More

    ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿ ರಚನೆ

    *ಶಿವರಾಜ್ ತಂಗಡಗಿ ಅಧ್ಯಕ್ಷತೆಯಲ್ಲಿ 30 ಸದಸ್ಯರು

    ಬೆಂಗಳೂರು: ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳ ಸಾಧಕರ ಆಯ್ಕೆ ಮಾಡಲು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅಧ್ಯಕ್ಷತೆಯಲ್ಲಿ ಸರ್ಕಾರ 30 ಸದಸ್ಯರನ್ನೊಳಗೊಂಡ ಸಲಹಾ ಸಮಿತಿ ರಚಿಸಿದೆ.
    ಸಲಹಾ ಸಮಿತಿ ಸದಸ್ಯರು: ಸಾಹಿತ್ಯ ಕ್ಷೇತ್ರದಿಂದ ಜಾಣಗೆರೆ ವೆಂಕಟರಾಮಯ್ಯ, ಎಚ್.ಎಲ್.ಪುಷ್ಪಾ, ಡಾ. ವೀರಣ್ಣ ದಂಡೆ, ಡಾ. ಮೂಡ್ನಾಕೂಡು ಚಿನ್ನಸ್ವಾಮಿ, ಅಲ್ಲಮಪ್ರಭು ಬೆಟ್ಟದೂರ, ಕಾ.ತ.ಚಿಕ್ಕಣ್ಣ, ವೈದ್ಯಕೀಯ ಕ್ಷೇತ್ರದಿಂದ ಡಾ.ಸಿ.ಆರ್.ಚಂದ್ರಶೇಖರ್, ಜನಪದ ಕ್ಷೇತ್ರದಿಂದ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ, ಕೃಷ್ಣಮೂರ್ತಿ ಹನೂರು, ಟಾಕಪ್ಪ ಕಣ್ಣೂರು, ಪಿಚ್ಚಳ್ಳಿ ಶ್ರೀನಿವಾಸ್, ಕೃಷಿ ಕ್ಷೇತ್ರದಿಂದ ವಿಠಲ್ ಐ. ಬೆಣಗಿ, ಸಮಾಜಸೇವೆ ಕ್ಷೇತ್ರದಿಂದ ಸಣ್ಣರಾಮ ಹಾಗೂ ಹೃಷಿಕೇಶ್ ಬಹದ್ದೂರ್ ದೇಸಾಯಿ, ಶಿಲ್ಪಕಲೆ ಕ್ಷೇತ್ರದಿಂದ ವೆಂಕಟರಮಣಯ್ಯ, ಚಿತ್ರಕಲೆ ಹಾಗೂ ಶಿಲ್ಪಕಲೆ ಕ್ಷೇತ್ರದಿಂದ ಎಂ.ಎಸ್.ಮೂರ್ತಿ, ನೃತ್ಯ ಕ್ಷೇತ್ರದಿಂದ ಗೀತಾ ಶಿವಮೊಗ್ಗ, ಶಾಸ್ತ್ರೀಯ ಸಂಗೀತ ಕ್ಷೇತ್ರದಿಂದ ಡಾ.ಜಯದೇವಿ ಜಂಗಮ ಶೆಟ್ಟಿ, ಯಕ್ಷಗಾನ ಕ್ಷೇತ್ರದಿಂದ ಐರೋಡಿ ಗೋವಿಂದಪ್ಪ, ಚಲನಚಿತ್ರ ಕ್ಷೇತ್ರದಿಂದ ಸಾಧು ಕೋಕಿಲ, ಕ್ರೀಡಾ ಕ್ಷೇತ್ರದಿಂದ ರೀತು ಅಬ್ರಹಾಂ, ಸುಗಮ ಸಂಗೀತ ಕ್ಷೇತ್ರದಿಂದ ಸುಕನ್ಯಾ ಪುಭಾಕರ್, ಹಿಂದೂಸ್ಥಾನಿ ಸಂಗೀತ ಕ್ಷೇತ್ರದಿಂದ ಫಯಾಜ್ ಖಾನ್, ವಾದ್ಯ ಸಂಗೀತ ಕ್ಷೇತ್ರದಿಂದ ನರಸಿಂಹಲು ವಡವಾಟಿ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

    ಆಡಳಿತ ಕ್ಷೇತ್ರದಿಂದ ನಿವೃತ್ತ ಐಎಎಸ್ ಅಧಿಕಾರಿ ಡಿ.ಎನ್. ನರಸಿಂಹರಾಜು, ಶಿಕ್ಷಣ ಕ್ಷೇತ್ರದಿಂದ ಪುರುಷೋತ್ತಮ ಬಿಳಿಮಲೆ, ಪ್ರಕಾಶನ ಕ್ಷೇತ್ರದಿಂದ ಚನ್ನಬಸವಣ್ಣ, ಪತ್ರಿಕೋದ್ಯಮ ಕ್ಷೇತ್ರದಿಂದ ಶೈಲೇಶ್ ಚಂದ್ರಗುಪ್ತ ಹಾಗೂ ರಂಗಭೂಮಿ ಕ್ಷೇತ್ರದಿಂದ ಜೆ.ಲೋಕೇಶ್ ಸದಸ್ಯರಾಗಿದ್ದಾರೆ.

    ಪದನಿಮಿತ್ತ ಸದಸ್ಯರು: ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕರ್ನಾಟಕ ನಾಟಕ ಅಕಾಡೆಮಿ, ಕರ್ನಾಟಕ ಲಲಿತಕಲಾ ಅಕಾಡೆಮಿ, ಕರ್ನಾಟಕ ಯಕ್ಷಗಾನ ಅಕಾಡೆಮಿ ಹಾಗೂ ಕರ್ನಾಟಕ ಜನಪದ ಅಕಾಡೆಮಿಯ ಪ್ರತಿನಿಧಿಗಳು ಸಮಿತಿಯ ಪದನಿಮಿತ್ತ ಸದಸ್ಯರಾಗಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts