More

    ಆನಂದ, ಆತಂಕ ತಂದಿರುವ ಆಶ್ಲೇಷ

    ಕನಕಗಿರಿ: ತಾಲೂಕಿನೆಲ್ಲೆಡೆ ಶನಿವಾರದಿಂದ ತುಂತುರು ಮಳೆ ಸುರಿಯುತ್ತಿದ್ದು, ಈ ಆಶ್ಲೇಷ ಮಳೆ ಒಂದೆಡೆ ಸಂತಸ ಮತ್ತೊಂದೆಡೆ ಆತಂಕ ತಂದೊಡ್ಡಿದೆ.

    ನಿರಂತರ ಮಳೆಯಿಂದ ಕೆರೆ ಕಟ್ಟೆಗಳು ತುಂಬಿವೆ. ರೈತರ ಪಂಪ್‌ಸೆಟ್‌ಗಳಿಗೆ ನೀರು ಹೆಚ್ಚಾಗಿ ಸಿಗುತ್ತಿದೆ. ಇದರಿಂದ ಧನ-ಕರುಗಳಿಗೆ ಮೇವು ಸಮೃದ್ಧವಾಗಿ ಸಿಗುತ್ತಿದೆ. ಕುಡಿಯುವ ನೀರಿನ ಕೊರತೆ ನೀಗುತ್ತಿದೆ. ಇದು ಒಂದೆಡೆ ಸಂತಷದ ವಿಷಯ. ಆದರೆ, ಮುಂಗಾರು ಹಂಗಾಮಿನಲ್ಲಿ ಸಜ್ಜೆ, ನೆವಣಿ, ತೊಗರಿ, ಎಳ್ಳು, ಸೂರ್ಯಕಾಂತಿ ಬಿತ್ತಿರುವ ಕೃಷಿಕರಿಗೆ ಕಾಳುಗಳು ಪಕ್ವ ಆಗುವ ಸಮಯದಲ್ಲಿ ತುಂತುರು ಮಳೆ ಸುರಿಯುತ್ತಿರುವುದು ಆತಂಕ ತಂದಿದೆ. ಮಳೆಯಿಂದಾಗಿ ತೆನೆ ಮೇಲಿನ ಸುಂಕ ತೊಳೆದುಕೊಂಡುಹೋಗುವುದರಿಂದ ಕಾಳುಗಳು ಪಕ್ವ ಆಗುವ ಬದಲು ಜೊಳ್ಳು ಆಗುತ್ತವೆ. ಫಸಲು ಬಂದ ಮೇಲೆ ತೂಕ ಕಡಿಮೆಯಾಗುತ್ತದೆ. ಇದರಿಂದ ನಷ್ಟವಾಗುತ್ತದೆ ಎಂಬುದು ರೈತರ ಆತಂಕ. ಇದಲ್ಲದೆ ಮಣ್ಣು-ಜಂತಿಯ ಮನೆಗಳು ಸೋರುತ್ತಿವೆ. ಕೆಲ ಮನೆಗಳು ಬೀಳುವ ಆತಂಕ ಎದುರಾಗಿದೆ.

    ಮಳೆರಾಯ ಬಂದರೆ ಕೇಡೇನು ಇಲ್ಲ. ಭೂಮಿ ಹಸಿಯಾಗುತ್ತದೆ ಬೋರ್‌ಗಳಿಗೆ ನೀರು ಬರುತ್ತದೆ. ಆದರೆ, ಕಾಳು ಗಟ್ಟಿಯಾಗುವ ಸಂಧರ್ಭ ಜಿಟಿಜಿಟಿ ಮಳೆ ಸುರಿಯುತ್ತಿರುವುದರಿಂದ ಕಾಳು-ಕಡಿ ಜೊಳ್ಳಾಗುತ್ತವೆ, ಏನ್ ಮಾಡಕಾಗತೈತ್ರಿ ಎಲ್ಲ ಪರಮಾತ್ಮನ ಇಚ್ಛೆ. ಆತ ಎಷ್ಟು ಕೊಟ್ತಾನ ಅಷ್ಟು ನಮ್ದು. ಇನ್ನುಳಿದಿದ್ದು ಆತನದು. ಜೋರಾಗಿ ಮಳೆ ಬಂದು ನಿಂತು, ಬಿಸಿಲು ಬಿದ್ದರೆ ಆತಂಕವಿಲ್ಲ. ಜಿಟಿ ಜಿಟಿ ಮಳೆ, ಮೋಡ ಕವಿದ ವಾತಾವರಣ ಮನುಷ್ಯ, ಪ್ರಾಣಿ, ಬೆಳೆಗೆ ತೊಂದರೆ. ಹಿಂಗಾದ್ರೆ ರೋಗ-ರುಜಿನ ಭಾಧಿಸುತ್ತವೆ.
    | ಶ್ರೀ ರುದ್ರಪ್ಪ ಬುಕನಟ್ಟಿ ಪ್ರಗತಿಪರ ಸಾವಯವ ಕೃಷಿ ರೈತ, ಕನಕಗಿರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts