More

    ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಎರಡೂ ರಸ್ತೆಗಳ ಅಭಿವೃದ್ಧಿ: ಶಾಸಕ ಬಸವರಾಜ ದಢೇಸುಗೂರು ಹೇಳಿಕೆ

    ಕಾರಟಗಿ: ವಿಶೇಷ ಎಪಿಎಂಸಿ (ಕಾರಟಗಿ-ಚನ್ನಳ್ಳಿ) ಹಾಗೂ ಆರ್‌ಜಿ ಮುಖ್ಯರಸ್ತೆಯಿಂದ ಕೊಪ್ಪಳ ಗ್ರೀನ್ ಪವರ್ ಲಿ.(ಕೆಜಿಪಿಎಲ್) ಮೂಲಕ ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಎರಡೂ ರಸ್ತೆಗಳನ್ನು ಅಭಿವೃದ್ಧಿಪಡಿಸುವುದಾಗಿ ಶಾಸಕ ಬಸವರಾಜ ದಢೇಸುಗೂರು ಹೇಳಿದರು.

    ಪಟ್ಟಣದ ರೈಲ್ವೆ ನಿಲ್ದಾಣದ ಬಳಿ ಕೆಜಿಪಿಎಲ್ ಮೂಲಕ ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ 85 ಲಕ್ಷ ರೂ.ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿದರು. ಕಾರಟಗಿ-ಚನ್ನಳ್ಳಿ ರಸ್ತೆ ಅಭಿವೃದ್ಧಿಪಡಿಸಲು ರೈತರಿಂದ ಭೂಸ್ವಾಧೀನ ಪಡೆದು ಪರಿಹಾರಧನ ವಿತರಿಸಬೇಕು. ಇದಕ್ಕೆ ಹೆಚ್ಚಿನ ಕಾಲಾವಕಾಶ ತಗಲುವುದರಿಂದ ಸದ್ಯ ಕೆಜಿಪಿಎಲ್ ರಸ್ತೆಯನ್ನೇ ಅಭಿವೃದ್ಧಿಪಡಿಸಿ ಓಡಾಟಕ್ಕೆ ಅನುಕೂಲ ಕಲ್ಪಿಸಲಾಗುವುದು ಎಂದರು.

    ರೈತರ ಮನವಿ: ಭೂಮಿ ಪೂಜೆ ವೇಳೆ ಸ್ಥಳದಲ್ಲಿದ್ದ ರೈತರು, ಕಾರಟಗಿ-ಚನ್ನಳ್ಳಿ ರಸ್ತೆ ಅಭಿವೃದ್ಧಿಪಡಿಸುವಂತೆ ಶಾಸಕ ದಢೇಸುಗೂರು ಮುಂದೆ ಅಲವತ್ತುಕೊಂಡರು. ಈಗಾಗಲೇ ಸಂಸದ ಸಂಗಣ್ಣ ಕರಡಿ ಸೂಚನೆ ಮೆರೆಗೆ ಲೋಕೋಪಯೋಗಿ ಇಲಾಖೆ ರಸ್ತೆ ಸರ್ವೇ ನಡೆಸಿ ಅಂದಾಜು ಪಟ್ಟಿ ಸಿದ್ಧಪಡಿಸುವ ಜತೆಗೆ ಜಿಲ್ಲಾಧಿಕಾರಿಗೂ ಸಲ್ಲಿಸಿದೆ. ಈ ರಸ್ತೆ ಅಭಿವೃದ್ಧಿಪಡಿಸುವುದರಿಂದ ರೈಲ್ವೆ ನಿಲ್ದಾಣಕ್ಕೆ ಸಮೀಪವಾಗಲಿದೆ. ಸಾರ್ವಜನಿಕರು ಕಾಲ್ನಡಿಗೆಯಲ್ಲಿ ನಿಲ್ದಾಣಕ್ಕೆ ತೆರಳಬಹುದು. ಅಲ್ಲದೆ, ರಸ್ತೆಯ ಅಕ್ಕಪಕ್ಕ ಸಣ್ಣಪುಟ್ಟ ರೈತರ ಜಮೀನುಗಳು ಇರುವುದರಿಂದ ಭವಿಷ್ಯದಲ್ಲಿ ವ್ಯಾಪಾರ-ವಹಿವಾಟು ವೃದ್ಧಿಯಾಗಲಿದೆ ಎಂದರು.

    ಕಾರಟಗಿ-ಕನಕಗಿರಿ ಮುಖ್ಯರಸ್ತೆಯಿಂದ ಬೇವಿನಾಳ, ಬಸಾಪುರ ಸೀಮೆವರೆಗೆ 65 ಲಕ್ಷ ರೂ. ವೆಚ್ಚದ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಲಾಯಿತು. ಪುರಸಭೆ ಸದಸ್ಯರಾದ ಈಶಪ್ಪ ಇಟ್ಟಂಗಿ, ರಾಜಶೇಖರ ಸಿರಿಗೇರಿ, ಸೋಮಶೇಖರ ಬೇರ‌್ಗಿ, ರಮೇಶ ನಾಯಕ, ಜಿಪಂ ಮಾಜಿ ಅಧ್ಯಕ್ಷ ಅಮರೇಶ ಕುಳಗಿ, ಮಾಜಿ ಸದಸ್ಯ ವೀರೇಶ ಸಾಲೋಣಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts