More

    ಮುಂದಿನ ವರ್ಷಕ್ಕೆ ಭವನ ನಿರ್ಮಾಣ ; ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಭರವಸೆ

    ಬಾಗೇಪಲ್ಲಿ: ಜಾತಿ ಲೆಕ್ಕಾಚಾರದಲ್ಲಿ ನಡೆಯುವ ಜಯಂತಿಗಳಿಗೆ ಸಹಸ್ರಾರಾರು ಜನ ಸೇರುತ್ತಾರೆ, ಆದರೆ ಕನ್ನಡ ರಾಜ್ಯೋತ್ಸವ ಕೇವಲ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಬೇಸರ ವ್ಯಕ್ತಪಡಿಸಿದರು.

    ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಸೋಮವಾರ ಅಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಕನ್ನಡಿಗರು ಮಾತೃಭಾಷೆ ಬಿಟ್ಟು ಪರಭಾಷೆ ಹಿಂದೆ ಓಡುತ್ತಿರುವುದು ದುರಂತ, ಇನ್ನಾದರೂ ಈ ನೆಲದ ಭಾಷೆಗೆ ಆದ್ಯತೆ ನೀಡಬೇಕೆಂದರು.

    ತಾಲೂಕು ಕೇಂದ್ರದಲ್ಲಿ ಕನ್ನಡ ಭವನ ನಿರ್ಮಿಸಬೇಕೆಂಬ ಕನ್ನಡಪರ ಹೋರಾಟಗಾರರ ದಶಕಗಳ ಬೇಡಿಕೆಯನ್ನು 2022 ನವಂಬರ್ 1ಕ್ಕೆ ಈಡೇರಿಸುವುದಾಗಿ ಭರವಸೆ ನೀಡಿದರು. ತಹಸೀಲ್ದಾರ್ ಡಿ.ಎ.ದಿವಾಕರ್, ತಾಪಂ ಇಒ ಮಂಜುನಾಥ್, ಟಿಎಚ್‌ಒ ಡಾ.ಸಿ.ಎನ್.ಸತ್ಯನಾರಾಯಣರೆಡ್ಡಿ, ಬಿಇಒ ಸಿದ್ದಪ್ಪ, ಪುರಸಭೆ ಮುಖ್ಯಾಧಿಕಾರಿ ಮಧುಕರ್, ಎಇಇ ರಾಮಲಿಂಗಾರೆಡ್ಡಿ, ರೇಷ್ಮೆ ವಿಸ್ತರಣಾಧಿಕಾರಿ ಚಿನ್ನಕೈವಾರಯ್ಯ, ಕೃಷಿ ಸಹಾಯಕ ನಿರ್ದೇಶಕ ಮಂಜುನಾಥ, ಪೊಲೀಸ್ ವೃತ್ತ ನಿರೀಕ್ಷಕ ಡಿ.ಆರ್.ನಾಗರಾಜು, ನ್ಯಾಷನಲ್ ಪಿಯು ಕಾಲೇಜು ಪ್ರಾಂಶುಪಾಲ ಕೆ.ಟಿ.ವೀರಾಂಜನೇಯ, ಕರವೇ ಮುಖಂಡರಾದ ಬಿ.ಎ.ಬಾಬಾಜಾನ್, ಕೆ.ಎನ್.ಹರೀಶ್, ಬಿ.ಟಿ.ಸೀನಾ, ಜಭಿವುಲ್ಲಾ ಮತ್ತಿತರರಿದ್ದರು.

    ಸ್ವಾಭಿಮಾನಿ ಬಣದಿಂದ ಕಾರ್ಯಕ್ರಮ ಬಹಿಷ್ಕಾರ: ರಾಜೋತ್ಸವ ಪೂರ್ವಭಾವಿ ಸಭೆಯಲ್ಲಿ ತೆಗೆದುಕೊಂಡಿರುವ ತೀರ್ಮಾನದಂತೆ ಕನ್ನಡ ಸಂಘಟನೆಯ ಪದಾಧಿಕಾರಿಗಳಿಗೆ ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡಲು ಅವಕಾಶ ಕಲ್ಪಿಸಲಿಲ್ಲ ಎಂದು ಆರೋಪಿಸಿ ಕರವೇ ಸ್ವಾಭಿಮಾನಿ ಬಣದ ಪದಾಧಿಕಾರಿಗಳು ಕಾರ್ಯಕ್ರಮದಿಂದ ಹೊರನಡೆದು ಆಕ್ರೋಶ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts