More

    ಕಂಪ್ಲಿಯಲ್ಲಿ ಅನಗತ್ಯ ಸಂಚಾರ ಮಾಡುತ್ತಿದ್ದ ಬೈಕ್ ಸವಾರರಿಗೆ ದಂಡ

    ಕಂಪ್ಲಿ: ಪಟ್ಟಣದಲ್ಲಿ ಅನಗತ್ಯ ಹಾಗೂ ಅಗತ್ಯ ದಾಖಲೆ, ಹೆಲ್ಮೆಟ್, ಮಾಸ್ಕ್ ಧರಿಸದೆ ಸಂಚರಿಸುತ್ತಿದ್ದ ಬೈಕ್ ಸವಾರರಿಗೆ ಸ್ಥಳೀಯ ಪೊಲೀಸರು ಶನಿವಾರ ದಂಡ ವಿಧಿಸಿ ಬಿಸಿ ಮುಟ್ಟಿಸಿದರು. ಪಿಎಸ್‌ಐ ಮೌನೇಶ್ ರಾಥೋಡ್ ಮಾತನಾಡಿ, ಕರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನಗಳಲ್ಲಿ ಸುಖಾಸುಮ್ಮನೆ ಓಡುವವರನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಹೆಲ್ಮೆಟ್, ಮಾಸ್ಕ್ ಧರಿಸದ ಸವಾರರಿಗೆ, ಮೊಬೈಲ್‌ನಲ್ಲಿ ಮಾತನಾಡುತ್ತ ಸಂಚರಿಸುವವರಿಗೆ, ದಾಖಲೆಗಳಿಲ್ಲದ ವಾಹನ ಸವಾರರಿಗೆ ದಂಡ ವಿಧಿಸಲಾಗಿದೆ. 25 ಪ್ರಕರಣ ದಾಖಲಿಸಿಕೊಂಡು 12,500 ರೂ.ಗೂ ಹೆಚ್ಚಿನ ದಂಡ ವಸೂಲಿ ಮಾಡಲಾಗಿದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts