More

    ಸ್ಥಳೀಯ ಸ್ಪರ್ಧಾಕಾಂಕ್ಷಿಗಳಿಗೆ ಟಿಕೆಟ್ ನೀಡಿ

    ಕಾನಹೊಸಹಳ್ಳಿ: ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಿಂದ ಈ ಬಾರಿ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಥಳೀಯ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂದು ವಿಜಯನಗರ ಜಿಲ್ಲಾ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸೂರ್ಯಪಾಪಣ್ಣ ಒತ್ತಾಯಿಸಿದರು.

    ಪ್ರತಿ ಬಾರಿ ವಲಸಿಗರನ್ನು ಕರೆತಂದಿದ್ದರೂ ಅಭೂತಪೂರ್ವವಾಗಿ ಗೆಲ್ಲಿಸಿದ್ದೇವೆ. ಅದರೆ, ಅವರು ತಮ್ಮ ಸ್ವಾರ್ಥಕ್ಕಾಗಿ ಕ್ಷೇತ್ರವನ್ನು ಅನಾಥವಾಗಿಸುತ್ತಿದ್ದಾರೆ. ಹೀಗಾಗಿ ಸ್ಥಳೀಯವಾಗಿ ಹಲವರು ಆಕಾಂಕ್ಷಿಗಳಿದ್ದು, ಟಿಕೆಟ್ ನೀಡಬೇಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

    ಇದನ್ನೂ ಓದಿ: ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲು ದೆಹಲಿಗೆ ಹೊರಟ ಬಿಎಸ್​ವೈ; ಟಿಕೆಟ್ ಆಕಾಂಕ್ಷಿಗಳಿಗೆ ಹೆಚ್ಚಿದ ಟೆನ್ಷನ್!

    ಸ್ಥಳೀಯ ಅಭ್ಯರ್ಥಿಗೆ ಕ್ಷೇತ್ರದ ನಾಡಿ ಮಿಡಿತ ಗೊತ್ತರಲಿದೆ. ಈ ನಿಟ್ಟಿನಲ್ಲಿ ಅಭಿವೃದ್ಧಿಗೂ ಸಹಕಾರಿಯಾಗಲಿದೆ. ಈ ಬಾರಿ ಪಕ್ಷದ ವರಿಷ್ಠರು ಸ್ಥಳೀಯವಾಗಿ ಪಕ್ಷ ಸಂಘಟನೆಯಲ್ಲಿ ನಿಷ್ಠರಾಗಿರುವಂಥ ಕಾರ್ಯಕರ್ತರನ್ನು ಪರಿಗಣಿಸಿ ಟಿಕೆಟ್ ನೀಡಲ್ಲಿದ್ದಾರೆನ್ನುವ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು..

    ಪ್ರಮುಖರಾದ ಶಂಬಯ್ಯ, ಶಾಂತನಹಳ್ಳಿ ವೀರಭದ್ರಪ್ಪ, ಹನುಮಜ್ಜಿರ ನಾಗೇಶ್, ಗುರಿಕಾರ್ ರಾಘವೇಂದ್ರ, ಭರತ್‌ರಾಮ್, ಜುಮ್ಮೋಬನಹಳ್ಳಿ ಶರಣಪ್ಪ, ಸುಭಾಶ್ಚಂದ್ರ, ಕೆಂಚಮಲ್ಲನಹಳ್ಳಿ ಬಸವರಾಜ್, ದಾಸೋಬನಹಳ್ಳಿ ರಾಘವೇಂದ್ರ, ಬೋರಸ್ವಾಮಿ ಇದ್ದರು.

    ಲೋಕೇಶ ನಾಯಕ ಪರಿಶಿಷ್ಟ ಪಂಗಡದವರೇ ಅಲ್ಲ

    ಬುಧವಾರ ಬಿಜೆಪಿಗೆ ಸೇರ್ಪಡೆಯಾಗಿರುವ ಕಾಂಗ್ರೆಸ್ ಮುಖಂಡ ಲೊಕೇಶ ನಾಯಕ ಪರಿಶಿಷ್ಟ ಪಂಗಡದವರೇ ಅಲ್ಲ ಎಂದು ಬಿಜೆಪಿ ಪದಾಧಿಕಾರಿಗಳು ಆರೋಪಿಸಿದರು. ಕರ್ನಾಟಕ ಪರಿಶಿಷ್ಟ ಪಂಗಡ ಸಂರಕ್ಷಣಾ ಸಮಿತಿ ಬೆಂಗಳೂರಿನ ಜಿಲ್ಲಾಧಕಾರಿಗೆ ಸಲ್ಲಿಸಿರುವ ಅರ್ಜಿಯನ್ನು ಪ್ರದರ್ಶಿಸಿದರು.

    ಇದನ್ನೂ ಓದಿ: ಏ. 9 ರಂದು ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ | ಗೆಲ್ಲುವ ಪಕ್ಷವಾದ್ದರಿಂದ ಟಿಕೆಟ್​ಗಾಗಿ ಪೈಪೋಟಿ ಸಹಜ; ಸಿಎಂ ಬೊಮ್ಮಾಯಿ

    ರಾಜಕೀಯ ಮೀಸಲಾತಿಯನ್ನು ದುರ್ಬಳಕೆ

    ಲೊಕೇಶ್‌ನಾಯಕ ಅವರು ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿ ಸರ್ಕಾರದ ಸೌಲಭ್ಯ ಹಾಗೂ ರಾಜಕೀಯ ಮೀಸಲಾತಿಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಅವರು ಮೂಲತಃ ಆಂಧ್ರ ಪ್ರದೇಶದ ನಾಯ್ಡು ಜನಾಂಗಕ್ಕೆ ಸೇರಿದವರು.

    ಅವರ ತಂದೆ ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದು, ಸರ್ಕಾರಿ ಸವಲತ್ತು ಪಡೆಯುವ ನಿಟ್ಟಿನಲ್ಲಿ ಇವರನ್ನು ಪ್ರಾಥಮಿಕ ಶಿಕ್ಷಣಕ್ಕೆ ಸೇರಿಸುವಾಗ ನಾಯಕ ಜನಾಂಗ ಎಂದು ಬರೆಸಿದಿದ್ದಾರೆಂದು ಆರೋಪಿಸಿದರು.

    ನಕಲಿ ಜಾತಿ ಪ್ರಮಾಣಪತ್ರ

    ನಕಲಿ ಜಾತಿ ಪ್ರಮಾಣಪತ್ರದ ಬಗ್ಗೆ ತನಿಖೆ ನಡೆಯಬೇಕಿದ್ದು, ಮುಂದೆ ಕಾನೂನು ರೀತಿಯಲ್ಲಿ ಶಿಕ್ಷೆಯಾಗುವುದರಿಂದ ಪಕ್ಷದಲ್ಲಿ ಟಿಕೆಟ್ ನೀಡಿದರೆ ಪಕ್ಷಕ್ಕೆ ಮುಜುಗರವಾಗಲಿದೆ. ಜತೆಗೆ ಬಿಜೆಪಿಯ ತತ್ವ ಸಿದ್ಧಾಂತವೇ ಗೊತ್ತಿಲ್ಲದ ಲೋಕೇಶ್ ನಾಯಕಗೆ ಯಾವುದೇ ಕಾರಣಕ್ಕೂ ಬಿಜೆಪಿಯಿಂದ ಟಿಕೆಟ್ ನೀಡಬಾರದೆಂದು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts