More

    ಕುಡಿವ ನೀರು ಶುದ್ಧವಾಗಿರಲಿ; ತಾಪಂ ಇಒ ಕೆ.ವಿ.ಕಾವ್ಯಾರಾಣಿ ಸಲಹೆ

    ಗುಣಮಟ್ಟ ಪರೀಕ್ಷಾ ಕಿಟ್‌ಗಳ ವಿತರಣೆ

    ಕನಕಗಿರಿ: ಕುಡಿವ ನೀರು ಶುದ್ಧತೆ ಜತೆಗೆ ಗುಣಮಟ್ಟದಿಂದ ಕೂಡಿರಬೇಕು. ಇಲ್ಲದಿದ್ದಲ್ಲಿ ನಾನಾ ರೋಗಗಳಿಗೆ ತುತ್ತಾಗಬೇಕಾಗುತ್ತದೆ ಎಂದು ತಾಪಂ ಇಒ ಕೆ.ವಿ.ಕಾವ್ಯಾರಾಣಿ ಹೇಳಿದರು.

    ಪಟ್ಟಣದ ಯಾತ್ರಿ ನಿವಾಸದಲ್ಲಿ ಪಿಡಿಒ, ವಾಟರ್‌ಮ್ಯಾನ್ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಶುದ್ಧ ಕುಡಿವ ನೀರಿನ ಪರೀಕ್ಷಾ ತರಬೇತಿ ಹಾಗೂ ಕಿಟ್‌ಗಳ ವಿತರಣೆ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು. ನೀರಿನಲ್ಲಿ ಫ್ಲೋರೈಡ್ ಸಹಿತ ಇತರ ಅಂಶಗಳು ಹೆಚ್ಚಾಗಿರುವುದರಿಂದ ಹಲ್ಲುಗಳು ಹಳದಿಯಾಗುತ್ತವೆ. ಚಿಕ್ಕ ವಯಸ್ಸಿಗೆ ಕೀಲು ನೋವು ಆರಂಭವಾಗುತ್ತವೆ. ನ್ಯೂಮೋನಿಯಾದಂತಹ ಕಾಯಿಲೆಗಳೂ ಬರುವ ಸಾಧ್ಯತೆಯಿದೆ. ಅದಕ್ಕಾಗಿ ಗ್ರಾ.ಪಂ.ಗೊಂದರಂತೆ ನೀರಿನ ಪರೀಕ್ಷಾ ಕಿಟ್‌ಗಳನ್ನು ನೀಡಲಾಗುತ್ತಿದೆ. ವಾಟರ್‌ಮ್ಯಾನ್‌ಗಳು ಹಾಗೂ ಅಂಗನವಾಡಿ ಕಾರ್ಯಕರ್ತೆಯರು 10 ನಿಮಿಷದಲ್ಲಿ ನೀರಿನ ಪರೀಕ್ಷೆ ಮಾಡಬಹುದಾಗಿದೆ. ಸ್ಥಳದಲ್ಲಿಯೇ ಗುಣಮಟ್ಟವೂ ತಿಳಿಯಲಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts