More

    ಭಾವೈಕ್ಯತೆಗೆ ಅಡಿಪಾಯ ಹಾಕಿ ಮಹಾನ್ ನಾಯಕ

    ಕಾನಹೊಸಹಳ್ಳಿ: ಭಾವೈಕ್ಯತೆ ಭಾರತ ನಿರ್ಮಾಣಕ್ಕೆ ಅಡಿಪಾಯ ಹಾಕಿದ ಮಹನೀಯರಲ್ಲಿ ಡಾ.ಹರ್ಡೀಕರ್ ಮಹಾನ್ ನಾಯಕರೆಂದು ಭಾರತ ಸೇವಾದಳದ ಜಿಲ್ಲಾ ಸಂಘಟಕರಾದ ಗಣೇಶ್ ಬಾರಿಕರ ನುಡಿದರು. ಸಮೀಪದ ಚಂದ್ರಶೇಖರಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ನಡೆದ ಭಾರತ ಸೇವಾದಳ ಸಂಸ್ಥಾಪಕ ಡಾ.ಹರ್ಡೀಕರ್ ಅವರ 47ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಯುವಕರನ್ನು ಶಿಸ್ತುಬದ್ಧ ಸಂಘಟನೆ ಮೂಲಕ ಸಜ್ಜುಗೊಳಿಸಲು ಹರ್ಡೀಕರ್ ಹಿಂದೂಸ್ಥಾನ ಸೇವಾದಳವನ್ನು ಮಹಾತ್ಮ ಗಾಂಧಿಜೀ ತತ್ವಗಳಡಿ ಸ್ಥಾಪಿಸಿದ್ದರು. ಆನಂತರ ಬೇಲೂರು ಮಹಾಸಮಾವೇಶದಲ್ಲಿ ಡಾ.ಹರ್ಡೀಕರ್ ಅವರು ಹಿಂದೂಸ್ತಾನ್ ಸೇವಾದಳವನ್ನು ಭಾರತ ಸೇವಾದಳವನ್ನಾಗಿ ರಾಜಕೀಯ ಪಕ್ಷಾತೀತವಾಗಿ ರೂಪಿಸಿ ಮಕ್ಕಳಲ್ಲಿ ಶಿಸ್ತು, ಸಂಯಮ, ದೇಶಭಕ್ತಿ, ಸೇವಾಮನೋಭಾವನೆ ಮೂಡಿಸಲು ರೂಪಿಸಿದರೆಂದು ಸ್ಮರಿಸಿದರು ಅಲ್ಲದೆ ಅವರು ಹಾಕಿಕೊಟ್ಟ ಹಾದಿಯಲ್ಲಿ ಸಾಗಿದಾಗ ಮಾತ್ರವೇ ದೇಶದ ಐಕ್ಯತೆ ಕಾಪಾಡಲು ಸಾಧ್ಯ ಆದ್ದರಿಂದ ಪ್ರತಿಯೊಂದು ಶಾಲೆಯಲ್ಲಿಯೂ ಸೇವಾದಳ ಘಟಕವನ್ನು ಸ್ಥಾಪಿಸಿ ಮಕ್ಕಳಲ್ಲಿ ದೇಶಪ್ರೇಮ ತುಂಬಿಸಬೇಕೆಂದರು.

    ಈ ಸಂದರ್ಭದಲ್ಲಿಸೇವಾದಳದ ಶಾಖಾ ನಾಯಕರಾದ ದೈಹಿಕಶಿಕ್ಷಣ ಶಿಕ್ಷಕರಾದ ಎಚ್.ಡಿ.ಅರುಣ್‌ಕುಮಾರ್. ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೌಢಶಾಲೆ ಮುಖ್ಯಶಿಕ್ಷಕಿ ಎಂ.ಜಯಪಾರ್ವತಿ ವಹಿಸಿದ್ದರು. ಶಿಕ್ಷಕರಾದ ಡಿ.ಲಕ್ಷ್ಮಿದೇವಿ, ಜೆ.ಎಂ.ರೇವಣರಾಧ್ಯ, ಜಯಲಕ್ಷ್ಮಿ ಸೇರಿದಂತೆ ಶಿಕ್ಷಕರು ಸೇವಾದಳದ ಸ್ವಯಂಸೇವಕರು, ಎಲ್ಲಾ ವಿದ್ಯಾರ್ಥಿಗಳು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts