More

    ಗುಡೇಕೋಟೆ ಉತ್ಸವದಲ್ಲಿ ಮೇಳೈಸಿದ ಕಲಾವೈಭವ

    ಭೀಮಸಮುದ್ರ ರಂಗನಾಥ

    ಕಾನಹೊಸಹಳ್ಳಿ: ಗುಡೇಕೋಟೆಯ ಉತ್ಸವದ ಸಮಾರೋಪದಲ್ಲಿ ಭಾನುವಾರ ರಾತ್ರಿ ಕಲಾ ಸಿರಿವಂತಿಕೆ ವೈಭವಕ್ಕೆ ಸಾಂಸ್ಕೃತಿಕ ಮತ್ತು ಸಂಗೀತ ಕಾರ್ಯಕ್ರಮಗಳು ಸಾಕ್ಷಿಯಾದವು.

    ಪಾಳೆಗಾರ ಸಂಸ್ಥಾನದ ಗತ ವೈಭವನ್ನು ನೆನಪಿಸುವಂಥ ಹಲಗಲಿ ಬೇಡರ ನಾಟಕ ಹಾಗೂ ಒನಕೆ ಓಬವ್ವನ ಶೌರ್ಯದ ರೂಪಕವು ಪ್ರೇಕ್ಷಕರ ಭಾವುಕತೆಗೆ ದೂಡಿತು. ನುಂಕಪ್ಪ ಮತ್ತು ಕುರಿಹಟ್ಟಿ ರಾಜು ಅವರ ಸುಗಮ ಸಂಗೀತ ಗಾಯನ ವೀಕ್ಷಕರಿಗೆ ಮುದನೀಡಿತು. ರಂಗ ನಿರ್ದೇಶಕ ಶಿವನನಾಯಕ ದೊರೆ ನಿರ್ದೇಶನದಲ್ಲಿ ವಿದ್ಯಾರ್ಥಿಗಳ ಹಲಗಲಿ ಬೇಡರ ನಾಟಕ ಪಾಳೇಗಾರ ಗತ ನೆನಪು ಮೆಲುಕು ಹಾಕುವಂತೆ ಮಾಡಿತು. ಕಿರುತೆರೆಯ ಕಾಮಿಡಿ ಕಲಾವಿದರಾದ ಮಣೆನ್ನೂರು ಮನು, ಮಂಗಳೂರು ಸೂರ್ಯ, ಮಿಂಚು, ನಾಗರಾಜ್ ಮಾಸ್ತ್ ಕಾಮಿಡಿ ಕುಚುಗುಳಿ ನೀಡಿತು. ತಂಡದ ಸದಸ್ಯರು ನೀಡಿದ ಹನುಮಯಾಣ ರೂಪಕ ಜನರನ್ನು ಮನಸೊರೆಗೊಳಿಸಿತು. ಕಲ್ಲಹಳ್ಳಿ ಸದ್ಗರುಮೂರ್ತಿ ಮತ್ತು ಸಹ ಕಲಾವಿದರು ಒನಕೆ ಓಬವ್ವ ತನ್ನ ಪತಿ ಪರವಾಗಿ ರಣಭೂಮಿಗೆ ಇಳಿದು ಹೋರಾಟ ಮಾಡುವ ಕಿರು ರೂಪಕ ಪ್ರದರ್ಶಿಸಿದರು. ವೈರಿಗಳ ಸಂಚಿಗೆ ಬಲಿಯಾದ ದೃಶ್ಯವು ಪ್ರೇಕ್ಷಕರನ್ನು ಮೌನಕ್ಕೆ ಶರಣಾಗಿಸಿತು.

    ಕುಮಾರಿ ಮೇಘನಾ ಭರತ ನಾಟ್ಯವು ಜನರಿಗೆ ರಸದೌತಣ ನೀಡಿತು. ಪೇಟೆ ಬಸವೇಶ್ವರ ಕಲಾ ತಂಡವು ಮಧ್ಯರಾತ್ರಿಯಿಂದ ಆರಂಭಿಸಿದ ರಕ್ತರಾತ್ರಿ ಪೌರಾಣಿಕ ನಾಟಕವು ಸೋಮವಾರ ಬೆಳಗಿನ ಜಾವದವರಿಗೂ ಪ್ರದರ್ಶನಗೊಂಡಿತು. ಇದು ಸಾಂಸ್ಕೃತಿಕ ಕಲಾ ವೈಭವ ತೋರಿಸಿತು. ಕಾರ್ಯಕ್ರಮದ ಕೊನೆವರಿಗೆ ತಾಲೂಕು ಆಡಳಿತ ಮತ್ತು ಗ್ರಾಮದ ಮುಖಂಡರು ವೇದಿಕೆ ಮುಂದೆ ಕುಳಿತು ಕಲಾವಿದರಿಗೆ ಪ್ರೋತ್ಸಾಹಿಸುವ ಕಾರ್ಯ ಮಾಡಿದರು.

    ತಹಸೀಲ್ದಾರ್ ರಾಜು ಪಿರಂಗಿ, ಇಒ ರವಿಕುಮಾರ್, ನಾಗರಾಜ ಕೊಟ್ರಪ್ಪಗಳ, ಕಂದಾಯ ನಿರೀಕ್ಷಕ ಚೌಡಪ್ಪ, ಗ್ರಾಪಂ ಅಧ್ಯಕ್ಷ ಎನ್.ಕೃಷ್ಣ, ಶಿವಪ್ರಸಾದ್‌ಗೌಡ, ಪಾಳೇಗಾರ ವಂಶಸ್ಥ ಶಿವರಾಜವರ್ಮ, ಡಾ.ರಾಜಣ್ಣ, ಪಿಡಿಒ ಮಹೇಶ್ವರಯ್ಯ ಹಲವು ಮುಖಂಡರು ಇಡೀ ರಾತ್ರಿ ಉತ್ಸವದಲ್ಲಿ ಭಾಗವಹಿಸಿ, ಕಲಾವಿದರಿಗೆ ಸ್ಮರಣಿಕೆ ನೀಡಿ ಗೌರವಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts