More

    ಪೌಷ್ಟಿಕ ಆಹಾರ ಸೇವನೆ ಆದ್ಯತೆಯಾಗಲಿ

    ಕನಕಗಿರಿ: ಗರ್ಭಿಣಿಯರು ಪೌಷ್ಟಿಕ ಆಹಾರ ಸೇವಿಸುವುದರಿಂದ ಆರೋಗ್ಯವಂತರಾಗಿರಲು ಸಾಧ್ಯ ಎಂದು ಸಮುದಾಯ ಆರೋಗ್ಯ ಕೇಂದ್ರದ ವೈದ್ಯೆ ಬೀನಾದೇವಿ ಹೇಳಿದರು.

    ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಧಾನಮಂತ್ರಿ ಸುರಕ್ಷಾ ಮಾತೃತ್ವ ಅಭಿಯಾನ ಹಾಗೂ ಸೀಮಂತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಂಗಳವಾರ ಮಾತನಾಡಿದರು.

    ಗರ್ಭಿಣಿಯರು ಹೆರಿಗೆ ಸಮಯದಲ್ಲಿ ರಕ್ತದ ಕೊರತೆ ಸೇರಿ ನಾನಾ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಇದು ಮಕ್ಕಳು ಅಪೌಷ್ಟಿಕತೆಯಿಂದ ಬಳಲು ಕಾರಣವಾಗುತ್ತದೆ. ಹೀಗಾಗಿ ತರಕಾರಿ, ಪೌಷ್ಟಿಕ ಆಹಾರ ಸೇವಿಸಬೇಕು ಎಂದು ಸಲಹೆ ನೀಡಿದರು.

    ತಹಸೀಲ್ದಾರ್ ವಿಶ್ವನಾಥ ಮುರಡಿ ಮಾತನಾಡಿ, ಮಕ್ಕಳು ಹಾಗೂ ಗರ್ಭಿಣಿಯರಲ್ಲಿ ಅಪೌಷ್ಟಿಕತೆ ತಗ್ಗಿಸಲು ಸರ್ಕಾರ ಹಲವು ಯೋಜನೆ ಜಾರಿಗೆ ತಂದಿದೆ. ಪೌಷ್ಟಿಕ ಆಹಾರ, ಮೊಟ್ಟೆ, ಬೆಲ್ಲ, ಕಾಳುಗಳನ್ನು ನೀಡುತ್ತಿದೆ. ಸದರಿ ಯೋಜನೆಗಳನ್ನು ಬಳಸಿಕೊಂಡಲ್ಲಿ ಅಪೌಷ್ಟಿಕತೆಯಿಂದ ದೂರ ಉಳಿಯಬಹುದು ಎಂದರು.

    ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಚ್.ಎಂ. ಗುರುರಾಜ್, ಗರ್ಭಿಣಿಯರ ಆರೈಕೆ, ತಾಯಿ ಹಾಲಿನ ಮಹತ್ವ ಕುರಿತು ವಿವರಿಸಿದರು. ಪಪಂ ಸದಸ್ಯೆ ನಂದಿನಿ ಓಣಿಮನಿ, ಗ್ಲೋಬಲ್ ಆಸ್ಪತ್ರೆಯ ಡಾ. ಸಿದ್ದರಾಮೇಶ್, ರಾಪ್ರಾಶಾಶಿ ಸಂಘದ ತಾಲೂಕು ಅಧ್ಯಕ್ಷೆ ಶಂಶಾದ್ ಬೇಗಂ, ಕೆಎಚ್‌ಪಿಟಿಯ ಉಮಾರೆಡ್ಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts