More

    ಮಣ್ಣು, ನೀರಿನ ಸಂರಕ್ಷಣೆಗಿರಲಿ ಆದ್ಯತೆ

    ಕಂಪ್ಲಿ: ನೀರಿನ ಉಳಿತಾಯದಿಂದ ಇಂಧನ ಉಳಿತಾಯ ಹಾಗೂ ಮಣ್ಣಿನ ಸಂರಕ್ಷಣೆ ಮಾಡಬಹುದು ಎಂದು ಸಿರಗುಪ್ಪ ಕೃಷಿ ಸಂಶೋಧನಾ ಕೇಂದ್ರದ ಮುಖ್ಯ ಬೇಸಾಯತಜ್ಞ ಡಾ.ಸಿ.ಎಂ.ಕಾಲಿಬಾವಿ ಹೇಳಿದರು.

    ಇದನ್ನೂ ಓದಿ: ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮದ ಬಗ್ಗೆ ಜಗದೀಶ್ ಹಿರೇಮನಿ ಹೇಳಿಕೆ

    ಇಲ್ಲಿನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಮಂಗಳವಾರ ಇಂಧನ ದಕ್ಷತಾ ಬ್ಯೂರೋ ಹಾಗೂ ರಾಜ್ಯ ನವೀಕರಿಸಬಲ್ಲ ಇಂಧನ ಅಭಿವೃದ್ಧಿ ನಿಯಮಿತಗಳ ಸಂಯೋಗದಲ್ಲಿ ಕೃಷಿಪಂಪ್‌ಸೆಟ್ ಹಾಗೂ ಜಲಸಂರಕ್ಷಣೆ ಕುರಿತ ತರಬೇತಿ ಶಿಬಿರದಲ್ಲಿ ಮಾತನಾಡಿದರು.

    ಉತ್ತರ ಕರ್ನಾಟಕ ಭಾಗದಲ್ಲಿ ಪ್ರತಿ ಐದಾರು ವರ್ಷಗಳಿಗೊಮ್ಮೆ ಮಳೆ ಬರ ಉಂಟಾಗಲು ಮರಗಿಡಗಳ ಕ್ಷೀಣಿಸುವಿಕೆ ಮುಖ್ಯಕಾರಣವಾಗಿದೆ. ರೈತರು ಬದು ನಿರ್ಮಾಣ, ಚೌಕಾಕಾರದ ಮಡಿಗಳು, ಚೆಕ್‌ಡ್ಯಾಮ್, ಕೃಷಿಹೊಂಡಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು.

    ಕೃಷಿ ಪೂರಕ ಸಸ್ಯ ಸಂಪತ್ತು ಸಂರಕ್ಷಿಸಲು ರೈತರು ಅರಣ್ಯಗಾರಿಕೆ, ತೋಟಗಾರಿಕೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಆರ್ಥಿಕ ಅಭಿವೃದ್ಧಿ ಜತೆಗೆ ಮಣ್ಣು, ನೀರಿನ ಸಂರಕ್ಷಣೆಗೆ ಆದ್ಯತೆ ನೀಡಬೇಕು ಎಂದರು.

    ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕಿ ಡಾ.ಸಿ.ಆರ್.ಅಭಿಲಾಷಾ ಶಿಬಿರ ಉದ್ಘಾಟಿಸಿ ಮಾತನಾಡಿ, ಗುಣಮಟ್ಟದ ಪಂಪ್‌ಸೆಟ್‌ಗಳ ಬಳಕೆಯಿಂದ ವಿದ್ಯುತ್ ಉಳಿತಾಯ ಸಾಧಿಸಬಹುದು. ಸುಧಾರಿತ, ಗುಣಮಟ್ಟದ ದಕ್ಷತೆಯುಳ್ಳ ಪಂಪ್‌ಸೆಟ್‌ಗಳನ್ನು ಬಳಸುವಲ್ಲಿ ರೈತರು ಜಾಗೃತಿ ತೋರಬೇಕು ಎಂದರು.

    ಗಂಗಾವತಿ ಕೃಷಿ ವಿಜ್ಞಾನ ಕೇಂದ್ರದ ಬೇಸಾಯಶಾಸ್ತ್ರದ ತಂತ್ರಜ್ಞ ಡಾ.ಜಿ.ನಾರಪ್ಪ ಶಿಬಿರದಲ್ಲಿ ಮಾತನಾಡಿದರು. ಕೃಷಿ ಅಧಿಕಾರಿಗಳಾದ ಬಿ.ಶಿವಪ್ಪ, ಪಿ.ಚಂದ್ರಶೇಖರ್, ರೈತರು, ಪಂಪ್‌ಸೆಟ್ ತಜ್ಞರಾದ ಗೋಪಾಲರೆಡ್ಡಿ, ವಸಂತರಾಜ ಕಹಳೆ, ಎಮ್ಮಿಗನೂರು ಜಡೆಪ್ಪ, ಡಿ.ಶಿವನಾಗಪ್ಪ, ಚೌಡ್ಕಿ ಶಂಭುಲಿಂಗಪ್ಪ, ಕೆ.ರಾಘವೇಂದ್ರ ಸೇರಿ ಜಿಲ್ಲೆಯ ನಾನಾ ಭಾಗಗಳಿಂದ ಆಗಮಿಸಿದ ರೈತರನೇಕರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts