More

    ಚಿಲುಮೆ ಮಠದ ಶ್ರೀಗಳ ರೀತಿಯಲ್ಲೇ ಅದೇ ದಿನ ದುರಂತ ಅಂತ್ಯ ಕಂಡ ಕಂಚುಗಲ್ ಬಂಡೇ ಮಠದ ಸಾಮೀಜಿ! ಡೆತ್​ನೋಟಲ್ಲಿದೆ ರಹಸ್ಯ?

    ರಾಮನಗರ: ಮಾಗಡಿಯ ಕಂಚುಗಲ್ ಬಂಡೇ ಮಠದ ಪೀಠಾಧ್ಯಕ್ಷ ಶ್ರೀ ಬಸವಲಿಂಗ ಸ್ವಾಮೀಜಿ(45) ಅವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಸೋಮವಾರ ಮುಂಜಾನೆ ಅವರ ಕೊಠಡಿಯಲ್ಲಿ ಪತ್ತೆಯಾಗಿದ್ದು, ಸಾವಿನ ಸುತ್ತ ಅನುಮಾನದ ಹುತ್ತ ಬೆಳೆಯುತ್ತಿದೆ.

    2021ರ ಡಿಸೆಂಬರ್​ 20ರಂದು(ಸೋಮವಾರ) ಮಾಗಡಿಯ ಚಿಲುಮೆ ಮಠದ ಶ್ರೀ ಬಸವಲಿಂಗ ಸ್ವಾಮೀಜಿ ಅವರ ಮೃತ ದೇಹ ಕಿಟಕಿಯಲ್ಲಿಯೇ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಘಟನೆ ಮಾಸುವ ಮುನ್ನವೇ ಕಂಚುಗಲ್​ ಬಂಡೇ ಮಠದ ಬಸವಲಿಂಗ ಸ್ವಾಮೀಜಿ ದೇಹವೂ ಇದೇ ರೀತಿ ಪತ್ತೆ ಆಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇವರಿಬ್ಬರ ಮೃತದೇಹಗಳು ಪತ್ತೆಯಾಗಿರುವುದು ಸೋಮವಾರ. ಅದೂ ಕಿಟಕಿಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ!

    ಕಂಚುಗಲ್​ ಬಂಡೇ ಮಠದ ಶ್ರೀ ಮಹಾಲಿಂಗೇಶ್ವರ ಸ್ವಾಮಿ ದೇವಾಲಯದ ಎದುರಿಗೆ ಇರುವ ಕೊಠಡಿಯಲ್ಲಿ ಶ್ರೀಗಳು ಭಾನುವಾರ ರಾತ್ರಿ ತಂಗಿದ್ದರು. ಆದರೆ ಸೋಮವಾರ ಮುಂಜಾನೆ ಎಂದಿನ ಸಮಯಕ್ಕೆ ಸ್ವಾಮೀಜಿ ಹೊರಗೆ ಬಂದಿರಲಿಲ್ಲ. ಆತಂಕಗೊಂಡ ವಿದ್ಯಾರ್ಥಿಗಳು ಹೋಗಿ ನೋಡಿದಾಗ ಸ್ವಾಮೀಜಿ ಅವರ ಮೃತ ದೇಹ ಕಿಟಕಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದನ್ನು ನೋಡಿ ವಿದ್ಯಾರ್ಥಿಗಳು ಬೆಚ್ಚಿಬಿದ್ದಿದ್ದಾರೆ. ಸ್ವಾಮೀಜಿ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಸಾವಿರಾರು ಭಕ್ತರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಲಭ್ಯ ಮಾಹಿತಿ ಪ್ರಕಾರ ಶ್ರೀಗಳು ಡೆತ್​ನೋಟ್​ ಬರೆದಿಟ್ಟಿದ್ದು, ಸ್ಥಳಕ್ಕೆ ಬಂದ ಪೊಲೀಸರಿಗೆ ಸಿಕ್ಕಿದೆ ಎನ್ನಲಾಗಿದೆ. ಆದರೆ ಡೆತ್​ನೋಟ್​ನಲ್ಲಿ ಏನಿದೆ? ಎನ್ನುವುದು ಇನ್ನೂ ಬಹಿರಂಗಗೊಂಡಿಲ್ಲ.

    ಪೂರ್ವಾಶ್ರಮ: ಪೂರ್ವಾಶ್ರಮದಲ್ಲಿ ಕಂಚುಗಲ್​ ಬಂಡೇಮಠದ ಚನ್ನಮಲ್ಲಯ್ಯ ಮತ್ತು ಪುಟ್ಟಗೌರಮ್ಮ ದಂಪತಿಯ 5 ಪುತ್ರರು ಮತ್ತು ಮೂವರು ಪುತ್ರಿಯರಲ್ಲಿ ಶ್ರೀ ಬಸವಲಿಂಗ ಸ್ವಾಮೀಜಿಗಳು ಸಹ ಒಬ್ಬರು. 8ನೇ ತರಗತಿವರೆಗೂ ಬಂಡೇಮಠದಲ್ಲಿಯೇ ಅಭ್ಯಾಸ ಮಾಡಿದ್ದ ಶ್ರೀಗಳು, ನಂತರ ಶ್ರೀ ಸಿದ್ದಗಂಗಾ ಮಠದಲ್ಲಿ ಅಭ್ಯಾಸ ಮುಂದುವರಿಸಿದ್ದರು. 1997ರಲ್ಲಿ ಮಠದ ಅಧ್ಯಕ್ಷರಾಗಿ ಪೀಠವನ್ನೇರಿದ್ದರು. ಪೀಠಾಧ್ಯಕ್ಷರಾದ ದಿನದಿಂದಲೂ ಅನ್ನ, ಅಕ್ಷರ ದಾಸೋಹ ಮಾಡುತ್ತಾ ಅಂದಿನಿಂದ ಇಂದಿನವರೆಗೂ ಬಂಡೇಮಠದ ಮತ್ತು ಭಕ್ತರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದರು. ಇತ್ತೀಚಿಗಷ್ಟೇ ಮಠದಲ್ಲಿ 25ನೇ ವಾರ್ಷಿಕೋತ್ಸವವನ್ನು ವಿಜೃಂಭಣೆಯಿಂದ ನೆರವೇರಿಸಿದ್ದರು.

    ಇನ್ನು ಚಿಲುಮೆ ಮಠದ ಶ್ರೀ ಬಸವಲಿಂಗ ಸ್ವಾಮೀಜಿ ಅವರು ದೊಡ್ಡಬಳ್ಳಾಪುರ ತಾಲೂಕಿನ ವಡಗೆರೆಯ ಮೂಲದವರು. ಇವರ ಪೂರ್ವಾಶ್ರಮದ ಹೆಸರು ಬಸವರಾಜು. ಪಿಯು ವಿದ್ಯಾಭ್ಯಾಸ ಮಾಡಿದ್ದ ಇವರು 1982ರಲ್ಲಿ ಸನ್ಯಾಸ ದೀಕ್ಷೆ ಪಡೆದಿದ್ದರು. ಭಕ್ತರ ಮನೆಯಲ್ಲಿ ಪೂಜೆ ಮುಗಿಸಿ 2021ರ ಡಿಸೆಂಬರ್​ 19ರಂದು (ಭಾನುವಾರ) ರಾತ್ರಿ ಮಠಕ್ಕೆ ಬಂದಿದ್ದ ಶ್ರೀಗಳು, ಸೋಮವಾರ ಬೆಳಗ್ಗೆ ಧನುರ್ಮಾಸ ಪೂಜೆ ಮತ್ತು ಸದಾಶಿವ ಸ್ವಾಮೀಜಿಗಳ ಗದ್ದುಗೆಗೆ ಪೂಜೆ ನೆರವೇರಿಸಿದ್ದರು. ಇದಾದ ಬಳಿಕ ಮಠದ ಕಿಟಕಿಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದರು.

    ನೇಣುಬಿಗಿದ ಸ್ಥಿತಿಯಲ್ಲಿ ಮಾಗಡಿ ಕಂಚುಗಲ್ ಬಂಡೇ ಮಠದ ಸ್ವಾಮೀಜಿ ಶವ ಪತ್ತೆ! ಭಕ್ತರಲ್ಲಿ ಆತಂಕ

    ಜನ ಹುಚ್ಚರಾಗಬಹುದು, ದಾರಿಯಲ್ಲೇ ಬಿದ್ದು ಸಾಯಬಹುದು… ಎಂದು ಭವಿಷ್ಯ ನುಡಿಯುತ್ತಲೇ ಪರಿಹಾರ ತಿಳಿಸಿದ ಕೋಡಿಶ್ರೀ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts