More

    ತಾನೂ ಅತ್ತು, ಅಪ್ಪ-ಅಮ್ಮನಿಗೂ ಕಣ್ಣೀರು ಹಾಕಿಸಿದ ರಣವೀರ್​ ಸಿಂಗ್​

    ದುಬೈ: ರಣವೀರ್​ ಸಿಂಗ್​ ಹೋದ ಕಡೆಗೆಲ್ಲಾ ಸಖತ್​ ಜೋಶ್​ ಇರುತ್ತದೆ. ಅವರು ಮಾಡುವ ಚೇಷ್ಟೆಗಳಿರಬಹುದು, ಅವರು ತೊಡುವ ಬಟ್ಟೆಗಳಿರಬಹುದು, ಅವರ ಮಾತು-ನಗು ಇರಬಹುದು … ಒಟ್ಟಾರೆ ರಣವೀರ್​ ಸಿಂಗ್​ ಎಂದರೆ ಭಯಂಕರ ಎನರ್ಜಿ ಎಂಬ ನಂಬಿಕೆ ಬಾಲಿವುಡ್​ನಲ್ಲಿದೆ.

    ಇದನ್ನೂ ಓದಿ: ಸದ್ದಿಲ್ಲದೆ ಹೊಸ ದಾಖಲೆ ಮಾಡಲು ಸಜ್ಜಾದ ಅಚ್ಯುತ್​ ಕುಮಾರ್; ಏನದು?

    ಆದರೆ, ಇದೇ ಮೊದಲ ಬಾರಿಗೆ, ರಣವೀರ್ ಸಿಂಗ್ ತಾವೂ ಭಾವೋದ್ವೇಗಕ್ಕೆ ಒಳಗಾಗುವುದರ ಜತೆಗೆ, ಇಡೀ ವಾತಾವರಣವನ್ನು ಭಾವೋದ್ವೇಗಗೊಳಿಸಿ, ತಮ್ಮ ತಂದೆ-ತಾಯಿ ಕಣ್ಣಲ್ಲಿ ನೀರು ಹಾಕಿಸಿದ್ದಾರೆ. ಇದಾಗಿದ್ದು, ದುಬೈನಲ್ಲಿ ಶನಿವಾರ ನಡೆದ ಫಿಲ್ಮ್‌ಫೇರ್ ಮಿಡಲ್ ಈಸ್ಟ್ ಅಚೀವರ್ಸ್ ನೈಟ್ 2022 (ಎಫ್‌ಎಫ್‌ಎಂಇಎಎನ್​ 2022) ಸಮಾರಂಭದಲ್ಲಿ ಅವರಿಗೆ ದಶಕದ ಸೂಪರ್​ಸ್ಟಾರ್​ ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ರಣವೀರ್​, ಚಿತ್ರರಂಗದಲ್ಲಿನ ತಮ್ಮ ಆರಂಭದ ದಿನಗಳನ್ನು ನೆನಪಿಸಿಕೊಂಡರು.

    ಪ್ರಶಸ್ತಿ ಸ್ವೀಕರಿಸಿ ದೂರದಲ್ಲಿ ಕೂತಿದ್ದ ತಮ್ಮ ಹೆತ್ತವರಾದ ಜಗಜಿತ್ ಸಿಂಗ್ ಭವ್ನಾನಿ ಮತ್ತು ಅಂಜು ಭವ್ನಾನಿ ಅವರನ್ನು ನೋಡಿ ಮಾತನಾಡಿದ ರಣವೀರ್​, ‘ಅಪ್ಪಾ ನಿಮಗೆ ನೆನಪಿದೆಯಾ? 12 ವರ್ಷಗಳ ಹಿಂದೆ ನಾನು ನನ್ನ ಪೋರ್ಟ್‌ಫೋಲಿಯೋ ಮಾಡಿಸುವುದಕ್ಕೆ ಮುಂದಾಗಿದ್ದೆ. ಅದಕ್ಕೆ 50 ಸಾವಿರ ವೆಚ್ಚವಾಗುತ್ತಿತ್ತು. ದುಬಾರಿ ಎಂಬ ಕಾರಣಕ್ಕೆ ಸುಮ್ಮನಿದ್ದೆ. ಆಗ ನೀವು ನನಗೆ ದುಡ್ಡು ಕೊಟ್ಟು ಪೋರ್ಟ್‌ಫೋಲಿಯೋ ಮಾಡಿಸುವುದಕ್ಕೆ ಸಹಾಯ ಮಾಡಿದಿರಿ. ಅದರಿಂದ ನಾನು ಇವತ್ತು ಇಲ್ಲಿ ನಿಂತಿದ್ದೇನೆ’ ಎಂದು ಹೇಳಿದಾಗ ಅವರ ಕಣ್ಣಲ್ಲೂ ನೀರಿತ್ತು ಮತ್ತು ಇದನ್ನು ನೋಡಿ ಅವರ ಹೆತ್ತವರು ಸಹ ಕಣ್ಣೀರು ಹಾಕಿದರು.

    ಇದನ್ನೂ ಓದಿ: ‘ಕೆಜಿಎಫ್​’ ಎನ್ನುವುದು ಕಾನ್ಫಿಡೆನ್ಸ್​; ‘ಕಾಂತಾರ’ ಎನ್ನುವುದು ಎಮೋಷನ್​ … ರವಿಚಂದ್ರನ್​ ವ್ಯಾಖ್ಯಾನ

    ಈ ಸಮಾರಂಭದಲ್ಲಿ. ಜಾಹ್ನವಿ ಕಪೂರ್, ಗೋವಿಂದ, ಸನ್ನಿ ಲಿಯೋನ್ ಮುಂತಾದ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಭಾಗವಹಿಸಿದ್ದರು.

    ಬೆಂಗಳೂರು ಮೂಲದ ಉದ್ಯಮಿಯನ್ನು ಮದುವೆಯಾಗ್ತಾರಾ ಮಾನುಷಿ ಛಿಲ್ಲರ್?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts