More

    ಆರೋಗ್ಯದ ಕಡೆ ಗಮನಹರಿಸಿ

    ಕನಕಗಿರಿ: ಯಾವುದೇ ಕಾಯಿಲೆಯನ್ನು ಕಡೆಗಣಿಸದೆ ಸೂಕ್ತ ಚಿಕಿತ್ಸೆ ಪಡೆಯುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ವೈದ್ಯ ಸಿದ್ದರಾಮೇಶ್ವರ ಹೇಳಿದರು

    ಸೇವಾಲಾಲ್ ಜಯಂತಿ ನಿಮಿತ್ತ ತಾಲೂಕಿನ ಚಿಕ್ಕ ತಾಂಡಾದಲ್ಲಿ ಶನಿವಾರ ಜಿಲ್ಲಾ ಆರೋಗ್ಯ ಇಲಾಖೆ, ಮುಸಲಾಪುರ ಪಿಎಚ್‌ಸಿ , ಕೆಎಚ್‌ಪಿಟಿ ಹಾಗೂ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಸಮುದಾಯ ಆಧಾರಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಸಣ್ಣ ಪುಟ್ಟ ಕಾಯಿಲೆಗಳೆಂದು ನಿರ್ಲಕ್ಷೃ ವಹಿಸುವುದರಿಂದ ಜೀವಕ್ಕೆ ಹಾನಿಯಾಗುವ ಸಂಭವವಿರುತ್ತದೆ. ಇತ್ತೀಚಿನ ದಿನಗಳಲ್ಲಿ ಬಹುತೇಕ ರೋಗಗಳಿಗೆ ಸರ್ಕಾರ ಕೆಲ ಯೋಜನೆಗಳಡಿ ಖಾಸಗಿ ಆಸ್ಪತ್ರೆಗಳಲ್ಲೂ ಉಚಿತವಾಗಿ ಚಿಕಿತ್ಸೆ ಪಡೆದುಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. ಸಾರ್ವಜನಿಕರು ಸದುಪಯೋಗ ಪಡೆದು ಆರೋಗ್ಯದ ರಕ್ಷಣೆಗೆ ಮುಂದಾಗಬೇಕು ಎಂದರು.

    ಪ್ರಸೂತಿ ತಜ್ಞೆ ಡಾ.ಸುಮತಿ ಗೌಡ ಮಾತನಾಡಿ, ಗರ್ಭಿಣಿ ಮಹಿಳೆಯರು ಪೌಷ್ಟಿಕ ಆಹಾರ ಸೇವಿಸುವ ಮೂಲಕ ಹುಟ್ಟುವ ಮಗು ರಕ್ತಹೀನತೆಯಿಂದ ಬಳಲುವುದನ್ನು ತಡೆಯಬೇಕು. ಗರ್ಭಿಣಿಯರು ಆಗಾಗ ಆರೋಗ್ಯ ತಪಾಸಣೆ ಮಾಡಿಸಬೇಕು ಎಂದರು. ಆಪ್ತ ಸಮಾಲೋಚಕ ಸಿದ್ದರಾಮಪ್ಪ, ನೇತ್ರಾಧಿಕಾರಿ ಮುರ್ತುಜಾ ಸಾಬ್, ಡಾ.ಸಹನಾ, ಗ್ರಾಪಂ ಅಧ್ಯಕ್ಷೆ ಸರಸ್ವತಿ ಹನುಮಂತ ಚವ್ಹಾಣ್ ಸದಸ್ಯರಾದ ಅಮರೇಶ್ ಚವ್ಹಾಣ್, ಗೌರಮ್ಮ ನೀಲಪ್ಪ ಚವ್ಹಾಣ್, ಪಿಡಿಒ ಅಮರೇಶ ರಾಠೋಡ್, ಪ್ರಮುಖರಾದ ಲೋಕಪ್ಪ ಚೇರ್ಮನ್, ಕೃಷ್ಣ ನಾಯ್ಕ, ಕಲ್ಯಾಣಪ್ಪ ರಾಥೋಡ್, ಆರೋಗ್ಯ ಇಲಾಖೆ ಸಿಬ್ಬಂದಿ ಸುಶೀಲಾ ದೇವಿ, ಮಹಾದೇವಕ್ಕ, ನಾಗರಾಜ್, ರಮೇಶ್, ಮೆಹಬೂಬ್, ಅಮೀನ್ ಸಾಬ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts