More

  ಹೋರಾಟದ ಪ್ರತಿಫಲವಾಗಿ ದುಡಿಯುವ ವರ್ಗಗಳಿಗೆ ಮೂಲಹಕ್ಕು ಲಭ್ಯ

  ಚಿಕ್ಕಮಗಳೂರು: ಬಂಡವಾಳ ಶಾಹಿಗಳ ಕಪಿಮುಷ್ಠಿಯಿಂದ ಮೂಲಭೂತ ಹಕ್ಕುಗಳನ್ನು ಪಡೆದುಕೊಳ್ಳುವ ಸಲುವಾಗಿ ಹಲವಾರು ವರ್ಷಗಳಿಂದ ಹೋರಾಡಿದ ಪರಿಣಾಮ ದುಡಿಯುವ ವರ್ಗದ ಕಾರ್ಮಿಕರಿಗೆ ಸೌಕರ್ಯಗಳು ಲಭ್ಯವಾಗುತ್ತಿದೆ ಎಂದು ಎಐಟಿಯುಸಿ ಜಿಲ್ಲಾಧ್ಯಕ್ಷ ಕೆ.ಗುಣಶೇಖರ್ ತಿಳಿಸಿದರು.

  ನಗರದ ತಮಿಳು ಕಾಲನಿ ಸಮೀಪದ ಸಿಪಿಐ ಜಿಲ್ಲಾ ಕಚೇರಿಯಲ್ಲಿ ಎಐಟಿಯುಸಿ, ಸಿಪಿಐ ಹಾಗೂ ಕಟ್ಟಡ ಕಾರ್ಮಿಕರ ಸಂಘದಿAದ ಬುಧವಾರ ಏರ್ಪಡಿಸಲಾಗಿದ್ದ ೧೩೯ನೇ ವಿಶ್ವ ಕಾರ್ಮಿಕರ ದಿನಾಚರಣೆ ಅಂಗವಾಗಿ ಕೆಂಬಾವುಟದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ೧೮೮೬ಕ್ಕೂ ಹಿಂದೆ ಕಾರ್ಮಿಕರಿಗೆ ನಿಗಧಿತ ಸಮಯ ಹಾಗೂ ಮೂಲಹಕ್ಕುಗಳನ್ನು ಪಡೆಯಲು ಚಿಕಾಗೋದದಲ್ಲಿ ಬಿಳಿಬಾವುಟವನ್ನು ಹಿಡಿದು ಹೋರಾಟ ರೂಪಿಸಿದ್ದರು. ಇದನ್ನು ವಿರೋಧಿಸಿ ಸಾಮ್ರಾಜ್ಯಶಾಹಿಗಳು ಕಾರ್ಮಿಕರ ನಡೆಯನ್ನು ವಿರೋಧಿಸಿ ದಮನಕಾರಿ ಹಲ್ಲೆಗೊಳಿಸಿದ ಪರಿಣಾಮ ರಕ್ತಸಿತ್ತ ಕಲೆಯಿಂದ ಕೆಂಬಾವುಟವಾಗಿ ಇಂದು ಕಾರ್ಮಿಕರನ್ನು ಪ್ರತಿನಿಧಿಸಲಾಗುತ್ತಿದೆ ಎಂದು ಹೇಳಿದರು.
  ಅಂದಿನ ಸಮಯದಲ್ಲಿ ಕಾರ್ಖಾನೆ ಸ್ಥಾಪಿಸುವ ವೇಳೆಯಲ್ಲಿ ಕಾರ್ಮಿಕರಿಗೆ ಪ್ರತಿನಿತ್ಯ ೧೬ ಗಂಟೆಗಳ ಕಾಲ ಕೆಲಸ ನಿರ್ವಹಿಸಬೇಕಿತ್ತು. ನಿಗಧಿತ ವೇತನವಿಲ್ಲ, ಕೇವಲ ಕಾರ್ಖಾನೆಗಳ ಮಾಲೀಕರನ್ನು ಇನ್ನಷ್ಟು ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿತ್ತು. ಆ ಸಂದರ್ಭದಲ್ಲಿ ದುಡಿಯುವ ವರ್ಗ ಒಗ್ಗಟ್ಟಿನಿಂದ ಹಕ್ಕಿಗಾಗಿ ಹೋರಾಡಿದ ಪ್ರತಿಫಲ ವಿಶ್ವದಾದ್ಯಂತ ಕಾರ್ಮಿಕರ ದಿನ ಆಚರಿಸಲಾಗುತ್ತಿದೆ ಎಂದರು.
  ಕೇAದ್ರ ಸರ್ಕಾರ ಕೆಲವು ದ್ವಂದ ನಿಲುವುಗಳಿಂದ ದೇಶದಲ್ಲಿ ಅನೇಕ ಕಾರ್ಖಾನೆಗಳು, ಸಣ್ಣ ಕೈಗಾರಿಕೋದ್ಯಮಗಳು ಕ್ಷೀಣಿಸಿದ ಪರಿಣಾಮ ಲಕ್ಷಗಟ್ಟಲೇ ಮಂದಿ ಕೂಲಿಕಾರ್ಮಿಕರು ದಿನನಿತ್ಯದ ಜೀವನಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಯಿತು. ಅಲ್ಲದೇ ಕೆಲಸ-ಕಾರ್ಯಗಳಿಲ್ಲದೇ ಎಲ್ಲೆಂದರಲ್ಲೇ ಬದುಕು ಕಟ್ಟಿಕೊಳ್ಳ ಲು ಅಲೆದಾಡುವಂಥ ಪರಿಸ್ಥಿತಿ ಎದುರಾಯಿತು ಎಂದು ಹೇಳಿದರು.
  ಹಲವಾರು ದಶಕಗಳಿಂದ ದೇಶವನ್ನಾಳಿದ ಎರಡು ರಾಷ್ಟಿçÃಯ ಪಕ್ಷಗಳು ಕಾರ್ಮಿಕರನ್ನು ಶೋಷಣೆಗೆ ಒಳಪಡಿಸುತ್ತಿದ್ದರು. ಪ್ರಸ್ತುತ ಕೇಂದ್ರ ಸರ್ಕಾರದ ದಮನಕಾರಿ ನೀತಿಗಳಿಂದ ಕಾರ್ಮಿಕರು ನಿತ್ಯ ಜೀವನ ನಡೆಸಲು ಸಂಕಷ್ಟಪಡಬೇಕಾದ ಸ್ಥಿತಿ ಬಂದಿದೆ. ಆದರೆ ಕಮ್ಯೂನಿಸ್ಟ್ ಪಕ್ಷವು ಕಾರ್ಮಿಕರ ಬೆಳವಣಿಗೆಯ ನಿಟ್ಟಿನಲ್ಲಿ ಅನೇಕ ವರ್ಷಗಳಿಂದ ಪ್ರತಿಭಟಿಸಿ ನ್ಯಾಯಕ್ಕಾಗಿ ಹೋರಾಡುತ್ತಿದೆ ಎಂದು ತಿಳಿಸಿದರು.
  ಸಿಪಿಐ ರಾಜ್ಯ ಕಾರ್ಯದರ್ಶಿ ಎಚ್.ಎಂ.ರೇಣುಕಾರಾಧ್ಯ ಮಾತನಾಡಿ, ಪ್ರಪಂಚದ ಹಲವಾರು ದೇಶಗಳಲ್ಲಿ ವಿವಿಧ ಧರ್ಮ, ಭಾಷೆಗಳಿದ್ದರೂ ತಾರತಮ್ಯವಿಲ್ಲದೇ ಒಂದಾಗಿ ಆಚರಿಸುವ ಹಬ್ಬವೆಂದರೆ ಕಾರ್ಮಿಕ ದಿನಾಚರಣೆ. ದೇಶವನ್ನು ಕಟ್ಟುವಲ್ಲಿ ಕಾರ್ಮಿಕರ ಮಹತ್ತರ ಪಾತ್ರ ಬಹಳಷ್ಟಿದೆ ಎಂದರು.
  ದೇಶದಲ್ಲಿ ದುಡಿದು ಸಂಪತ್ತನ್ನು ಸೃಷ್ಟಿಸುವವರು ಕೂಲಿಕಾರ್ಮಿಕರು, ರೈತರು ಹಾಗೂ ಕಟ್ಟಡ ಕಾರ್ಮಿಕರು. ಇವರಿಗೆ ಮೂಲಭೂತ ಹಕ್ಕುಗಳನ್ನು ಕೊಡಿಸುವುದೇ ಕಾರ್ಮಿಕ ದಿನಾಚರಣೆ ಮೂಲಧ್ಯೇಯ. ಕಾರ್ಮಿಕರ ಇತಿಹಾಸದಲ್ಲಿ ರಕ್ತಸಿತ್ತವಾಗಿ ನಡೆದಂತಹ ಘಟನೆಗಳನ್ನು ಮರೆಯಬಾರದು. ಕಾರ್ಮಿಕರು ಹೋರಾಡಿದ ನೈಜ ಇತಿಹಾಸವನ್ನು ಪಸರಿಸುವ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.
  ಸಿಪಿಐ ಜಿಲ್ಲಾ ಕಾರ್ಯದರ್ಶಿ ಸಿ.ವಸಂತ್‌ಕುಮಾರ್ ಮಾತನಾಡಿ, ಕಾರ್ಮಿಕರ ಭವಿಷ್ಯವನ್ನು ಉಜ್ವಲಿಸುವ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ರಾಜಕೀಯ ಅಥವಾ ಇನ್ನಿತರೆ ಕಾರ್ಯಕ್ರಮಗಳಿಗೆ ಸಾವಿರಾರು ಸಂಖ್ಯೆಯಲ್ಲಿ ಸೇರುವಂತೆ ಕಾರ್ಮಿಕ ಕಾರ್ಯಕ್ರಮಗಳಿಗೆ ಬಿಡುವು ಮಾಡಿ ಕೊಂಡು ಆಗಮಿಸಿ ಮಾಹಿತಿ ಪಡೆದುಕೊಳ್ಳಬೇಕು ಎಂದರು.
  ಕಾರ್ಯಕ್ರಮದಲ್ಲಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ರಾಧಾಸುಂದ್ರೇಶ್, ನಗರ ಕಾರ್ಯದರ್ಶಿ ತಂಪಿತ ಗೌಡ, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಜಿ.ರಘು, ಮುಖಂಡರಾದ ಎಸ್.ವಿಜಯ್‌ಕುಮಾರ್, ಜಯಕುಮಾರ್, ಮಂಜೇಗೌಡ, ಸಿ.ಮಂಜುನಾಥ್, ಜಾನಕಿ ಮತ್ತಿತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts