More

    ಪಿತೃತ್ವ ರಜೆ ಮೇಲೆ ತೆರಳಿದ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್..

    ವೆಲ್ಲಿಂಗ್ಟನ್: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಬಳಿಕ ಪಿತೃತ್ವ ರಜೆ ಮೇಲೆ ತವರಿಗೆ ವಾಪಸಾಗಲಿದ್ದಾರೆ. ಜನವರಿಯಲ್ಲಿ ಪತ್ನಿ ಅನುಷ್ಕಾ ಶರ್ಮ ಮೊದಲ ಮಗುವಿಗೆ ಜನ್ಮನೀಡಲಿದ್ದಾರೆ. ಈ ವೇಳೆ ಪತ್ನಿ ಜತೆಗಿರಲು ಕೊಹ್ಲಿ ಪಿತೃತ್ವ ರಜೆ ಪಡೆದಿದ್ದಾರೆ. ಇದೀಗ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್, ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ಡಿಸೆಂಬರ್ 11 ರಿಂದ ವೆಲ್ಲಿಂಗ್ಟನ್‌ನಲ್ಲಿ ನ್ಯೂಜಿಲೆಂಡ್-ವೆಸ್ಟ್ ಇಂಡೀಸ್ ನಡುವಿನ ಎರಡನೇ ಪಂದ್ಯ ಆರಂಭವಾಗಲಿದೆ. ಕೇನ್ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದಕ್ಕಾಗಿ ಎರಡನೇ ಟೆಸ್ಟ್ ಪಂದ್ಯದಿಂದ ಕೇನ್ ಹಿಂದೆ ಸರಿಯುತ್ತಿದ್ದಾರೆ.

    ವಿಲಿಯಮ್ಸನ್ ಅಲಭ್ಯತೆಯಿಂದಾಗಿ ವಿಲ್ ಯಂಗ್ ತಂಡದಲ್ಲೇ ಉಳಿಯಲಿದ್ದು, ವಿಕೆಟ್ ಕೀಪರ್ ಬಿಜೆ ವಾಟ್ಲಿಂಗ್ ತಂಡಕ್ಕೆ ವಾಪಸಾಗಲಿದ್ದಾರೆ. ಗುರುವಾರ ಬೆಳಗ್ಗೆ ತಂಡ ತೊರೆದಿರುವ ವಿಲಿಯಮ್ಸನ್, ತವರಿಗೆ ವಾಪಸಾಗಿದ್ದು ಪತ್ನಿ ಸಾರಹ ಕೂಡಿಕೊಂಡಿದ್ದಾರೆ. ವಿಲಿಯಮ್ಸನ್ ತಂಡ ತೊರೆದಿರುವ ಕುರಿತು ಕೋಚ್ ಗ್ಯಾರಿ ಸ್ಟೀಡ್ ತಿಳಿಸಿದ್ದಾರೆ.

    ಮೊದಲ ಟೆಸ್ಟ್ ಪಂದ್ಯದಲ್ಲಿ ವಿಲಿಯಮ್ಸನ್ ವೈಯಕ್ತಿಕ ಶ್ರೇಷ್ಠ 251 ರನ್ ಸಿಡಿಸಿದ್ದರು. ಮೊದಲ ಪಂದ್ಯದಲ್ಲಿ 134 ರನ್‌ಗಳಿಂದ ಜಯ ದಾಖಲಿಸಿದ್ದ ನ್ಯೂಜಿಲೆಂಡ್, ಎರಡು ಪಂದ್ಯಗಳ ಸರಣಿಯಲ್ಲಿ 1- 0 ಯಿಂದ ಮುನ್ನಡೆ ಸಾಧಿಸಿದ್ದರು.

    VIDEO | ಭಾರ ಎತ್ತೋದಂದ್ರೆ ಏಳರ ಪೋರಿಗೆ ಬಲು ಸಲೀಸು !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts