More

    ‘ಕಾಂತಾರ’ಕ್ಕೀಗ ಕಾನೂನುಕ್ರಮದ ‘ಕಿರಿಕ್​’: ಯಶಸ್ಸಿನ ಓಟಕ್ಕೆ ಬ್ರೇಕ್​ ಹಾಕುವ ಯತ್ನವೋ?

    ಬೆಂಗಳೂರು: ಹೊಂಬಾಳೆ ಫಿಲ್ಮ್ಸ್​ ನಿರ್ಮಾಣ ಮತ್ತು ರಿಷಬ್​ ಶೆಟ್ಟಿ ರಚನೆ-ನಿರ್ದೇಶನದಲ್ಲಿ ಮೂಡಿಬಂದು ಭರ್ಜರಿ ಪ್ರದರ್ಶನ ಕಾಣುತ್ತಿರುವ ಜೊತೆಗೆ ಮೆಚ್ಚುಗೆಯ ಮಹಾಪೂರಕ್ಕೆ ಪಾತ್ರವಾಗುತ್ತಿರುವ ‘ಕಾಂತಾರ’ ಸಿನಿಮಾಗೆ ಈಗ ಕಾನೂನುಕ್ರಮದ ಎಚ್ಚರಿಕೆ ಎದುರಾಗಿದೆ.

    ಕಾಂತಾರ ಸಿನಿಮಾದಲ್ಲಿ ವರಾಹ ರೂಪಂ ಗೀತೆ ಮೂಲಕ ಕಾಪಿರೈಟ್ ಹಕ್ಕುಗಳ ಉಲ್ಲಂಘನೆ ಆಗಿದೆ ಎಂದು ತೈಕ್ಕುಡಂ ಬ್ರಿಡ್ಜ್​ ಎಂಬ ಸಂಗೀತ ಕಂಪನಿ ತಗಾದೆ ತೆಗೆದಿದೆ. ತೈಕ್ಕುಡಂ ಬ್ರಿಡ್ಜ್​ಗೂ ಕಾಂತಾರಕ್ಕೂ ಯಾವುದೇ ರೀತಿಯಲ್ಲಿ ಸಂಬಂಧವಿಲ್ಲ. ಅದಾಗ್ಯೂ ನಮ್ಮ ಬೌದ್ಧಿಕ ಆಸ್ತಿ ಆಗಿರುವ ನವರಸಂ ಗೀತೆ ಹಾಗೂ ವರಾಹರೂಪಂ ಗೀತೆಗೂ ಸಾಕಷ್ಟು ಸಾಮ್ಯತೆ ಕಂಡುಬಂದಿದ್ದು, ಈ ಮೂಲಕ ನಮ್ಮ ಕಾಪಿರೈಟ್ಸ್ ಉಲ್ಲಂಘನೆ ಆಗಿದೆ ಎಂದು ಆ ಸಂಸ್ಥೆ ಹೇಳಿಕೊಂಡಿದೆ.

    ನಮ್ಮ ದೃಷ್ಟಿಯಲ್ಲಿ ಪ್ರೇರಣೆಗೂ ಕೃತಿಚೌರ್ಯಕ್ಕೂ ನಡುವಿನ ಗೆರೆ ವಿಭಿನ್ನವಾಗಿದೆ. ಈ ಹಿನ್ನೆಲೆಯಲ್ಲಿ ನಾವು ಇದಕ್ಕೆ ಸಂಬಂಧಿಸಿದ ಸೃಜನಶೀಲ ತಂಡದ ಮೇಲೆ ಕಾನೂನು ಕ್ರಮ ಕೈಗೊಳ್ಳಲಿರುವುದಾಗಿ ಈ ಸಂಸ್ಥೆ ಹೇಳಿಕೊಂಡಿದೆ. ಈ ಕುರಿತು ಸಂಸ್ಥೆಯು ತನ್ನ ಅಧಿಕೃತ ಫೇಸ್​ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಇದೀಗ ಈ ಕುರಿತಂತೆ ಪರ-ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

    ವರಾಹರೂಪಂ ನವರಸಂ ನಡುವೆ ಹೋಲಿಕೆ ಕಂಡು ಬರುತ್ತಿದೆ. ಇದು ಅದರ ನಕಲಿರಬಹುದು ಎಂದು ಈಗಾಗಲೇ ಕೆಲವರು ವರಾಹರೂಪಂ ಹಾಡಿನ ಅಸಲಿಯತ್ತಿನ ಬಗ್ಗೆ ತಕರಾರು ತೆಗೆದ್ದರು. ಅದಕ್ಕೆ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಸ್ಪಷ್ಟನೆ ನೀಡಿದ್ದು, ಆ ಹಾಡಿನಿಂದ ಒಂದಷ್ಟು ಪ್ರೇರಣೆ ಆಗಿದ್ದು ನಿಜ, ಆದರೆ ಅದು ಅದರ ನಕಲಲ್ಲ ಎಂಬುದಾಗಿ ಹೇಳಿದ್ದರು.

    'ಕಾಂತಾರ'ಕ್ಕೀಗ ಕಾನೂನುಕ್ರಮದ 'ಕಿರಿಕ್​': ಯಶಸ್ಸಿನ ಓಟಕ್ಕೆ ಬ್ರೇಕ್​ ಹಾಕುವ ಯತ್ನವೋ?

    ಇದೀಗ ತೈಕ್ಕುಡಂ ಬ್ರಿಡ್ಜ್ ಆರೋಪಕ್ಕೆ ಕೆಲವರು ಸಿನಿಪ್ರಿಯರು ಆಕ್ಷೇಪ ಕೂಡ ವ್ಯಕ್ತಪಡಿಸಿದ್ದಾರೆ. ಚಿತ್ರ ಬಿಡುಗಡೆಗೊಂಡು ತಿಂಗಳಾಗುತ್ತ ಬಂದರೂ ಈಗ ತಕರಾರು ತೆಗೆಯುತ್ತಿರುವುದಕ್ಕೆ ಕಾರಣವೇನು? ಇಷ್ಟು ದಿನ ಏಕೆ ಸುಮ್ಮನಿದ್ದಿರಿ? ಇದು ಈಗಾಗಲೇ ರಾಜಕೀಯ ಕೆಸರೆರಚಾಟಕ್ಕೆ ಒಳಗಾಗಿರುವ ಕಾಂತಾರದ ಯಶಸ್ಸಿನ ನಾಗಾಲೋಟಕ್ಕೆ ಅಡ್ಡಿಪಡಿಸುವ ಮತ್ತೊಂದು ಪ್ರಯತ್ನ ಇರಬಹುದು ಇಲ್ಲವೇ ಭರ್ಜರಿ ಪ್ರದರ್ಶನಗೊಳಿಸುತ್ತಿರುವ ಕಾಂತಾರದ ಯಶಸ್ಸಿನಲ್ಲಿ ಲಾಭ ಮಾಡಿಕೊಳ್ಳುವ ಹುನ್ನಾರ ಇರಬಹುದು ಎಂಬುದಾಗಿಯೂ ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ತೈಕ್ಕುಡಂ ಬ್ರಿಡ್ಜ್​ನ ಆರೋಪಕ್ಕೆ ಕಾಂತಾರ ನಿರ್ಮಾಣ ಸಂಸ್ಥೆ ಅಥವಾ ಚಿತ್ರತಂಡದಿಂದ ಅಧಿಕೃತ ಪ್ರತಿಕ್ರಿಯೆ ಇನ್ನೂ ಹೊರಬಿದ್ದಿಲ್ಲ.

    ಈ ಹಿಂದೆ ರಿಷಬ್ ಶೆಟ್ಟಿ ನಿರ್ದೇಶನದ ‘ಕಿರಿಕ್​ ಪಾರ್ಟಿ’ ಸಿನಿಮಾ ಬಿಡುಗಡೆ ಸಂದರ್ಭದಲ್ಲೂ ಇಂಥದ್ದೇ ಒಂದು ಕಾಪಿರೈಟ್ ಉಲ್ಲಂಘನೆಯ ವಿವಾದ ಉಂಟಾಗಿತ್ತು. ತಮ್ಮ ಬೌದ್ಧಿಕ ಆಸ್ತಿಯಾಗಿರುವ ಹಾಡಿನ ಭಾಗವನ್ನು ಕಿರಿಕ್​ ಪಾರ್ಟಿ ಚಿತ್ರದಲ್ಲಿ ಬಳಸಲಾಗಿದೆ ಎಂಬುದಾಗಿ ಲಹರಿ ಸಂಗೀತ ಸಂಸ್ಥೆಯವರು ಕಾನೂನುಕ್ರಮದ ಮೊರೆ ಹೋಗಿದ್ದರು.

    ‘ಕಾಂತಾರ’ ಸಿನಿಮಾ ನೋಡಿ ಹೊರಬರುತ್ತಿದ್ದಾಗ ಹೃದಯಾಘಾತ; ಚಿತ್ರಮಂದಿರದಲ್ಲೇ ಸಾವು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts