More

    ನರೇಗಾದಡಿ ಕಲ್ಯಾಣಿಗಳ ಪುನಶ್ಚೇತನ ಮಾಡುವುದಾಗಿ ಹೇಳಿದ ತಾಪಂ ಇಒ ಕೆ.ವಿ. ಕಾವ್ಯಾರಾಣಿ ಮಾಹಿತಿ

    ಕನಕಗಿರಿ: ಜಲ ಮೂಲಗಳಲ್ಲಿ ಒಂದಾಗಿರುವ ಅರಸರ ಕಾಲದ ತಾಲೂಕಿನ ಕಲ್ಯಾಣಿಗಳನ್ನು ನರೇಗಾ ಯೋಜನೆಯಡಿ ಪುನಶ್ಚೇತನಗೊಳಿಸುತ್ತಿದ್ದು, ಗತ ಕಾಲದ ವೈಭವ ಮರುಕಳಿಸಲಿದೆ ಎಂದು ತಾಪಂ ಇಒ ಕೆ.ವಿ. ಕಾವ್ಯಾರಾಣಿ ಹೇಳಿದರು.

    ತಾಲೂಕಿನ ಹುಲಿಹೈದರ ಗ್ರಾಪಂ ವ್ಯಾಪ್ತಿಯಲ್ಲಿ ಮಂಗಳವಾರ ನರೇಗಾದಡಿ ಕೈಗೊಳ್ಳಲಾಗಿರುವ ಕಲ್ಯಾಣಿಗಳ ಪುನಶ್ಚೇತನ ಕಾಮಗಾರಿ ಪರಿಶೀಲಿಸಿ ಮಾತನಾಡಿದರು. ಪಾಳು ಬಿದಿದ್ದ ಕಲ್ಯಾಣಿಗಳ ಪುನಶ್ಚೇತನದಿಂದ ನಾವುಗಳೇ ಇಂದು ಯಾವುದೋ ಪ್ರೇಕ್ಷಣಿಯ ಸ್ಥಳಕ್ಕೆ ಭೇಟಿ ನೀಡಿದ ಅನುಭವ ಮೂಡುತ್ತಿದೆ ಎಂದರು.

    ನರೇಗಾದ ಪೆಟ್ ಪ್ರೊಜೆಕ್ಟ್ ಯೋಜನೆಯಡಿ ಕಲ್ಯಾಣಿಗಳ ಪುನಶ್ಚೇತನ ಕೈಗೊಳ್ಳಲಾಗಿದೆ. ಈ ಮೊದಲು ಕಾರ್ಮಿಕರಿಗೆ 100 ದಿನ ಕೆಲಸ ನೀಡುವ ಉದ್ದೇಶದಿಂದ ಬದು ನಿರ್ಮಾಣ, ನಾಲಾ ನಿರ್ಮಾಣ, ಅಂಗನವಾಡಿ ಕಟ್ಟದ ದುರಸ್ತಿ ಸೇರಿ ನಾನಾ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿತ್ತು. ಈಚೆಗೆ ಜಿಲ್ಲೆಯ ಕೆಲವು ಕಡೆಗಳಲ್ಲಿನ ಪಾಳುಬಿದ್ದ ಕಲ್ಯಾಣಿಗಳ ಪುನಶ್ಚೇತನ ಯಶಸ್ವಿಯಾಗಿದ್ದರಿಂದ ತಾಲೂಕು ವ್ಯಾಪ್ತಿಯ ಕಲ್ಯಾಣಿಗಳ ಉಳಿವು ಮತ್ತು ಅಂತರ್ಜಲ ಹೆಚ್ಚಳ ಉದ್ದೇಶದಿಂದ ಕಲ್ಯಾಣಿಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

    ಗ್ರಾಪಂ ಪಿಡಿಒಗಳಾದ ರವೀಂದ್ರ ಕುಲಕರ್ಣಿ, ವೆಂಕೋಬ, ತಾಂತ್ರಿಕ ಸಂಯೋಜಕ ತನ್ವೀರ್, ಐಇಸಿ ಸಂಯೋಜಕ ಚಂದ್ರಶೇಖರ, ಗ್ರಾಪಂ ಸದಸ್ಯರಾದ ರಾಜಾಸಾಬ್ ಗೌರಿಪುರ, ಜಗದೀಶಪ್ಪ ಗದ್ದಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts