More

    ನೆಪೋಟಿಸಂ ಎಫೆಕ್ಟ್​: ‘ಗುಂಜನ್​ ಸಕ್ಸೇನಾ’ ಟ್ರೈಲರ್​ನಲ್ಲಿ ಕರಣ್​ ಹೆಸರೇ ಇಲ್ಲ

    ಬೋನಿ ಕಪೂರ್​ ಮತ್ತು ಶ್ರೀದೇವಿ ಅವರ ಮಗಳು ಜಾಹ್ನವಿ ಅವರ ಎರಡನೆಯ ಚಿತ್ರ ‘ಗುಂಜನ್​ ಸಕ್ಸೇನಾ – ದಿ ಕಾರ್ಗಿಲ್​ ಗರ್ಲ್​’ ಚಿತ್ರವು ಇದೇ ಆಗಸ್ಟ್​ 12ಕ್ಕೆ ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆಯಾಗುತ್ತಿದೆ. ಅದಕ್ಕೆ ಮುಂಚಿತವಾಗಿ ಚಿತ್ರದ ಟ್ರೇಲರ್​ ಬಿಡುಗಡೆಯಾಗಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ, ಟ್ರೇಲರ್​ನಲ್ಲಿ ಕರಣ್​ ಜೋಹರ್​ ಅವರೇ ಹೆಸರಿಲ್ಲ ಎನ್ನುವುದು ಹಲವರಿಗೆ ಆಶ್ಚರ್ಯ ತರಿಸಿದೆ.

    ಜಾಹ್ನವಿ ಅವರನ್ನು ‘ಧಡಕ್​’ ಎಂಬ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಪರಿಚಯಿಸಿದ್ದು ಕರಣ್​ ಜೋಹರ್​. ಆ ನಂತರ ಅವರು ‘ಗುಂಜನ್​ ಸಕ್ಸೇನಾ – ದಿ ಕಾರ್ಗಿಲ್​ ಗರ್ಲ್​’ ಚಿತ್ರವನ್ನು ನಿರ್ಮಿಸಿದ್ದಾರೆ. ಆದರೆ, ಚಿತ್ರದ ಟ್ರೇಲರ್​ನಲ್ಲಾಗಲೀ, ಪೋಸ್ಟರ್​ಗಳಲ್ಲಾಗಲೀ ಎಲ್ಲೂ ಕರಣ್ ಜೋಹರ್​ ಅವರ ಹೆಸರು ಇಲ್ಲ. ಯಾಕಿಲ್ಲ ಎಂದರೆ ಅದಕ್ಕೆ ಕಾರಣ ನೆಪೋಟಿಸಂ (ಸ್ವಜನಪಕ್ಷಪಾತ) ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: ದಶಕದ ಹಿಂದೆಯೇ ಲಾಲ್​ ಸಿಂಗ್​ ಛಡ್ಡಾ ಸ್ಕ್ರಿಪ್ಟ್ ಸಿದ್ಧ; ಆಮೀರ್​ ಬಗ್ಗೆ ಅತುಲ್​ ಹೇಳುವುದೇನು?

    ಹೌದು, ಜಾಹ್ನವಿ ಕಪೂರ್​ ಸೇರಿದಂತೆ ಹಲವು ಸ್ಟಾರ್​ ಮಕ್ಕಳನ್ನು ಕರಣ್​ ಜೋಹರ್​ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಅದೇ ಅವರಿಗೆ ಮುಳುವಾಗಿ ಪರಿಣಮಿಸಿದೆ ಎಂದರೆ ತಪ್ಪಿಲ್ಲ. ಬರೀ ಸ್ಟಾರ್​ ಮಕ್ಕಳನ್ನು ಮಾತ್ರ ಪೋಷಿಸುತ್ತಾರೆ ಮತ್ತು ಹೊರಗಿನಿಂದ ಬಂದವರನ್ನು ಕಡೆಗಣಿಸುತ್ತಾರೆ ಎಂಬ ಆರೋಪ ಕರಣ್​ ಮೇಲೆ ಇತ್ತೀಚಿನ ದಿನಗಳಲ್ಲಿ ವಿಪರೀತ ಕೇಳಿ ಬರುತ್ತಿದೆ.

    ಇಂತಹ ಸಂದರ್ಭದಲ್ಲಿ ‘ಗುಂಜನ್​ ಸಕ್ಸೇನಾ – ದಿ ಕಾರ್ಗಿಲ್​ ಗರ್ಲ್​’ ಚಿತ್ರದಲ್ಲಿ ಮತ್ತೆ ಕರಣ್​ ಜೋಹರ್​ ಹೆಸರು ಕಾಣಿಸಿಕೊಂಡರೆ, ನಾಳೆ ಚಿತ್ರಕ್ಕೆ ಸಮಸ್ಯೆ ಆಗಬಹುದು, ಜನ ನೆಪೋಟಿಸಂ ಎಂಬ ಕಾರಣವನ್ನು ಮುಂದಿಟ್ಟುಕೊಂಡು ಚಿತ್ರವನ್ನು ನೋಡದಿರಬಹುದು ಎಂಬ ಶಂಕೆ ಚಿತ್ರತಂಡದವರನ್ನು ಸಹಜವಾಗಿಯೇ ಕಾಡಿದೆ. ಅದೇ ಕಾರಣಕ್ಕೆ, ಚಿತ್ರದ ಪೋಸ್ಟರ್​ ಮತ್ತು ಟ್ರೇಲರ್​ನಲ್ಲಿ ಅವರ ಹೆಸರನ್ನು ಕೈಬಿಡಲಾಗಿದೆ ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: 100 ಕೋಟಿಯಾಗಲಿ, 15 ಕೋಟಿ ಬಜೆಟ್​ನ ಸಿನಿಮಾನೇ ಆಗಲಿ ನೋಡುಗ ವರ್ಗ ಮಾತ್ರ ಒಂದೇ; ಸಿದ್ಧೀಕಿ​

    ಬರೀ ಕರಣ್​ ಮತ್ತು ಧರ್ಮ ಪ್ರೊಡಕ್ಷನ್ಸ್​ ಹೆಸರು ಬಿಟ್ಟರೆ ನೂರು ಪ್ರಶ್ನೆ ಏಳುತ್ತವೆ. ಹಾಗಾಗಿ ಯಾರ ಹೆಸರೂ ಬೇಡ ಎಂದು ಚಿತ್ರತಂಡ ತೀರ್ಮಾನಿಸಿದಂತಿದೆ. ಹಾಗಾಗಿ ಬರೀ ಕರಣ್ ಹೆಸರಷ್ಟೇ ಅಲ್ಲ, ನಿರ್ದೇಶಕ ಶರಣ್​ ಶರ್ಮಾ ಸೇರಿದಂತೆ ಯಾರೊಬ್ಬರ ಹೆಸರನ್ನೂ ಪೋಸ್ಟರ್​ ಅಥವಾ ಟ್ರೇಲರ್​ನಲ್ಲಿ ಹಾಕಿಲ್ಲ. ಬರೀ ಜಾಹ್ನವಿ ಹೆಸರನ್ನು ಮಾತ್ರ ಮುಂದಿಟ್ಟುಕೊಂಡು ಚಿತ್ರ ಬಿಡುಗಡೆ ಮಾಡಲಾಗಿದೆ.

    ‘ಗುಂಜನ್​ ಸಕ್ಸೇನಾ – ದಿ ಕಾರ್ಗಿಲ್​ ಗರ್ಲ್​’ ಚಿತ್ರವು ಏಪ್ರಿಲ್​ನಲ್ಲೇ ಬಿಡುಗಡಯಾಗಬೇಕಿತ್ತು. ಆದರೆ, ಕರೊನಾ ಹಾವಳಿಯಿಂದ ಇದೀಗ ಚಿತ್ರಮಂದಿರದ ಬದಲಾಗಿ, ನೇರವಾಗಿ ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆಯಾಗುತ್ತಿದೆ.

    ಟೊರಾಂಟೊ ಸಿನಿಮೋತ್ಸವಕ್ಕೆ ಹೊರಟ ಶ್ರದ್ಧಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts