More

    ಕನ್ನಡ ಸಾಹಿತ್ಯ ಲೋಕದ ಹಿರಿಯ ಕವಿ, ಸಾಹಿತಿ ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು ಇನ್ನಿಲ್ಲ

    ಬೆಂಗಳೂರು: ಕನ್ನಡ ಸಾಹಿತ್ಯ ಲೋಕದಲ್ಲಿ, ‘ಎನ್ನೆಸ್ಸೆಲ್’ ಎಂದೇ ಮನೆಮಾತಾಗಿದ್ದ ಹಿರಿಯ ಕವಿ, ಸಾಹಿತಿ ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು ವಿಧಿವಶರಾಗಿದ್ದಾರೆ.

    ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಭಟ್ಟರು ಶನಿವಾರ (ಮಾರ್ಚ್​ 06) ಬೆಳಗ್ಗೆ 4:45ರ ಸುಮಾರಿಗೆ ಕೊನೆಯುಸಿರೆಳೆದರು. ಬನಶಂಕರಿಯ ಅವರ ನಿವಾಸದಲ್ಲಿ ಬೆಳಗ್ಗೆ 10.30ರವರೆಗೆ ಅಂತಿಮ ದರ್ಶನ ಪಡೆದುಕೊಳ್ಳಬಹುದೆಂದು ಕುಟುಂಬದ ಮೂಲಗಳು ಮಾಹಿತಿ ನೀಡಿವೆ.

    ಭಟ್ಟರು 1936ರ ಅಕ್ಟೋಬರ್​ 29ರಂದು ಶಿವಮೊಗ್ಗದಲ್ಲಿ ಜನಿಸಿದರು. ಇವರ ತಂದೆ ಶಿವರಾಮಭಟ್ಟ, ತಾಯಿ ಮೂಕಾಂಬಿಕೆ. ಎಂಎ ಪದವಿ ಪಡೆದ ಬಳಿಕ ಭಾಷಾಶಾಸ್ತ್ರ ಸಂಶೋಧಕರಾಗಿ ಎರಡು ವರ್ಷ ಕೆಲಸ ಮಾಡಿದ ಬಳಿಕ ಕಾಲೇಜಿನಲ್ಲಿ ಪ್ರಾಧ್ಯಪಕರಾಗಿ ಸೇವೆ ಆರಂಭಿಸಿದರು.

    ಎನ್ನೆಸ್ಸೆಲ್​ ಕನ್ನಡ ಸಾಹಿತ್ಯದ ಅಗ್ರಮಾನ್ಯ ಕವಿ, ಜನಪ್ರಿಯ ಪ್ರಧ್ಯಾಪಕರು. ಇವರು ಕನ್ನಡ-ಸಂಸ್ಕೃತ-ಇಂಗ್ಲೀಷ್ ಭಾಷೆಗಳಲ್ಲಿ ಕೃತಿರಚನೆ ಮಾಡಿದ್ದಾರೆ. ಎಲಿಯಟ್ಸ್​, ಷೇಕ್ಸ್​ಪಿಯರ್​ ಕಾವ್ಯಗಳನ್ನು ಕನ್ನಡಕ್ಕೆ ಅನುವಾದಿಸಿದರು. “ಹೊರಳು ದಾರಿಯಲ್ಲಿ ಕಾವ್ಯ” ಈ ‘ವಿಮರ್ಶಾಗ್ರಂಥ’ಕ್ಕೆ 1974ರಲ್ಲಿ ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’ ಲಭಿಸಿದೆ.

    ನಾಲ್ಕುಬಾರಿ ಅಮೆರಿಕದಲ್ಲಿ ವಿಶೇಷ ಆಹ್ವಾನಿತರಾಗಿದ್ದರು. ಅವರು ಕೊಟ್ಟ ಉಪನ್ಯಾಸಗಳ ಸಂಖ್ಯೆ 80. ನ್ಯೂಯಾರ್ಕ್, ನ್ಯೂಜರ್ಸಿ, ಶಿಕಾಗೊ, ಲಾಸ್ ಎಂಜಲೀಸ್, ಸ್ಯಾನ್ ಫ್ರಾನ್ಸಿಸ್ಕೋ ಮುಂತಾದ ನಗರಗಳಲ್ಲಿ ಭಟ್ಟರು ಮನೆಮಾತಾಗಿದ್ದಾರೆ.

    ಕರೊನಾಗೆ ನಲುಗಿದ ಆರ್ಥಿಕತೆ: ಕೇಂದ್ರದ ಆದಾಯಕ್ಕೆ ಬರೆ, ರಾಜ್ಯಕ್ಕೆ ಹೊರೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts