More

    ಮೈಲಾಪುರಕ್ಕೆ ಮೂಲಸೌಕರ್ಯ ಒದಗಿಸಿ; ಕಾರಟಗಿವರೆಗೆ ಪಾದಯಾತ್ರೆ ಕೈಗೊಂಡ ಗ್ರಾಮಸ್ಥರು

    ಕಾರಟಗಿ: ಗ್ರಾಮಕ್ಕೆ ಮೂಲ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಮೈಲಾಪುರದ ಗ್ರಾಮಸ್ಥರು ಶುಕ್ರವಾರ ಪಟ್ಟಣದವರೆಗೆ ಪಾದಯಾತ್ರೆ ನಡೆಸಿ ತಾಪಂ ಹಾಗೂ ಶಾಸಕರ ಕಚೇರಿಗೆ ಮನವಿ ಸಲ್ಲಿಸಿದರು.

    ಗ್ರಾಮಕ್ಕೆ ಶುದ್ಧ ಕುಡಿವ ನೀರು, ಸಿಸಿ ರಸ್ತೆ, ಚರಂಡಿ ಜತೆಗೆ ಅಗತ್ಯ ಸೌಕರ್ಯಗಳಿಲ್ಲದೆ ಜನ ಪರದಾಡುತ್ತಿದ್ದಾರೆ. ಜಲಜೀವನ್ ಮಿಷನ್ ಯೋಜನೆ ಕಾಮಗಾರಿ ನನೆಗುದಿಗೆ ಬಿದ್ದಿದೆ. ಮಳೆಯಿಂದಾಗಿ ಗ್ರಾಮದ ರಸ್ತೆಗಳೆಲ್ಲ ಕೆಸರು ಗದ್ದೆಗಳಂತಾಗಿವೆ. ರಸ್ತೆಯಲ್ಲಿ ಕೆಲದಿನಗಳ ಹಿಂದೆ ವೃದ್ಧ ಮಹಿಳೆ ಬಿದ್ದು ಕಾಲು ಮುರಿದಿದೆ. ಅಲ್ಲಲ್ಲಿ ನೀರು ನಿಂತುಕೊಂಡು ಸೊಳ್ಳೆಗಳ ಕಾಟ ಹೆಚ್ಚಾಗಿದ್ದು ಅನಾರೋಗ್ಯದ ಭೀತಿ ಎದುರಾಗಿದೆ. ವಿದ್ಯಾರ್ಥಿಗಳು, ಮಹಿಳೆಯರು, ವೃದ್ಧರು ರಸ್ತೆಗಳಲ್ಲಿ ಓಡಾಡದಂತಾಗಿದೆ.ಇನ್ನು ಸಂಕನಾಳ ರಸ್ತೆಗಳಲ್ಲಿ ತೆಗೆದ ಬೃಹತ್ ಕೆರೆಗಳಿಂದಾಗಿ ಎಸ್ಸಿ ಹಾಗೂ ಎಸ್ಟಿ ಕಾಲನಿಯ ಮನೆಗಳಲ್ಲಿ ನೀರಿನ ತೇವತೆಗೆದುಕೊಂಡಿದೆ. ಹೀಗೆ ಮುಂದುವರಿದರೆ ಭವಿಷ್ಯದಲ್ಲಿ ಇಡೀ ಗ್ರಾಮದ ಮನೆಗಳು ತೇವದಿಂದ ಕುಸಿದು ಬೀಳಲಿವೆ. ಇದಕ್ಕೆ ಯಾರೂ ಕಡಿವಾಣ ಹಾಕುತ್ತಿಲ್ಲ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕಣ್ಣಿದ್ದರೂ ಕುರುಡರಂತಾಗಿದ್ದಾರೆಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

    ಗ್ರಾಮದಿಂದ ಹಲಗೆ ಬಾರಿಸಿಕೊಂಡು 6 ಕಿಮೀ ಪಾದಯಾತ್ರೆ ಮೂಲಕ ಆಗಮಿಸಿದ ಪ್ರತಿಭಟನಾಕಾರರು ತಾಪಂ ತಾಲೂಕು ಯೋಜನಾ ಅಧಿಕಾರಿ ರಾಘವೇಂದ್ರ ಹಾಗೂ ಶಾಸಕರ ಪುತ್ರ ಸುರೇಶ ದಢೇಸುಗೂರುಗೆ ಮನವಿ ಸಲ್ಲಿಸಿದರು. ಗ್ರಾಮಸ್ಥರಾದ ಬಾಲಪ್ಪ ತಳವಾರ, ಹನುಮಮ್ಮ, ಮರಿಯಮ್ಮ, ನಿಂಗಪ್ಪ ಹರಿಜನ, ಬಾಗಪ್ಪ ತಳವಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts