More

    ಸಾಮಾಜಿಕ ನೆಲೆಗಟ್ಟಿನಲ್ಲಿ ಹೋರಾಟ

    ಕನಕಗಿರಿ: ಭಾರತದ ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರದ ರಾಜಕಾರಣದಲ್ಲಿ ದಲಿತ ನಾಯಕ ಜಗಜೀವನ ರಾಮ್‌ರ ಪಾತ್ರ ಪ್ರಮುಖವಾಗಿದೆ ಎಂದು ಬಿಜೆಪಿ ಮಂಡಲ ಕಾರ್ಯದರ್ಶಿ ಗ್ಯಾನಪ್ಪ ಗಾಣದಾಳ ಹೇಳಿದರು.

    ಪಟ್ಟಣದ ಬಿಜೆಪಿ ಮಂಡಲ ಕಚೇರಿಯಲ್ಲಿ ಬುಧವಾರದಂದು ಆಯೋಜಸಿದ್ದ ಬಾಬು ಜಗಜೀವನ್‌ರಾಮ್‌ರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಭಾರತದಲ್ಲಿ ದೀರ್ಘ ಕಾಲದಿಂದ ಬೆಳೆದುಕೊಂಡು ಬಂದಿದ್ದ ಮೇಲು-ಕೀಳು ತಾರತಮ್ಯ, ಜಾತಿ ಪದ್ಧತಿ, ಅಸ್ಪೃಶ್ಯ ಎಂಬ ಮನೋಭಾವಗಳನ್ನು ತೊಡೆದು ಹಾಕಲು ಸಾಮಾಜಿಕ ನೆಲೆಗಟ್ಟಿನಲ್ಲಿ ಹೋರಾಡಿದವರು. 1908 ಏ.5 ರಂದು ಬಿಹಾರದ ಆರಾ ಜಿಲ್ಲೆಯ ಚಾಂದ್ವಾ ಗ್ರಾಮದಲ್ಲಿ ಜನಿಸಿದ ಬಾಬು ಜಗಜೀವನ ರಾಮ್ ವಿದ್ಯಾರ್ಥಿಯಾಗಿದ್ದಾಗಲೇ ಸಾಕಷ್ಟು ನಿಂದನೆ, ಅಪಮಾನ ಹಾಗೂ ನೋವುಗಳನ್ನು ಅನುಭವಿಸಿದ್ದರು.

    ಸಣ್ಣ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ಜಗಜೀವನ್ ರಾಮ್‌ರಿಗೆ ತಾಯಿ ವಾಸಂತಿ ದೇವಿಯೇ ಆಸರೆ. ಬಾಲಕ ರಾಮ್ ಆರಾದಲ್ಲಿನ ಮಾಧ್ಯಮಿಕ ಶಾಲೆಯಲ್ಲಿ ನಡೆದ ಕುಡಿವ ನೀರಿನ ಮಡಕೆಗಳೇ ಅವರಿಗೆ ಬಹುವಾಗಿ ಕಾಡಿತು. ಇದುವೇ ಅವರ ಜೀವನದ ಬದಲಾವಣೆಗೆ ಕಾರಣವಾಯಿತು. ಜೀವನದುದ್ದಕ್ಕೂ ರಾಮ್ ನಡೆಸಿದ ಎಲ್ಲ ಚಟುವಟಿಕೆಗಳ ಹಿಂದೆ ಈ ನೋವು ಉಳಿದುಕೊಂಡೇ ಇತ್ತು. ಇಂತಹ ಅಪಮಾನದಿಂದ ದಲಿತರನ್ನು ಪಾರು ಮಾಡುವ ಆಶಯವೇ ರಾಮ್ ಅವರ ಎಲ್ಲ ಚಟವಟಿಕೆಗಳ ಪ್ರಧಾನ ಅಂಶವಾಗಿ ಮಾರ್ಪಟ್ಟಿತ್ತು. ಮುಂದೆ ದಲಿತ ನಾಯಕರಾಗಿ ಬೆಳೆದು ಉಪ ಪ್ರಧಾನಿಯಾಗುವವರೆ ಬೆಳೆದರು ಎಂದರು.

    ಬಿಜೆಪಿ ಮಂಡಲ ಅಧ್ಯಕ್ಷ ಮಹಾಂತೇಶ್ ಸಜ್ಜನ್, ಪಪಂ ಸದಸ್ಯರಾದ ಸುರೇಶ ಗುಗ್ಗಳಶೆಟ್ರ, ಶೇಖಪ್ಪ ಪೂಜಾರ, ಮುಖಂಡರಾದ ರಂಗಪ್ಪ ಕೊರಗಟಗಿ, ವೆಂಕಟೇಶ್ ನೀರಲೂಟಿ, ರುದ್ರಪ್ಪ ದೇವರೆಡ್ಡಿ, ಅಶ್ವಿನಿ ಟಿ. ದೇಸಾಯಿ, ಹುಲಿಗೆಮ್ಮ ನಾಯಕ, ನರಸಪ್ಪ ಕುರುಗೋಡು, ಪೂಜಪ್ಪ, ವೆಂಕಟೇಶ್ ಪೂಜಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts