More

    ತುಂಗಭದ್ರಾ ನದಿ ತಟದ ಜನರ ಸ್ಥಳಾಂತರಕ್ಕೆ ಕ್ರಮ: ಹೊಸಪೇಟೆ ಎಸಿ ಸಿದ್ದರಾಮೇಶ್ವರ ಮಾಹಿತಿ

    ಕಂಪ್ಲಿ: ನೆರೆ ಹಾವಳಿ ಎದುರಿಸಲು ತುಂಗಭದ್ರಾ ನದಿಗೆ ಹೆಚ್ಚುವರಿ ನೀರು ಹರಿದು ಬಂದಲ್ಲಿ ತಟದಲ್ಲಿ ವಾಸವಿರುವ ಕುಟುಂಬಗಳ ಸ್ಥಳಾಂತರಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೊಸಪೇಟೆ ಎಸಿ ಸಿದ್ದರಾಮೇಶ್ವರ ಹೇಳಿದರು.

    ಇಲ್ಲಿನ ತುಂಗಭದ್ರಾ ನದಿ ಸೇತುವೆ, ನದಿ ತಟವನ್ನು ಶುಕ್ರವಾರ ವೀಕ್ಷಿಸಿ ಮಾತನಾಡಿದರು. ತುಂಗಭದ್ರಾ ಜಲಾಶಯದ ಮೇಲ್ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದು ಹೆಚ್ಚಿನ ಪ್ರಮಾಣದ ನೀರು ನದಿಗೆ ಹರಿದು ಬರುವ ಸಾಧ್ಯತೆಗಳಿವೆ. ನದಿ ತಟದಲ್ಲಿ 54 ಮನೆಗಳಿದ್ದು ಸುಮಾರು 1.50 ಲಕ್ಷ ಕ್ಯೂಸೆಕ್ ನೀರು ಹರಿದು ಬಂದಲ್ಲಿ ನೀರು ನುಗ್ಗುವ ಆಪಾಯವಿದೆ. ಟಿಬಿ ಮಂಡಳಿ ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದು, ನದಿಗೆ ಹೆಚ್ಚುವರಿ ನೀರು ಹರಿದು ಬರುವ ಮುನ್ನವೇ ತಟದ ಜನರನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಲಾಗುವುದು ಎಂದರು.

    ಜಿಲ್ಲೆಯಲ್ಲಿ ಕರೊನಾ ಪ್ರಮಾಣ ಇಳಿಕೆಯಾಗಿದೆ. ಹಾಗಂತ ನಿರ್ಲಕ್ಷೃ ಸಲ್ಲದು. ಮಾಸ್ಕ್ ಧಾರಣೆ, ದೈಹಿಕ ಅಂತರ ಹಾಗೂ ಲಸಿಕೆ ಪಡೆಯಬೇಕು ಎಂದು ತಿಳಿಸಿದರು. ಬಳಿಕ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಕರೊನಾ ಲಸಿಕೆ ಪಡೆಯುವವರು ಕುಳಿತುಕೊಳ್ಳಲು ಶಾಮಿಯಾನ ಹಾಕಿಸಿ ಆಸನ ವ್ಯವಸ್ಥೆ ಕಲ್ಪಿಸುವಂತೆ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು. ತಹಸೀಲ್ದಾರ್ ಗೌಸಿಯಾಬೇಗಂ, ಉಪ ತಹಸೀಲ್ದಾರ್ ಬಿ.ರವೀಂದ್ರಕುಮಾರ್, ಪುರಸಭೆ ಮುಖ್ಯಾಧಿಕಾರಿ ಎನ್.ಶಿವಲಿಂಗಪ್ಪ, ವೈದ್ಯಾಧಿಕಾರಿ ರಾಧಿಕಾ, ಡಾ.ಶ್ರೀನಿವಾಸ್ ರಾವ್, ವಿಎಗಳಾದ ವಿಜಯಕುಮಾರ್, ಗಿರೀಶ್‌ಬಾಬು, ಮಾಲತೇಶ ದೇಶಪಾಂಡೆ, ಪುರಸಭೆ ಜೆಇ ಮಧುಮತಿ, ಔಷಧ ವಿತರಕ ಶಿವರುದ್ರಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts