More

    ಕಾರಟಗಿಗೆ ಪದವಿ ಕಾಲೇಜು ಮಂಜೂರು ಮಾಡಿ: ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ

    ಕಾರಟಗಿ: ಪದವಿ ಮಹಾವಿದ್ಯಾಲಯಕ್ಕೆ ಆಗ್ರಹಿಸಿ ಪಟ್ಟಣದ ಕೆರೆಬಸವೇಶ್ವರ, ವಿದ್ಯಾಭಾರತಿ, ಕಸ್ತೂರಿ ಬಾ ಹಾಗೂ ಸರ್ಕಾರಿ ಪಪೂ ಕಾಲೇಜಿನ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಎಬಿವಿಪಿ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

    ಎರಡು ದಶಕಗಳಿಂದ ಪದವಿ ಕಾಲೇಜು ಮಂಜೂರುಗೊಳಿಸುವಂತೆ ಹೋರಾಟ ನಡೆಸಲಾಗುತ್ತಿದೆ. 2014-15ರಲ್ಲಿ ಪ್ರೊ.ಹಸನ್‌ಮಿಯಾ, 2018-19ರಲ್ಲಿ ಡಾ.ಸಿ.ಬಿ.ಚಿಲ್ಕರಾಗಿ ನೇತೃತ್ವದ ಸಮಿತಿ ಕಾರಟಗಿಗೆ ಪದವಿ ಕಾಲೇಜು ಅಗತ್ಯವಿದೆಯೆಂದು ಉನ್ನತ ಶಿಕ್ಷಣ ಇಲಾಖೆ ಮೂಲಕ ಸರ್ಕಾರಕ್ಕೆ ವರದಿ ಸಲ್ಲಿಸಿವೆ. ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಪಟ್ಟಣ ಹಾಗೂ ಸುತ್ತಲಿನ ಸಾವಿರಾರು ವಿದ್ಯಾರ್ಥಿಗಳು ಪದವಿ ಶಿಕ್ಷಣಕ್ಕಾಗಿ ಗಂಗಾವತಿ, ಸಿಂಧನೂರಿಗೆ ತೆರಳುತ್ತಿದ್ದಾರೆ. ಆರ್ಥಿಕ ಹೊರೆಯಿಂದಾಗಿ ಬಡಕುಟುಂಬದ ಮಕ್ಕಳ ಉನ್ನತ ಶಿಕ್ಷಣದ ಕನಸು ನನಸಾಗುತ್ತಿಲ್ಲ. ಶಾಸಕ ಬಸವರಾಜ ದಢೇಸುಗೂರು ಕೂಡಲೇ ಸರ್ಕಾರದ ಮೇಲೆ ಒತ್ತಡ ಹೇರಿ ಪಟ್ಟಣಕ್ಕೆ ಪದವಿ ಕಾಲೇಜು ಮಂಜೂರು ಮಾಡಿಸಬೇಕು. ಇಲ್ಲವಾದರೆ ಭವಿಷ್ಯದಲ್ಲಿ ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದರು.

    ಪಟ್ಟಣದ ಸರ್ಕಾರಿ ಪಪೂ ಕಾಲೇಜಿನಿಂದ ವಿಶೇಷ ಎಪಿಎಂಸಿಯಲ್ಲಿನ ತಹಸಿಲ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ ಬಸವರಾಜಗೆ ಮನವಿ ಸಲ್ಲಿಸಲಾಯಿತು.
    (( ಬಾಕ್ಸ್ ))
    ವಿಜಯವಾಣಿ ಧ್ವನಿಸಿತ್ತು
    ಕಾರಟಗಿ ಪಟ್ಟಣಕ್ಕೆ ಡಿಗ್ರಿ ಕಾಲೇಜು ಮಂಜೂರಾತಿಗಾಗಿ ಎರಡು ದಶಕ ನಡೆದ ಹೋರಾಟದ ಕುರಿತು ‘ಕಾರಟಗಿಗೆ ದೊರೆಯುವುದೇ ಪದವಿ ಕಾಲೇಜು?’ ಎನ್ನುವ ಶೀರ್ಷಿಕೆಯಡಿ ಅನೇಕರ ಅಭಿಪ್ರಾಯದೊಂದಿಗೆ ‘ಲೌಡ್‌ಸ್ಪೀಕರ್’ ವಿಸ್ತೃತ ವರದಿ ಪ್ರಕಟಿಸಿತ್ತು. ಶಾಸಕ ಬಸವರಾಜ ದಢೇಸುಗೂರು, ಮಾರ್ಚ್ ಬಜೆಟ್‌ನಲ್ಲಿ ಮಂಜೂರು ಮಾಡಿಸುವ ಭರವಸೆ ನೀಡಿದ್ದರು. ಆದರೆ, ಹಲವು ತಿಂಗಳು ಕಳೆದರೂ ಭರವಸೆ ಈಡೇರದಿರುವುದು ವಿದ್ಯಾರ್ಥಿಗಳು ಹಾಗೂ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts