More

    ಎಲ್ಲೆಡೆ ಕನ್ನಡ ಶಾಲೆಗಳ ಸ್ಥಾಪನೆ ಗುರಿ : ಕಸಾಪ ಅಧ್ಯಕ್ಷ ಸ್ಥಾನದ ಸ್ಪರ್ಧಾಕಾಂಕ್ಷಿ ಶೇಖರಗೌಡ ಮಾಲಿಪಾಟೀಲ ಹೇಳಿಕೆ

    ರಾಮನಗರ : ಪ್ರತಿ ಜಿಲ್ಲೆಯಲ್ಲೂ ಕನ್ನಡ ಭವನ ನಿರ್ಮಾಣ, ಸಾಹಿತ್ಯಾಸಕ್ತ ಕಾರ್ಯಕ್ರಮಗಳ ನಿರಂತರ ಆಯೋಜನೆ ಸೇರಿದಂತೆ ಒಟ್ಟು 19 ಪ್ರಮುಖ ಅಂಶಗಳನ್ನು ಮುಂದಿಟ್ಟುಕೊಂಡು ಈ ಬಾರಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಸ್ಪರ್ಧಾಕಾಂಕ್ಷಿ ಶೇಖರಗೌಡ ಮಾಲಿಪಾಟೀಲ ತಿಳಿಸಿದರು.

    ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಪ್ಪಳದವನಾದ ನಾನು ಕಳೆದ ಮೂರು ದಶಕದಿಂದ ನಾಡುನುಡಿಯ ಸೇವೆಯಲ್ಲಿ ತೊಡಗಿದ್ದೇನೆ. ನಾಡಿನ ಹೆಮ್ಮೆಯ ಪರಿಷತ್‌ನ ಮೂಲಕ ನನ್ನದೇ ಆದ ಯೋಜನೆಗಳನ್ನು ರೂಪಿಸುವ ಉದ್ದೇಶ ಹೊಂದಿದ್ದೇನೆ. ಎಲ್ಲೆಡೆ ಕನ್ನಡ ಶಾಲೆಗಳ ಸ್ಥಾಪನೆ, ಕೇಂದ್ರ ಸ್ಥಾನವಾಗಿರುವ ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮಾದರಿ ಕನ್ನಡ ಶಾಲೆ ಸ್ಥಾಪನೆ ಮಾಡುವ ಆಶಯ ಹೊಂದಿದ್ದೇನೆ ಎಂದರು.

    ಸಾಹಿತ್ಯ ಸಮ್ಮೇಳನಾಧ್ಯಕ್ಷರನ್ನು ಉತ್ಸವ ಮೂರ್ತಿಯನ್ನಾಗಿಸದೇ ವರ್ಷವಿಡೀ ಅವರ ಕ್ರಿಯಾಶೀಲತೆಯನ್ನು ಪರಿಷತ್ ರಾಜ್ಯದ ವಿವಿಧೆಡೆ ಬಳಸಿಕೊಳ್ಳಲು ಆಸಕ್ತಿ ವಹಿಸಲಾಗುತ್ತದೆ. ಪ್ರತಿ ವರ್ಷ ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲೂ ವಿವಿಧ ಸಾಹಿತ್ಯ, ಸಾಂಸ್ಕೃತಿಕ ಸಮಾವೇಶ ಆಯೋಜನೆ ಮಾಡಲಾಗುವುದು.

    ಉದಯೋನ್ಮುಖ ಹಾಗೂ ಯುವ ಬರಹಗಾರರಿಗೆ ಕಮ್ಮಟ ಮತ್ತು ಶಿಬಿರ ಆಯೋಜನೆ ಮಾಡಲಾಗುವುದು. ವಚನ ಸಾಹಿತ್ಯ, ದಾಸ ಸಾಹಿತ್ಯ, ನಾಟಕ, ಮಕ್ಕಳ ಸಾಹಿತ್ಯ ಕನ್ನಡ ಪರಂಪರೆಯ ಪೂರ್ವಸೂರಿಗಳ ಚಿಂತನೆಗಳ ಸಮಾವೇಶ ಹಮ್ಮಿಕೊಳ್ಳಗುವುದರ ಜತೆಗೆ, ಈ ಹಿಂದೆ ಇದ್ದ ನಿಕಟಪೂರ್ವ ಅಧ್ಯಕ್ಷರ ವಿಶಿಷ್ಟವಾದ ಯೋಜನೆಗಳನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸಿಕೊಡಲಾಗುತ್ತದೆ ಎಂದು ಹೇಳಿದರು.

    ಹಳೆಗನ್ನಡ ಹಾಗೂ ಆಧುನಿಕ ಸಾಹಿತ್ಯದ ಓದು ಕನ್ನಡ ಸಾಹಿತ್ಯ ಪರಿಷತ್ ಪ್ರಕಟಿಸಿರುವ ಅಪರೂಪದ ಮೌಲಿಕ ಗ್ರಂಥಗಳ ಮರುಮುದ್ರಣವನ್ನು ಮಾಡಲಾಗುತ್ತದೆ. ಹೊರನಾಡು, ಹೊರ ದೇಶದ ಕನ್ನಡಿಗರಿಗೆ ಉತ್ತಮ ಕೃತಿಗಳ ಪ್ರಕಟಣೆ ವಿಶೇಷ ಯೋಜನೆ, ಕಸಾಪ ಪ್ರಕಟನೆಗಳ ಡಿಜಿಟಲೀಕರಣ ಮಾಡಲಾಗುತ್ತದೆ ಎಂದು ತಮ್ಮ ಯೋಜನೆ ಹಂಚಿಕೊಂಡರು. ಸಾಹಿತ್ಯಾಸಕ್ತರಾದ
    ಆರ್.ಜಿ. ಹಳ್ಳಿ ನಾಗರಾಜು, ಹೊರಟ್ಟಿ, ಶಿವಕುಮಾರ್, ಮಂಜುನಾಥ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts