More

    ಇಂದಿನಿಂದ ಇಂಗ್ಲೆಂಡ್-ಕಿವೀಸ್ 2ನೇ ಟೆಸ್ಟ್, ಕೇನ್ ವಿಲಿಯಮ್ಸನ್ ಅಲಭ್ಯ

    ಬರ್ಮಿಂಗ್‌ಹ್ಯಾಂ: ಭಾರತದೆದುರಿನ ಮಹತ್ವದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯಕ್ಕೆ ಮುನ್ನ ಮುನ್ನೆಚ್ಚರಿಕೆಯ ಕ್ರಮವಾಗಿ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್‌ಗೆ ಇಂಗ್ಲೆಂಡ್ ವಿರುದ್ಧದ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಿಂದ ವಿಶ್ರಾಂತಿ ನೀಡಲಾಗಿದೆ. ಮೊದಲ ಟೆಸ್ಟ್ ಡ್ರಾಗೊಂಡ ಬಳಿಕ ಸಮಬಲದಲ್ಲಿರುವ ಸರಣಿಯ ನಿರ್ಣಾಯಕ ಪಂದ್ಯ ಗುರುವಾರ ಆರಂಭಗೊಳ್ಳಲಿದೆ.

    ಮೊದಲ ಟೆಸ್ಟ್ ವೇಳೆ ಮೊಣಕೈಗೆ ಗಾಯಗೊಂಡಿದ್ದ ವಿಲಿಯಮ್ಸನ್ ಜೂನ್ 18ರಿಂದ ಸೌಥಾಂಪ್ಟನ್‌ನಲ್ಲಿ ನಡೆಯಲಿರುವ ಡಬ್ಲ್ಯುಟಿಸಿ ಫೈನಲ್‌ಗೆ ಫಿಟ್ ಆಗಿರಬೇಕೆಂಬ ಕಾರಣದಿಂದಾಗಿ ಪಂದ್ಯದಿಂದ ಹೊರಗುಳಿಯಲಿದ್ದು, ಎಡಗೈ ಬ್ಯಾಟ್ಸ್‌ಮನ್ ಟಾಮ್ ಲಾಥಮ್ ತಂಡವನ್ನು ಮುನ್ನಡೆಸಲಿದ್ದಾರೆ. ಲಾಥಮ್ ಈ ಮುನ್ನ 2 ಟೆಸ್ಟ್‌ಗಳಲ್ಲಿ ನಾಯಕತ್ವ ವಹಿಸಿದ ಅನುಭವ ಹೊಂದಿದ್ದು, ವಿಲ್ ಯಂಗ್ ಆಡುವ ಬಳಗದಲ್ಲಿ ವಿಲಿಯಮ್ಸನ್ ಸ್ಥಾನವನ್ನು ತುಂಬಲಿದ್ದಾರೆ.

    ಮೊದಲ ಪಂದ್ಯದಿಂದ ವಿಶ್ರಾಂತಿ ಪಡೆದಿದ್ದ ಎಡಗೈ ವೇಗಿ ಟ್ರೆಂಟ್ ಬೌಲ್ಟ್ 2ನೇ ಪಂದ್ಯದಲ್ಲಿ ಕಣಕ್ಕಿಳಿಯುವ ಸೂಚನೆಯನ್ನೂ ಕಿವೀಸ್ ಕೋಚ್ ಗ್ಯಾರಿ ಸ್ಟೆಡ್ ನೀಡಿದ್ದಾರೆ. ಇದರಿಂದ ವೇಗಿಗಳಾದ ಟಿಮ್ ಸೌಥಿ, ನೀಲ್ ವ್ಯಾಗ್ನರ್ ಮತ್ತು ಕೈಲ್ ಜೇಮಿಸನ್ ಅವರಲ್ಲಿ ಒಬ್ಬರು ವಿಶ್ರಾಂತಿ ಪಡೆಯಲಿದ್ದಾರೆ. ಬೆರಳಿನ ಗಾಯದಿಂದಾಗಿ ಎಡಗೈ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ ಕೂಡ 2ನೇ ಟೆಸ್ಟ್‌ನಿಂದ ಹೊರಬಿದ್ದಿದ್ದಾರೆ. ಪಂದ್ಯಕ್ಕೆ ಆತಿಥೇಯ ಇಂಗ್ಲೆಂಡ್ ತಂಡದಲ್ಲಿ ಕೆಲ ಬದಲಾವಣೆ ಆಗಲಿದ್ದು, ಟ್ವೀಟ್ ವಿವಾದದಿಂದ ಅಮಾನತುಗೊಂಡಿರುವ ವೇಗಿ ಒಲಿ ರಾಬಿನ್‌ಸನ್ ಸ್ಥಾನವನ್ನು ಕ್ರೇಗ್ ಓವರ್ಟನ್ ತುಂಬಬಹುದು.

    *ಆರಂಭ: ಮಧ್ಯಾಹ್ನ 3.30
    *ನೇರಪ್ರಸಾರ: ಸೋನಿ ಸಿಕ್ಸ್

    ಕೆಎಲ್​ ರಾಹುಲ್​ ಜತೆಗೆ ಗೆಳತಿ ಅಥಿಯಾ ಶೆಟ್ಟಿ ಕೂಡ ಸೌಥಾಂಪ್ಟನ್​ನಲ್ಲಿ ಕ್ವಾರಂಟೈನ್​?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts