More

    ರಾಮಮಂದಿರ ಉದ್ಘಾಟನೆಗೆ ಚಂದನವನದ ಡಿವೈನ್​ ಸ್ಟಾರ್​​​​​ ಸೇರಿದಂತೆ 250 ಕನ್ನಡಿಗರಿಗೆ ಆಹ್ವಾನ!

    ಮುಂಬೈ: ರಾಮ್ ಲಾಲಾ ವಿಗ್ರಹದ ಪ್ರತಿಷ್ಠಾಪನೆ ಜನವರಿ 22 ರಂದು ಅಯೋಧ್ಯೆಯ ರಾಮಮಂದಿರದಲ್ಲಿ ನಡೆಯಲಿದೆ. ಈ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ 50 ದೇಶಗಳ ಪ್ರತಿಯೊಬ್ಬರನ್ನು ಆಹ್ವಾನಿಸಲು ಪ್ರಯತ್ನಿಸಲಾಗುತ್ತಿದೆ. ಜತೆಗೆ ಉದ್ಘಾಟನಾ ಸಮಾರಂಭಕ್ಕೆ ಸಿನಿ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರಗಳ ದಿಗ್ಗಜರನ್ನೂ ಆಹ್ವಾನಿಸಲಾಗುತ್ತಿದೆ.

    ಕಾಂತಾರ ಸಿನಿಮಾದ ನಟ ರಿಷಬ್ ಶೆಟ್ಟಿ ಅವರಿಗೂ ಇದೀಗ ರಾಮಮಂದಿರ ಉದ್ಘಾಟನೆಗೆ ಆಹ್ವಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆಹ್ವಾನದ ಕುರಿತು ಟ್ವೀಟ್​​​​ ಮಾಡಲಾಗಿದ್ದು, ದಕ್ಷಿಣದಲ್ಲಿ ರಜನಿಕಾಂತ್, ಮೋಹನ್ ಲಾಲ್, ಚಿರಂಜೀವಿ ಸೇರಿದಂತೆ ಕೆಲವೇ ಕೆಲವು ನಟರಿಗೆ ಇಂಥದ್ದೊಂದು ಆಹ್ವಾನ ಸಿಕ್ಕಿದೆ. ವಿಹಿಂಪ ಮೂಲಗಳ ಪ್ರಕಾರ ಕರ್ನಾಟಕದಿಂದ ಶೃಂಗೇರಿಯ ಶ್ರೀವಿಭುಶೇಖರ ತೀರ್ಥ ಸ್ವಾಮೀಜಿ, ಆದಿಚುಂಚನಗಿರಿ ಶ್ರೀನಿರ್ಮಲಾನಂದ ಸ್ವಾಮೀಜಿ, ಸಿದ್ಧಗಂಗಾ, ಸುತ್ತೂರು, ಪುತ್ತಿಗೆ, ಅದಮಾರು, ಶ್ರವಣಬೆಳಗೊಳ, ಮಾದಾರ, ಬೇಲಿಮಠ, ರಂಭಾಪುರಿ, ಸೇರಿದಂತೆ ನಾಡಿನ 50ಕ್ಕೂ ಅಧಿಕ ಮಠಗಳ ಸ್ವಾಮೀಜಿಗಳು, ಆಧ್ಯಾತ್ಮಿಕ ಗುರುಗಳಾದ ರವಿಶಂಕರ ಗುರೂಜಿ, ಇಸ್ಕಾನ್‌ ಮಧುಪಂಡಿತದಾಸ ಮತ್ತಿತರರನ್ನು ಆಹ್ವಾನಿಸಲಾಗುತ್ತಿದೆ. ಅಲ್ಲದೆ ರಾಜ್ಯಸಭಾ ಸದಸ್ಯರೂ ಆಗಿರುವ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರಿಗೂ ಆಹ್ವಾನ ಇರಲಿದೆ. ವಿಶ್ವಹಿಂದು ಪರಿಷತ್‌ನಿಂದ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್‌ಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇವರಲ್ಲದೆ ಸಂಘಪರಿವಾರ ಸಂಘಟನೆಗಳ ಪ್ರಮುಖರಿಗೆ ಆಹ್ವಾನ ನೀಡಲಾಗುತ್ತದೆ. 

    https://twitter.com/BangaloreTimes1/status/1735925073163534768?s=20

    ರಾಮಾಲಯ ಚಳವಳಿಯಲ್ಲಿ ಪ್ರಾಣ ಕಳೆದುಕೊಂಡ 50 ಕರಸೇವಕರ ಕುಟುಂಬದ ಸದಸ್ಯರಿಗೂ ಆಹ್ವಾನ ನೀಡಲಾಗಿದೆ. ತೀರ್ಪುಗಾರರು, ವಿಜ್ಞಾನಿಗಳು, ಲೇಖಕರು, ಕವಿಗಳಿಗೂ ಆಹ್ವಾನ ಕಳುಹಿಸಲಾಗಿದೆ. ಇವರಲ್ಲದೆ, ಸಂತರು, ಪುರೋಹಿತರು, ಧಾರ್ಮಿಕ ಮುಖಂಡರು, ಮಾಜಿ ಪೌರಕಾರ್ಮಿಕರು, ನಿವೃತ್ತ ಸೇನಾ ಅಧಿಕಾರಿಗಳು, ವಕೀಲರು, ಸಂಗೀತಗಾರರು, ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರನ್ನು ಆಹ್ವಾನಿಸಲಾಗಿದೆ. ಜನಪ್ರಿಯ ಟಿವಿ ಧಾರಾವಾಹಿ ರಾಮಾಯಣದಲ್ಲಿ ಸೀತಾರಾಮ ಪಾತ್ರವನ್ನು ನಿರ್ವಹಿಸಿದ ಅರುಣ್ ಗೋವಿಲ್, ದೀಪಿಕಾ ಚಿಖ್ಲಿಯಾ ಅವರನ್ನೂ ಆಹ್ವಾನಿಸಲಾಗಿದೆ. ಪತ್ರಿಕೆ, ಬರಹಗಳ ಮೂಲಕ ರಾಮಮಂದಿರ ಚಳವಳಿಗೆ ಬೆಂಬಲ ನೀಡಿದ ಪತ್ರಕರ್ತರಿಗೂ ಆಹ್ವಾನ ನೀಡಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಶರದ್ ಶರ್ಮಾ ತಿಳಿಸಿದ್ದಾರೆ. 7000 ಆಹ್ವಾನಿತರಲ್ಲಿ 4000 ಮಂದಿ ಧಾರ್ಮಿಕ ಮುಖಂಡರು. ಇನ್ನುಳಿದ ಮೂರು ಸಾವಿರ ಮಂದಿ ವಿವಿಐಪಿಗಳಾಗಲಿದ್ದಾರೆ ಎಂದು ತಿಳಿದುಬಂದಿದೆ. 

    ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ದಿನವನ್ನು ರಾಷ್ಟ್ರೀಯ ರಜಾದಿನವೆಂದು ಘೋಷಿಸಲು ಒತ್ತಾಯ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts