: ಹಾವೇರಿ ಜಿಲ್ಲೆ ನರಸೀಪುರದ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಶರಣ ಸಂಸ್ಕೃತಿ ಉತ್ಸವ ಮತ್ತು ವಚನ ಮಹಾರಥೋತ್ಸವ ದಾಸೋಹಕ್ಕೆ ತಾಲೂಕಿನ ಗಂಗಾಮತ ಸಮುದಾಯದವರು 40 ಕ್ವಿಂಟಾಲ್ ಅಕ್ಕಿಯನ್ನು ವಾಹನ ಮೂಲಕ ಕಳುಹಿಸಿದರು.

    ಅಂಬಿಗರ ಚೌಡಯ್ಯ ಗುರುಪೀಠದ ನಿರ್ದೇಶಕ ತಾಯಪ್ಪ ಕೋಟ್ಯಾಳ ಮಾತನಾಡಿ, ತಾಲೂಕಿನ ವಿವಿಧ ಗ್ರಾಮಗಳ ಸಮುದಾಯದವರು ಉತ್ಸವಕ್ಕೆ ಬೆಂಬಲ ನೀಡಿದ್ದು, ದೇಣಿಗೆ ನೀಡಿದ್ದಾರೆ. ಮಠದಲ್ಲಿ ವಚನ ಗ್ರಂಥ ರಥೋತ್ಸವ, ಪೀಠಾಧೀಶ್ವರ ಶಾಂತ ಭೀಷ್ಮ ಚೌಡಯ್ಯನವರ ಪೀಠಾರೋಹಣೋತ್ಸವ, ಲಿಂ. ಶಾಂತಮುನಿ ಸ್ವಾಮೀಜಿಗಳ ಪುಣ್ಯ ಸ್ಮರಣೋತ್ಸವದ ಜತೆಗೆ ಸಾಮೂಹಿಕ ವಿವಾಹಗಳು ಜರುಗಲಿವೆ. ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದರು.

    ಪಟ್ಟಣದ ಡಾ. ರಾಜ್ ಕುಮಾರ ಕಲಾಮಂದಿರದ ಆವರಣದಲ್ಲಿ ತಾಲೂಕಿನ ಬೂದಗುಂಪಾ, ಈಳೀಗನೂರು, ಕಕ್ಕರಗೋಳ, ಮುಸ್ಟೂರು, ಬೇವಿನಾಳ, ಹಗೆದಾಳ ಸೇರಿ ಇತರ ಗ್ರಾಮಗಳ ಗ್ರಾಮಸ್ಥರು ವಾಹನಕ್ಕೆ ಪೂಜೆ ಸಲ್ಲಿಸಿ, ವಾದ್ಯ ವೃಂದಗಳ ಮೆರವಣಿಗೆ ಮೂಲಕ ದೇಣಿಗೆಯನ್ನು ಕಳುಹಿಸಿಕೊಡಲಾಯಿತು. ಸಮುದಾಯದ ತಾಲೂಕು ಅಧ್ಯಕ್ಷ ಅಯ್ಯಪ್ಪ ಸಂಗಟಿ, ಮುಖಂಡರಾದ ಶರಣಪ್ಪ ಕಾಯಿಗಡ್ಡೆ, ಹನುಮಂತಪ್ಪ ಬೇವಿನಾಳ, ವೀರೇಶ ಬೇವಿನಾಳ, ಕಾರ್ಯದರ್ಶಿ ರಮೇಶ ಕಾಟಾಪುರ, ಸಣ್ಣಲಿಂಗಪ್ಪ ಕೋಟ್ಯಾಳ, ಹನುಮಂತಪ್ಪ ಸಿಂಗಾಪುರ, ನಾಗಪ್ಪ ಬಡಿಗೇರ್, ರಾಮಣ್ಣ ಬಡಿಗೇರ್, ಮಲ್ಲಯ್ಯ ಬೇವಿನಾಳ ಸೇರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts