More

    ಕಣಕುಂಬಿ ಅರಣ್ಯದಲ್ಲಿ ಕರಡಿ ದಾಳಿಗೆ ರೈತ ಬಲಿ

    ಖಾನಾಪುರ: ತಾಲೂಕಿನ ಕಣಕುಂಬಿ ಅರಣ್ಯ ವಲಯದ ಅಮಟೆ ಗ್ರಾಮದ ಹೊರವಲಯದಲ್ಲಿ ಕರಡಿ ದಾಳಿಗೆ ರೈತನೋರ್ವ ಮೃತಪಟ್ಟ ಘಟನೆ ಬುಧವಾರ ನಡೆದಿದೆ.

    ಅಮಟೆ ಗ್ರಾಮದ ತಾನಾಜಿ ಟೋಪಾ ನಾಯ್ಕ (28) ಸಾವಿಗೀಡಾದ ರೈತ. ಕೃಷಿ ಕೆಲಸಕ್ಕಾಗಿ ಹೊಲಕ್ಕೆ ತೆರಳಿದ್ದ ಅವರು ಮರಳಿ ಮನೆಗೆ ಬರುತ್ತಿರುವಾಗ ಕರಡಿ ದಾಳಿ ನಡೆಸಿದೆ. ತಲೆಗೆ ತೀವ್ರ ಗಾಯವಾಗಿ ಅತಿಯಾದ ರಕ್ತಸ್ರಾವದಿಂದ ರೈತ ಸ್ಥಳದಲ್ಲೇ ಮೃತಪಟ್ಟಿದ್ದಾಗಿ ಮೂಲಗಳು ತಿಳಿಸಿವೆ.

    ಮೃತ ತಾನಾಜಿಗೆ ತಾಯಿ, ಪತ್ನಿ, ಇಬ್ಬರು ಪುತ್ರರು, ಪುತ್ರಿ ಇದ್ದು, ಈಚೆಗೆ ಅವರ ತಂದೆ ತೀರಿಕೊಂಡಿದ್ದರು. ಕುಟುಂಬ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದ ತಾನಾಜಿ ಅಗಲಿಕೆಯಿಂದ ಕುಟುಂಬ ಆತಂಕಕ್ಕೀಡಾಗಿದೆ.

    ಫೆ. 20ರಂದು ಅಮಟೆ ಗ್ರಾಪಂ ವ್ಯಾಪ್ತಿಯ ಅಮಗಾಂವ ಗ್ರಾಮದ ಬಳಿ ದನ-ಕರುಗಳಿಗೆ ಮೇವು ತರಲು ಹೊಲಕ್ಕೆ ಹೊರಟಿದ್ದ ಕೃಷಿಕ ಲಕ್ಷ್ಮಣ ಘಾಡಿ ಅವರ ಮೇಲೂ ಕರಡಿ ದಾಳಿ ನಡೆಸಿತ್ತು. ಅವರು ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪದೇಪದೆ ಕರಡಿ ದಾಳಿ ನಡೆಸುತ್ತಿರುವುದು ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿದೆ. ಸ್ಥಳಕ್ಕೆ ಪಿಎಸ್‌ಐ ಬಸನಗೌಡ ಪಾಟೀಲ, ತಹಸೀಲ್ದಾರ್ ರೇಷ್ಮಾ ತಾಳಿಕೋಟಿ ಹಾಗೂ ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts