More

  ಉತ್ತಮ ಶಿಕ್ಷಣ, ಸಂಸ್ಕಾರ ಮೈಗೂಡಿಸಿಕೊಳ್ಳಿ

  ಕಾನಹೊಸಹಳ್ಳಿ: ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಕೊಡುಗೆ ಅನನ್ಯವಾಗಿದೆ ಎಂದು ಶ್ರೀ ಶರಣಬಸವೇಶ್ವರ ದಾಸೋಹ ಮಠದ ಧರ್ಮಾಧಿಕಾರಿ ಐಮುಡಿ ಶರಣಾರ್ಯರು ಹೇಳಿದರು.

  ಕಾನಮಡುಗು ಗ್ರಾಮದ ಶ್ರೀ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ಶರಣಬಸವೇಶ್ವರ ಶಿಕ್ಷಕರ ತರಬೇತಿ ಕೇಂದ್ರದ 2007-09ನೇ ಬ್ಯಾಚ್ ಪ್ರಶಿಕ್ಷಣಾರ್ಥಿಗಳು ಭಾನುವಾರ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದರು.

  ಮಠದ ಧರ್ಮಾಧಿಕಾರಿಗಳಾಗಿದ್ದ ಶ್ರೀ ನಾಲ್ವಡಿ ಶರಣಾರ್ಯರು ಈ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಡಿ.ಇಡಿ ಕಾಲೇಜು ಆರಂಭಿಸಿದ್ದು, ಈವರೆಗೆ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಕರಾಗಿರುವುದು ಸಾರ್ಥಕ ಕೆಲಸವಾಗಿದೆ. ಉತ್ತಮ ಶಿಕ್ಷಣ, ಸಂಸ್ಕಾರ ಕಲಿಯುವುದರ ಜತೆಗೆ ಗುರು ಪರಂಪರೆಯನ್ನು ಗೌರವಿಸಬೇಕು ಎಂದರು.

  ತರಬೇತಿ ಕೇಂದ್ರದ ನಿವೃತ್ತ ಪ್ರಾಚಾರ್ಯ ಸಿದ್ದಾಪುರ ಎ.ಶರಣಪ್ಪ ಮಾತನಾಡಿ, ಗುರು-ಶಿಷ್ಯರ ಬಾಂಧವ್ಯ ಬಿಡಿಸಲಾರದ ನಂಟು. 14 ವರ್ಷಗಳ ನಂತರ ಗುರುವಿನ ಸ್ಮರಣೆ ಮಾಡುತ್ತಿರುವುದು ಸಂತಸವಾಗಿದೆ. ಉತ್ತಮ ಸಮಾಜ ನಿರ್ಮಾಣ ನಿಮ್ಮೆಲ್ಲರ ಗುರಿಯಾಗಲಿ ಎಂದು ಹಾರೈಸಿದರು. ನಿವೃತ್ತ ಪ್ರಾಚಾರ್ಯ ಕೆ.ಎಂ.ಶಿವಮೂರ್ತಿ ಮಾತನಾಡಿದರು.

  ರೇಖಾ ಐಮುಡಿ ಶರಣಾರ್ಯರು, ತರಬೇತಿ ಕೇಂದ್ರದ ಪ್ರಾಚಾರ್ಯ ಎಲ್.ಪಿ.ಸುಭಾಶ್ಚಂದ್ರ ಬೋಸ್, ನಿವೃತ್ತ ಉಪನ್ಯಾಸಕರಾದ ಜಿ.ಎನ್.ಪ್ರಕಾಶ್, ಕೆ.ಶಿವಲಿಂಗಪ್ಪ, ಉಪನ್ಯಾಸಕರಾದ ವೈ.ರಾಜಶೇಖರ್, ಕೆ.ಟಿ.ಶರಣಪ್ಪ, ಸಿದ್ದನಗೌಡ, ತಿಮ್ಮಾರೆಡ್ಡಿ, ಶರತ್ ಕುಮಾರ್, ಭದ್ರಪ್ಪ, ಕಾಶಿನಾಥ, ನಿವೃತ್ತ ಸಿಆರ್‌ಪಿ ಎನ್.ಶರಣಪ್ಪ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts