More

    ವಾಲ್ಮೀಕಿ ಶ್ರೀಗಳ ಹೋರಾಟದಿಂದ ಮೀಸಲಾತಿ ಲಭ್ಯ- ಡಿಸಿಸಿ ಅಧ್ಯಕ್ಷ ಶಿವರಾಜ ತಂಗಡಗಿ ಹೇಳಿಕೆ

    ಕನಕಗಿರಿ: ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಶ್ರೀಗಳ 257 ದಿನ ಅಹೋರಾತ್ರಿ ಹೋರಾಟದ ಫಲವಾಗಿ ಸರ್ಕಾರ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸಿದೆ. ಕೇಂದ್ರ ಸರ್ಕಾರ ಅನುಸೂಚಿ 9ಕ್ಕೆ ಸೇರಿಸಿದರೆ ಅಧಿಕೃತವಾಗಲಿದೆ ಎಂದು ಡಿಸಿಸಿ ಅಧ್ಯಕ್ಷ ಶಿವರಾಜ ತಂಗಡಗಿ ಹೇಳಿದರು. ಪಟ್ಟಣದ ಎಪಿಎಂಸಿ ಸಮುದಾಯ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ವಾಲ್ಮೀಕಿ ಸಮಾಜದ ಚಿಂತನ-ಮಂಥನ ಸಭೆಯಲ್ಲಿ ಮಾತನಾಡಿದರು. ಕ್ಷೇತ್ರದ ಹಾಲಿ ಶಾಸಕರಿಗೆ ವಾಲ್ಮೀಕಿ ಸಮಾಜಕ್ಕೆ ಕನಿಷ್ಠ ಸೌಲಭ್ಯ ಕಲ್ಪಿಸಲು ಸಾಧ್ಯವಾಗಿಲ್ಲ. ಡಾ.ಅಂಬೇಡ್ಕರ ವಸತಿ ಯೋಜನೆಯಡಿ ಆಶ್ರಯ ಮನೆಗಳು ಮಂಜೂರಾಗದೆ ಅನ್ಯಾಯವಾಗಿದೆ ಎಂದರು. ಮುಖಂಡರಾದ ರಾಮನಗೌಡ ಬುನ್ನಟ್ಟಿ, ವೆಂಕಟೇಶ ಗೋಡಿನಾಳ, ಶರಣೇಗೌಡ, ರವಿ ಪಾಟೀಲ್, ರಾಜಸಾಬ್ ನಂದಾಪುರ, ಬೆಟ್ಟಪ್ಪ ಜೀರಾಳ, ಶರಣಪ್ಪ ಸೋಮಸಾಗರ, ಶಶಿಧರ ಹುಲಸನಹಟ್ಟಿ, ಸಣ್ಣ ರಾಮಣ್ಣ ನಾಯಕ, ರಾಮು ಆಗೋಲಿ, ಮಂಜುನಾಥ ನಾಯಕ, ಕರಿಯಪ್ಪ ಹನುಮನಾಳ, ರಾಮಚಂದ್ರ ಸೇರಿದಂತೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts