More

    ಜಿಲ್ಲೆಯಾದ್ಯಂತ ಅಕ್ಷರ ಜಾತ್ರೆಯ ಪ್ರಚಾರ

    ಕಲಬುರಗಿ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಜಿಲ್ಲೆಯಲ್ಲಿ ಅಕ್ಷರ ಜಾತ್ರೆ ಕುರಿತು ಜನಜಾಗೃತಿ ಮೂಡಿಸಲು ಮತ್ತು ನುಡಿ ಸಮ್ಮೇಳನಕ್ಕೆ ಆಹ್ವಾನಿಸುವ ವಿಶೇಷ ವಿನ್ಯಾಸದ ಪ್ರಚಾರ ರಥಕ್ಕೆ ಶಾಸಕರಾದ ಕನೀಜ್ ಫಾತಿಮಾ, ಎಂ.ವೈ. ಪಾಟೀಲ್, ತಿಪ್ಪಣಪ್ಪ ಕಮಕನೂರ ಗುರುವಾರ ಚಾಲನೆ ನೀಡಿದರು.
    ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರಚಾರ ಸಮಿತಿಯಿಂದ ಸಿದ್ದಪಡಿಸಲಾದ ತಾಯಿ ಭುವನೇಶ್ವರಿ ಭಾವಚಿತ್ರವನ್ನೊಳಗೊಂಡ ಅನುಭವ ಮಂಟಪದ ಮಾದರಿಯ ಭವ್ಯ ಪ್ರಚಾರ ರಥಕ್ಕೆ ಚಾಲನೆ ನೀಡಿ ಪ್ರಚಾರ ರಥ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
    ಜಿಲ್ಲೆಯ ಎಲ್ಲ ತಾಲೂಕು ಕೇಂದ್ರ ಸ್ಥಾನ, ಪ್ರಮುಖ ಹೋಬಳಿ ಮತ್ತು ಹೆದ್ದಾರಿಗಳಲ್ಲಿ ಸಂಚರಿಸಿ ನುಡಿ ಜಾತ್ರೆಗೆ ಆಹ್ವಾನ ನೀಡಲಿದೆ. ನುಡಿ ಜಾತ್ರೆಯ ಜಿಂಗಲ್ಸ್ ಹಾಡುಗಳು, ಬಾರಿಸು ಕನ್ನಡ ಡಿಂಡಿಮವಾ ಓ ಕನರ್ಾಟಕ ಹೃದಯ ಶಿವ, ನುಡಿ ತೇರ, ಹೀಗೆ ಕನ್ನಡಾಭಿಮಾನ ಹೆಚ್ಚಿಸುವ ಗೀತೆಗಳನ್ನು ರಥ ಪ್ರಸಾರ ಮಾಡುತ್ತಾ ಕನ್ನಡಿಗರಲ್ಲಿ ನಾಡಿನ ನೆಲ- ಜಲ ಭಾಷೆಯ ಬಗ್ಗೆ ಅಭಿಮಾನ ಮೂಡಿಸಲಿದೆ.ಜಿಲ್ಲಾಧಿಕಾರಿ ಬಿ. ಶರತ್, ಜಿಪಂ ಸದಸ್ಯ ಶಿವರಾಜ ರದ್ದೇವಾಡಗಿ, ಪ್ರಚಾರ ಸಮಿತಿ ಅಧ್ಯಕ್ಷ ವೀರಭದ್ರ ಸಿಂಪಿ, ಸಮಿತಿ ಕಾರ್ಯಧ್ಯಕ್ಷ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ರವಿರಾಜ್ ಎಚ್.ಜಿ., ಡಿಡಿಎಲ್ಆರ್ ಉಪನಿರ್ದೇಶಕ ಶಂಕರ ಖಾದಿ, ಜಿಲ್ಲಾ ಬಿಸಿಎಂ ಅಧಿಕಾರಿ ರಮೇಶ ಸಂಗಾ ಇದ್ದರು.


    ಎಲ್ಇಡಿ ವಾಹನಕ್ಕೂ ಚಾಲನೆನುಡಿ ಜಾತ್ರೆಯ ಸೇವೆ ಸಲ್ಲಿಸಲು ಸ್ವಯಂ ಪ್ರೇರಿತರಾಗಿ ಸೇವೆ ಸಲ್ಲಿಸಲು ಮುಂದೆ ಬಂದಿರುವ ಧ್ರುವಾ ಜಾಹೀರಾತು ಸಂಸ್ಥೆಯ ಎಲ್ಇಡಿ ಪ್ರಚಾರ ವಾಹನಕ್ಕೆ ಚಾಲನೆ ನೀಡಲಾಯಿತು. ಈ ಎಲ್ಇಡಿ ವಾಹನದಲ್ಲಿ ಸಮ್ಮೇಳನಕ್ಕೆ ಆಹ್ವಾನಿಸುವ ದೃಶ್ಯ ಜಾಹೀರಾತು, ಕನ್ನಡ ಹಾಡು ಪ್ರಸಾರ ಮಾಡಲಾಗುವುದು. ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿಮರ್ಿಸಿದ ಬಾರಿಸು ಕನ್ನಡ ಡಿಂಡಿಮವ ಕರ್ನಾಟಕ ಹೃದಯ ಶಿವಾ ದೃಶ್ಯ ಗೀತೆಯನ್ನು ಗಣ್ಯರು, ನಾಯಕರು ನೋಡಿ ಸಂತಸಪಟ್ಟರು. ನಾಡು ನುಡಿಗೆ ಉಚಿತ ಸೇವೆ ನೀಡಲು ಬಂದ ಧ್ರವಾ ಸಂಸ್ಥೆಯ ಪ್ರತಿನಿಧಿ ಸಂಜಯ ಸುತ್ರಾವೆ ಅವರನ್ನು ಜಿಲ್ಲಾಧಿಕಾರಿ ಶರತ್ ಬಿ. ಅಭಿನಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts