More

    ಮಹಿಳೆಯರು ಉದ್ಯಮಶೀಲ ಕೌಶಲ ಬೆಳೆಸಿಕೊಳ್ಳಲಿ

    ಕಂಪ್ಲಿ: ಮಹಿಳೆಯರು ಉದ್ಯಮಶೀಲ ಕೌಶಲ ಬೆಳೆಸಿಕೊಳ್ಳುವಲ್ಲಿ ಜಾಗೃತಿ ತೋರಬೇಕು ಎಂದು ಪುರಸಭೆ ಸಮುದಾಯ ಸಂಘಟನಾಧಿಕಾರಿ ವಸಂತಮ್ಮ ಹೇಳಿದರು.

    ಪುರಸಭಾಂಗಣದಲ್ಲಿ ಶುಕ್ರವಾರ ದೀನದಯಾಳ್ ಅಂತ್ಯೋದಯ ಯೋಜನೆಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಲ್ಲಿ, ಪಟ್ಟಣದ ಸ್ವಸಹಾಯ ಸಂಘಗಳ ಹಾಗೂ ಪ್ರದೇಶ ಮಟ್ಟದ ಒಕ್ಕೂಟಗಳಿಗೆ ಉದ್ಯಮಶೀಲತಾ ಸಾಮರ್ಥ್ಯದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರ್ಕಾರ ಕೊಡುವ ಸೂಕ್ತ ತರಬೇತಿ, ಸಾಲಸೌಲಭ್ಯ ಪಡೆದುಕೊಳ್ಳುವ ಮೂಲಕ ಮಹಿಳೆಯರು ಉದ್ಯಮಶೀಲತಾ ಕೌಶಲ ಬೆಳೆಸಿಕೊಳ್ಳಬೇಕು. ಎರಡು ದಿನಗಳ ತರಬೇತಿಯಲ್ಲಿ ಪಟ್ಟಣದ 100 ಸ್ವಸಹಾಯ ಸಂಘಗಳ ಸದಸ್ಯರು, ಪ್ರದೇಶಮಟ್ಟದ ಎರಡು ಸಮಿತಿಗಳ ಸದಸ್ಯರಿಗೆ ಮೂರು ತಂಡಗಳಲ್ಲಿ ತರಬೇತಿ ಕೊಡಲಾಗುವುದು. ಆರ್‌ಬಿಐ ರೋಡ್‌ಶೆಡ್, ಡೇನಲ್ಮ್, ಡಾನ್‌ಬಾಸ್ಕೋ ಸಂಸ್ಥೆಗಳ ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡುವರು ಎಂದರು.

    ಪುರಸಭೆ ಅಧ್ಯಕ್ಷೆ ಶಾಂತಲಾ ವಿ.ವಿದ್ಯಾಧರ ಚಾಲನೆ ನೀಡಿದರು. ಮುಖ್ಯಾಧಿಕಾರಿ ಡಾ.ಎನ್.ಶಿವಲಿಂಗಪ್ಪ, ಉಪಾಧ್ಯಕ್ಷೆ ನಿರ್ಮಲಾ ಕೆ.ವಸಂತ್, ಸ್ಥಾಯಿಸಮಿತಿ ಅಧ್ಯಕ್ಷ ಸಿ.ಆರ್.ಹನುಮಂತ ಮತ್ತು ಸದಸ್ಯರು, ಪ್ರದೇಶಮಟ್ಟದ ಸಮಿತಿ ಅಧ್ಯಕ್ಷೆ ವೈ.ರೇಣುಕಾ, ಪದಾಧಿಕಾರಿಗಳಾದ ಪದ್ಮಾ, ಸಂಧ್ಯಾ, ಜ್ಯೋತಿ, ಎಸ್.ರೇಣುಕಾ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts