More

    ಪ್ರತಿಭೆಗಳ ಆಯ್ಕೆಗಾಗಿ ವಿವಿಧ ಸ್ಪರ್ಧೆ

    ಕಂಪ್ಲಿ: ಬಳ್ಳಾರಿ ಉತ್ಸವದಲ್ಲಿ ಪಾಲ್ಗೊಳ್ಳಲು ಅರ್ಹ ಪ್ರತಿಭೆಗಳ ಆಯ್ಕೆಗಾಗಿ ತಾಲೂಕು ಮಟ್ಟದ ಸ್ಪರ್ಧೆ ಚೇತನಾ ವಿದ್ಯಾನಿಕೇತನ ಶಾಲೆಯಲ್ಲಿ ಮಂಗಳವಾರ ನಡೆಯಿತು. ಚಾಲನೆ ನೀಡಿ ಮಾತನಾಡಿದ, ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕ ಜಿ.ವೀರೇಶ್, ವಿಜೇತ ಮೊದಲ ತಂಡವನ್ನು ಬಳ್ಳಾರಿ ಉತ್ಸವದ ಸ್ಪರ್ಧೆಗೆ ಆಯ್ಕೆಮಾಡಲಾಗುವುದು ಎಂದರು.

    ಭಾರತ ಸ್ವತಂತ್ರ್ಯ ಸಂಗ್ರಾಮದಲ್ಲಿ ಬಳ್ಳಾರಿ ಜಿಲ್ಲೆಯ ಪಾತ್ರ – ಕುರಿತ ಪ್ರಬಂಧ ಸ್ಪರ್ಧೆಯಲ್ಲಿ 11ವಿದ್ಯಾರ್ಥಿಗಳು, ಬಳ್ಳಾರಿ ಜಿಲ್ಲೆಯ ಐತಿಹಾಸಿಕ ತಾಣಗಳು ಕುರಿತ ಚಿತ್ರಕಲೆ ಸ್ಪರ್ಧೆಯಲ್ಲಿ 10 ವಿದ್ಯಾರ್ಥಿಗಳು, ಸಾಮೂಹಿಕ ನೃತ್ಯ ಸ್ಪರ್ಧೆಯಲ್ಲಿ 6 ಶಾಲೆಗಳ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ಸಮೂಹ ನೃತ್ಯದ ನಿರ್ಣಯಕರಾಗಿ ಶಿಕ್ಷಕ ಕೆ.ರಾಮಚಂದ್ರರಾವ್, ಚಿತ್ರಕಲೆಗೆ ಪುಷ್ಪಲತಾ, ಪ್ರಬಂಧ ಸ್ಪರ್ಧೆಗೆ ಕೆ.ಬಸವರಾಜ ಕಾರ್ಯನಿರ್ವಹಿಸಿದರು. ಶಾಲೆ ಮುಖ್ಯಶಿಕ್ಷಕಿ ಜಿ.ಜಯಲಕ್ಷ್ಮೀ, ಸಿಆರ್‌ಪಿಗಳಾದ ಕೆ.ಹನುಮಂತಪ್ಪ, ವೀರೇಶ, ರೇಣುಕಾರಾಧ್ಯ, ಶಿಕ್ಷಕರಾದ ಪಕ್ಕೀರೇಶ, ಶಿಲ್ಪಾ, ನಾಗರಾಜ, ಅಭಿಷೇಕ, ಎಂ.ಆರ್.ಸಾವಿತ್ರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts