More

    ಲಾಕ್​ಡೌನ್​ನಲ್ಲಿ ಸರ್ಕಾರಿ ಶಾಲೆಯೇ ಕುಡುಕರ ಅಡ್ಡ!

    ವಿಜಯಪುರ: ಕೋವಿಡ್​ 19 ಲಾಕ್​ಡೌನ್​ ಹಿನ್ನೆಲೆಯಲ್ಲಿ ಒಂದೂವರೆ ತಿಂಗಳು ಮದ್ಯ ಮಾರಾಟಕ್ಕಿದ್ದ ನಿರ್ಬಂಧವನ್ನು ಸರ್ಕಾರಗಳು ಮೇ 4ರಿಂದ ಆರಂಭವಾಗಿರುವ ಲಾಕ್​ಡೌನ್​ 3.0 ಅವಧಿಯಲ್ಲಿ ಸಡಿಲಗೊಳಿಸಿವೆ. ಇದೀಗ ಕೆಂಪು, ಕಿತ್ತಳೆ ಮತ್ತು ಹಸಿರು ವಲಯಗಳಲ್ಲೂ ಮದ್ಯ ಮಾರಾಟದ ಭರಾಟೆ ಜೋರಾಗಿದೆ.

    ಹೀಗಾಗಿ ಮದ್ಯದಂಗಡಿಗಳಿಗೆ ಹೋಗುವ ಮದ್ಯಪ್ರಿಯರು ತಮ್ಮ ಬ್ರ್ಯಾಂಡ್​ಗಳ ಮದ್ಯವನ್ನು ಖರೀದಿಸುತ್ತಾರೆ. ಆದರೆ, ಮನೆಯಿಂದ ಹೊರಗೆ ಅಂದರೆ ಬಾರ್​ ಮತ್ತು ರೆಸ್ಟೋರೆಂಟ್​ಗಳಲ್ಲಿ ಮದ್ಯ ಸೇವಿಸುವ ರೂಢಿ ಹೊಂದಿರುವವರಿಗೆ ಅದನ್ನು ಎಲ್ಲಿ ಸೇವಿಸಬೇಕು ಎಂಬುದೇ ದೊಡ್ಡ ಸಮಸ್ಯೆ ಆಗುತ್ತಿದೆ.

    ಇದನ್ನೂ ಓದಿ: ಗಂಡನ ಕೊಂದಳು, ಸಾವಿಗೆ ಕೋವಿಡ್​ ಕಾರಣ ಎಂದಳು…!

    ಇಂಥ ಸಮಸ್ಯೆ ಹೊಂದಿರುವವರಿಗೆ ರಜೆಯ ನಿಮಿತ್ತ ಕದವಿಕ್ಕಿಕೊಂಡಿದ್ದ ಸರ್ಕಾರಿ ಶಾಲೆ ಆವರಣ, ಮೈದಾನಗಳು ಕುಡಿಯುವ ಅಡ್ಡೆಯಾಗಿ ಮಾರ್ಪಡುತ್ತಿವೆ.

    ಅದರಂತೆ, ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಚಿಕ್ಕರೂಗಿ ಗ್ರಾಮದ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆ ಇದೀಗ ಕುಡುಕರಿಗೆ ಅಡ್ಡೆಯಾಗಿ ಮಾರ್ಪಟ್ಟಿದೆ. ಬೆಳಗ್ಗೆಯಿಂದ ಸಂಜೆವರೆಗೆ ಇಲ್ಲಿ ಇಸ್ಪೀಟ್​ ಆಡುತ್ತಾ, ಮದ್ಯ ಸೇವಿಸುತ್ತಾ, ಬೀಡಿ-ಸಿಗರೇಟು ಸೇದಿಕೊಂಡು ಪುಂಡ-ಪೋಕರಿಗಳು ಮಸ್ತ್​ ಮಜಾ ಮಾಡುತ್ತಿದ್ದಾರೆ!

    ಇದನ್ನೂ ಓದಿ: ತೀವ್ರ ಸೊಂಟದ ನೋವು ಎಂದ ವ್ಯಕ್ತಿಯಲ್ಲಿ ದೇಹದಲ್ಲಿ ಎಂಥ ಅಚ್ಚರಿ ಕಾದಿತ್ತು ನೋಡಿ!

    ಇದೀಗ ಶಾಲೆಗಳು ಪುನರಾರಂಭಗೊಳ್ಳುತ್ತಿವೆ. ಶಿಕ್ಷಕರು ಶಾಲೆಗಳಿಗೆ ಬರಲು ಆರಂಭಿಸಿದ್ದಾರೆ. ಹೀಗಾಗಿ ಕುಡುಕರ ಈ ಹಾವಳಿ ಅವರೆಲ್ಲರಿಗೂ ತೀವ್ರ ಮುಜುಗರವನ್ನುಂಟು ಮಾಡುತ್ತಿದೆ. ಅಸಹಾಯಕರಾದ ಮೇಷ್ಟ್ರುಗಳು ಪೊಲೀಸರಿಗೆ ದೂರು ಕೊಟ್ಟರೆ, ಅವರು ಇತ್ತಕಡೆ ಕಣ್ಣೆತ್ತಿ ನೋಡಲು ನಿರಾಕರಿಸುತ್ತಿದ್ದಾರೆ ಎನ್ನಲಾಗಿದೆ.

    ವೈಜಾಗ್​ ವಿಷಾನಿಲ ದುರಂತ: ಸದ್ಯ ತಮ್ಮ ಮನೆಗಳಿಗೆ ಹೋಗುವಂತಿಲ್ಲ ಕಾರ್ಖಾನೆ ಸಮೀಪದ ಗ್ರಾಮಸ್ಥರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts