More

    ದಲೈ ಲಾಮಾರನ್ನು ಭೇಟಿಯಾದ ಕಂಗನಾ ರಣಾವತ್..

    ಧರ್ಮಶಾಲಾ (ಹಿಮಾಚಲ ಪ್ರದೇಶ): ಮಂಡಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕಂಗನಾ ರಣಾವತ್ ಸೋಮವಾರ ಧರ್ಮಶಾಲಾದಲ್ಲಿ ಟಿಬೆಟಿಯನ್ ಬೌದ್ಧ ಧರ್ಮದ ಮುಖ್ಯಸ್ಥ ದಲೈ ಲಾಮಾ ಅವರನ್ನು ಭೇಟಿಯಾದರು.

    ಇದನ್ನೂ ಓದಿ: ‘ಕೇರಳ ಸಿಎಂ ಹಗರಣದಲ್ಲಿ ಭಾಗಿ’: ಪ್ರಧಾನಿ ಮೋದಿ

    ದಲೈಲಾಮಾ ಅವರನ್ನು ಭೇಟಿಯಾಗುವುದು ತನಗೆ ಅದ್ಭುತವಾದ ಅನುಭವವಾಗಿದೆ ಎಂದು ಕಂಗನಾ ಹೇಳಿದ್ದಾರೆ,

    ಗುರುಗಳನ್ನು ತನ್ನ ಜೀವನದುದ್ದಕ್ಕೂ ಆರಾಧಿಸಲು ಬಯಸುತ್ತೇನೆ. “ದಲೈಲಾಮಾ ಅವರ ಸುತ್ತಲಿನ ದೈವಿಕತೆಯ ಅನುಭವವು ಸಂಪೂರ್ಣವಾಗಿ ವಿಭಿನ್ನವಾದ ಭಾವನೆಯಾಗಿದೆ. ಇದು ನಾನು ಹಿಂದೆಂದೂ ಅನುಭವಿಸದ ಸಂಗತಿಯಾಗಿದೆ” ಎಂದು ಸುದ್ದಿಗಾರರಿಗೆ ಕಂಗನಾ ತಿಳಿಸಿದರು.

    ಮಂಡಿ ಕ್ಷೇತ್ರದಲ್ಲಿ ಭಿರುಸಿನ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಕಂಗನಾ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ರೀರಾಮನ ಅವತಾರ ಎಂದು ಬಣ್ಣಿಸಿದ್ದರು.

    ಹಿಮಾಚಲ ಪ್ರದೇಶದ ಕಾಂಗ್ರೆಸ್ ನಾಯಕ ವಿಕ್ರಮಾದಿತ್ಯ ಸಿಂಗ್ ವಿರುದ್ಧ ಕಂಗನಾ ಸ್ಪರ್ಧಿಸಿದ್ದಾರೆ. ವಿಕ್ರಮಾದಿತ್ಯ ಸಿಂಗ್ ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ದಿವಂಗತ ವೀರಭದ್ರ ಸಿಂಗ್ ಮತ್ತು ಹಿಮಾಚಲ ಪ್ರದೇಶ ಕಾಂಗ್ರೆಸ್ ಸಮಿತಿ ಮುಖ್ಯಸ್ಥೆ ಮತ್ತು ನಿರ್ಗಮಿತ ಸಂಸದೆ ಪ್ರತಿಭಾ ಸಿಂಗ್ ಅವರ ಪುತ್ರ.

    ವಿಕ್ರಮಾದಿತ್ಯ ಅವರೊಂದಿಗೆ ಕಂಗನಾ ಹಲವು ಬಾರಿ ಮಾತಿನ ಸಮರ ನಡೆಸಿದ್ದಾರೆ. ವಿಕ್ರಮಾದಿತ್ಯ ತನ್ನನ್ನು ಬೆದರಿಸಲು ಸಾಧ್ಯವಿಲ್ಲ ಎಂದು ಈ ಹಿಂದೆ ಕಂಗನಾ ಹೇಳಿದ್ದರು. ಚುನಾವಣಾ ಪ್ರಚಾರದ ವೇಳೆ ಕಂಗನಾ ಹಲವು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಅವರು ಸುಭಾಷ್ ಚಂದ್ರ ಬೋಸ್ ಅವರನ್ನು ಭಾರತದ ಮೊದಲ ಪ್ರಧಾನಿಯಾಗಬೇಕಿತ್ತು ಎಂದು ಉಲ್ಲೇಖಿಸಿದ್ದರು.

    ಪ್ರಧಾನಿ ಮೋದಿ, ಅಮಿತ್ ಶಾ ಹೆಲಿಕಾಪ್ಟರ್‌ಗಳನ್ನೂ ಪರಿಶೀಲಿಸಬೇಕು: ಜೈರಾಮ್ ರಮೇಶ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts