More

    ಮಕ್ಕಳಿಗೆ ವಿದ್ಯೆ ನೀಡುವ ಶಿಕ್ಷಕರು ಶಿವನ ಸ್ವರೂಪ; ಸಂಸದ ಸಂಗಣ್ಣ ಕರಡಿ ಬಣ್ಣನೆ

    ಕಾರಟಗಿ: ಜೀವನದಲ್ಲಿ ತಾಯಿ ಮೊದಲ ಗುರುವಾದರೆ, ಶಿಕ್ಷಕ ಎರಡನೇ ಗುರು ಹಾಗೂ ಶಿವನ ಸ್ವರೂಪ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.

    ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಶರಣಬಸವೇಶ್ವರ ವಿದ್ಯಾಸಂಸ್ಥೆ, ಕಾರಟಗಿ ಹಾಗೂ ಕನಕಗಿರಿ ಖಾಸಗಿ ಶಾಲೆಗಳ ಒಕ್ಕೂಟದಿಂದ ಭಾನುವಾರ ಹಮ್ಮಿಕೊಂಡಿದ್ದ ಖಾಸಗಿ ಶಾಲೆಗಳ ಎಲ್ಲ ಶಿಕ್ಷಕರು, ಸಿಬ್ಬಂದಿಗೆ ಆಹಾರ ಕಿಟ್ ವಿತರಣೆ, ಅನುದಾನಿತ ಶಾಲಾ 10ನೇ ತರಗತಿ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ವಿತರಣೆ ಮತ್ತು ಎಸ್ಸೆಸ್ಸೆಲ್ಸಿ ಆಂಗ್ಲ, ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ವಠಾರ ತರಗತಿಗಳ ಪ್ರಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಮೇಣದ ಬತ್ತಿ ಹೇಗೆ ತನ್ನನ್ನು ಸುಟ್ಟುಕೊಂಡು ಬೆಳಕು ನೀಡುತ್ತದೆಯೋ ಅದೇ ರೀತಿ ಶಿಕ್ಷಕರು ಸಹ ವಿದ್ಯಾರ್ಥಿಗಳನ್ನು ಕತ್ತಲೆಯಿಂದ ಬೆಳಕಿನಡೆಗೆ ಮುನ್ನೆಡೆಸುತ್ತಾರೆ. ಸದೃಢ ರಾಷ್ಟ್ರ ನಿರ್ಮಾಣಕ್ಕೆ ಶಿಕ್ಷಣ ಅಗತ್ಯವಾಗಿದ್ದು, ಪ್ರತಿಯೊಬ್ಬರೂ ಶಿಕ್ಷಿತರಾಗಬೇಕು ಎಂದರು.

    ಶಾಸಕ ಪರಣ್ಣ ಮುನವಳ್ಳಿ, ಶಾಸಕ ಬಸವರಾಜ ದಢೇಸುಗೂರು, ಖಾಸಗಿ ಶಿಕ್ಷಣ ಶಾಲೆಗಳ ಜಿಲ್ಲಾ ಕಾರ್ಯದರ್ಶಿ ಶಿವಕುಮಾರ ಕುಕನೂರು, ಶರಣಬಸವೇಶ್ವರರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಿ.ಜಿ. ಅರಳಿ, ಬಿಇಒ ಸೋಮಶೇಖರಗೌಡ ಮಾತನಾಡಿದರು. ಎಪಿಎಂಸಿ ಅಧ್ಯಕ್ಷ ಸೋಮಶೇಖರಗೌಡ ಮುಸ್ಟೂರು, ಶರಣಬಸವೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಿ.ಜಿ. ಅರಳಿ, ಪುರಸಭೆ ಸದಸ್ಯ ಜಿ. ತಿಮ್ಮನಗೌಡ, ಡಿಡಿಪಿಐ ದೊಡ್ಡಬಸಪ್ಪ ನೀರಲಕೇರಿ, ಬಿಇಒ ಸೋಮಶೇಖರಗೌಡ,

    ಪ್ರಮುಖರಾದ ಚಂದ್ರಶೇಖರ ಮುಸಾಲಿ, ನಾಗರಾಜ ಬಿಲ್ಗಾರ್, ಅಮರೇಶ ಕುಳಗಿ, ವಿರೇಶ ಸಾಲೋಣಿ, ಗಂಗಾಧರ ಸಜ್ಜನ್, ಗಿರೀಶ್ ಕಣವಿ, ಮಂಜುನಾಥ ಮಸ್ಕಿ ಸೇರಿ ಇತರರಿದ್ದರು.

    ಮಕ್ಕಳಿಗೆ ವಿದ್ಯೆ ನೀಡುವ ಶಿಕ್ಷಕರು ಶಿವನ ಸ್ವರೂಪ; ಸಂಸದ ಸಂಗಣ್ಣ ಕರಡಿ ಬಣ್ಣನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts