More

    ಗಾಳಿ-ಮಳೆಗೆ ನೆಲಕ್ಕೊರಗಿದ ಬೆಳೆ

    ಕಂಪ್ಲಿ: ತಾಲೂಕಿನ ಹೊನ್ನಳ್ಳಿ, ಹೊಸಮಾದಾಪುರ, ದರೋಜಿ ಮತ್ತಿತರ ಗ್ರಾಮಗಳಲ್ಲಿ ಗುರುವಾರ ಮಧ್ಯಾಹ್ನ ಸುರಿದ ಧಾರಾಕಾರ ಮಳೆ ಮತ್ತು ಬೀಸಿದ ಭಾರಿ ಗಾಳಿಗೆ ಭತ್ತ, ಮೆಕ್ಕೆಜೋಳ ಬೆಳೆ ಹಾನಿಯಾಗಿದೆ.

    ಗಾಳಿಯ ರಭಸಕ್ಕೆ ಅಲ್ಲಲ್ಲಿ ಮರ, ಗಿಡ, ವಿದ್ಯುತ್‌ಕಂಬಗಳು ನೆಲಕ್ಕೆ ಬಿದ್ದಿವೆ. ಹೊನ್ನಳ್ಳಿಯ ಹೊಸೂರಿನಲ್ಲಿ ವಿದ್ಯುತ್ ಪರಿವರ್ತಕದ ಬಳಿಯ ಮರವೊಂದು ಗಾಳಿಯ ರಭಸಕ್ಕೆ ಟಿಸಿ ತಂತಿಗಳ ಮೇಲೆ ಬಿದ್ದಿದ್ದರಿಂದ ವಿದ್ಯುತ್ ಕಂಬಗಳು ವಾಲಿದ್ದವು. ಸಕಾಲಕ್ಕೆ ಜೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಮರ ತೆರವುಗೊಳಿಸಿದ್ದಾರೆ.

    ದರೋಜಿ ಭಾಗದಲ್ಲಿ ಮೆಕ್ಕೆಜೋಳ, ಭತ್ತದ ಬೆಳೆ ನೆಲಕ್ಕೊರಗಿದೆ. ಇದರಿಂದ ರೈತರು ಆರ್ಥಿಕವಾಗಿ ಸಂಕಷ್ಟಕ್ಕೀಡಾಗಿದ್ದಾರೆ. ಕೃಷಿ ಇಲಾಖಾಧಿಕಾರಿಗಳು ಬೆಳೆ ನಷ್ಟ ಪರಿಹಾರ ಕೊಡಿಸಬೇಕು ಎಂದು ನಷ್ಟಕ್ಕೀಡಾದ ರೈತರಾದ ಸುಂಕರಾಜ್, ಕುಮಾರಸ್ವಾಮಿ, ಮಧು, ನರಸಿಂಹಲು, ವಿ.ಕೆ.ಸ್ವಾಮಿ ಇತರರು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts