More

    ಕನ್ನಡಿಗರೆಲ್ಲರೂ ಕನ್ನಡದ ರಾಯಭಾರಿಗಳೇ

    ಬೆಳಗಾವಿ: ಸಾವಿರಾರು ಮೈಲಿ ದೂರದಲ್ಲಿರುವ ಕತಾರ್‌ನಲ್ಲಿ ಕೆಲಸ ಮಾಡುತ್ತಿದ್ದೀರಿ. ತಾವೆಲ್ಲರೂ ಕನ್ನಡದ ರಾಯಭಾರಿಗಳಾಗಿ ಕೆಲಸ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.

    ಬೆಳಗಾವಿ ನಗರದ ತಮ್ಮ ಸ್ವಗೃಹದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವರ್ಚುವಲ್(ವಿಡಿಯೋ ಕಾನ್ಫರೆನ್ಸ್ ಮೂಲಕ) ಕತಾರ್- ಉತ್ತರ ಕರ್ನಾಟಕ ಬಳಗದ ದ್ವಿತೀಯ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಒಂದು ದೇಶಕ್ಕೆ ಪ್ರತ್ಯೇಕ ಧ್ವಜ, ಸೈನ್ಯ ಮತ್ತು ರಾಯಭಾರಿಗಳಿರುತ್ತಾರೆ. ಆದರೆ ಒಂದು ರಾಜ್ಯಕ್ಕೆ ಪ್ರತ್ಯೇಕ ರಾಯಭಾರಿಗಳಿರುವುದಿಲ್ಲ. ಆದರೆ, ನನ್ನ ದೃಷ್ಟಿಯಲ್ಲಿ ಕನ್ನಡ ನುಡಿ, ಸಂಸ್ಕೃತಿ, ಸಾಹಿತ್ಯ, ಕಲೆಯನ್ನು ಅರಬ್ ರಾಷ್ಟ್ರಗಳಲ್ಲಿ ಪಸರಿಸುತ್ತ ನಿಜವಾದ ಅರ್ಥದಲ್ಲಿ ಕನ್ನಡದ ರಾಯಭಾರಿಗಳಂತೆ ತಾವು ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.

    ಎನ್‌ಆರ್‌ಐಗಳ ಸೇವೆ ಕರ್ನಾಟಕಕ್ಕೆ ಅಗತ್ಯ: ಸುಮಾರು 185 ರಾಷ್ಟ್ರಗಳಲ್ಲಿ ನಮ್ಮ ಅನಿವಾಸಿ ಕನ್ನಡಿಗರು ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತ ಕನ್ನಡ ನಾಡಿಗೆ ಕೀರ್ತಿ ತರುತ್ತಿದ್ದಾರೆ. ಅವರಲ್ಲಿ ಇಂಜಿನಿಯರ್‌ಗಳು, ವೈದ್ಯರು, ಕೈಗಾರಿಕೋದ್ಯಮಿಗಳು ಮತ್ತು ಫಾರ್ಚೂನ್ 509 ಸಂಸ್ಥೆಗಳ ಮುಖ್ಯಸ್ಥರು ಕಾರ್ಯನಿರ್ವಹಿಸುತ್ತಿದ್ದಾರೆ. ಅನಿವಾಸಿ ಕನ್ನಡಿಗರಲ್ಲಿ ಉದ್ಯಮಶೀಲತೆ ಹೆಚ್ಚಿಸಲು ರಾಜ್ಯ ಸರ್ಕಾರ ಹಲವು ವಿನಾಯಿತಿ ನೀಡುತ್ತಿದೆ. 250 ಕೋಟಿ ರೂ.ಗಳಿಗಿಂತ ಹೆಚ್ಚು ಬಂಡವಾಳ ಹೂಡುವ ಅನಿವಾಸಿ (ಕನ್ನಡಿಗರಿಗೆ) ಭಾರತೀಯರಿಗೆ ಸಬ್ಸಿಡಿ ದರದಲ್ಲಿ ಭೂಮಿ ನೀಡಲಾಗುತ್ತಿದೆ. ಅದಕ್ಕಾಗಿ ತಾವೆಲ್ಲರೂ ಬಂಡವಾಳ ಹೂಡಿಕೆಗೆ ಮುಂದೆ ಬರಬೇಕು ಎಂದು ಆಹ್ವಾನ ನೀಡಿದರು.

    ಪ್ರವಾಸಿತಾಣ ಅಭಿವೃದ್ಧಿ ಪಡಿಸಬೇಕು: ಉತ್ತರ ಕರ್ನಾಟಕದ ಬೆಳಗಾವಿ, ವಿಜಯಪುರ, ಕಲಬುರಗಿ, ಬಳ್ಳಾರಿ ಸೇರಿ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ಸರ್ಕಾರ ಮುಂದಾಗಬೇಕು ಎಂದು ವಿದ್ವಾಂಸರಾದ ಸುಧೀಂದ್ರ ಕುಲಕರ್ಣಿ ಸಲಹೆ ನೀಡಿದರು. ಜತೆಗೆ ಹೆಲ್ತ್ ಟೂರಿಸಂ ಅಭಿವೃದ್ಧಿಗೂ ಒತ್ತು ನೀಡಬೇಕು ಎಂದರು.

    ನಿರ್ಮಾಲಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಜಯವಾಣಿ ಪತ್ರಿಕೆ ಸಂಪಾದಕರಾದ ಕೆ.ಎನ್.ಚನ್ನೇಗೌಡ ಇದ್ದರು. ಸಾಧಕರಾದ ಮಹೇಶ ಜಾಧವ್, ಚಂದ್ರಕಾಂತ ಬೋಜೆಪಾಟೀಲ್, ಕವಿತಾ ಮಿಶ್ರಾ, ಲಚಮಾ ಶೇಖರ್ ನಾಯಕ್ ಅವರನ್ನು ಸನ್ಮಾನಿಸಲಾಯಿತು. ಉ.ಕ. ಬಳಗದ ಅಧ್ಯಕ್ಷ ಶಶಿಧರ್ ಹೆಬ್ಬಾಳ ಅಧ್ಯಕ್ಷತೆ ವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts