More

    ಬದುಕನ್ನು ಹಸನುಗೊಳಿಸುತ್ತವೆ ಪುರಾಣ ಪ್ರವಚನ

    ಕಂಪ್ಲಿ: ಪುರಾಣ ಪ್ರವಚನಗಳು ಬದುಕನ್ನು ಹಸನುಗೊಳಿಸುತ್ತವೆ ಎಂದು ಬುಕ್ಕಸಾಗರ ಕರಿಸಿದ್ದೇಶ್ವರ ಸಂಸ್ಥಾನ ಮಠದ ವಿಶ್ವಾರಾಧ್ಯ ಶಿವಾಚಾರ್ಯರು ಹೇಳಿದರು.

    ಇಲ್ಲಿನ ಸಾಂಗತ್ರಯ ಸಂಸ್ಕೃತಪಾಠಶಾಲೆಯಲ್ಲಿ ಶ್ರಾವಣಮಾಸದ ಪುರಾಣ ಪ್ರವಚನ ನಿಮಿತ್ತ ಶುಕ್ರವಾರ ಷಟ್‌ಸ್ಥಲ ಧ್ವಜಾರೋಹಣ ನೆರವೇರಿಸಿ ಆಶೀರ್ವಚನ ನೀಡಿದರು. ಪುರಾಣ ಪ್ರವಚನಗಳ ತತ್ವ ಆದರ್ಶ ಬದುಕನ್ನು ರೂಪಿಸುತ್ತವೆ. ನಿತ್ಯ ಜೀವನದಲ್ಲಿ ಪುರಾಣ ಪ್ರವಚನಗಳ ಸಾರ ಅಳವಡಿಸಿಕೊಳ್ಳಬೇಕು ಎಂದರು.

    ಸಾಂಗತ್ರಯ ಸಂಸ್ಕೃತ ಪಾಠಶಾಲೆ ಅಧ್ಯಕ್ಷ ಎಸ್.ಎಸ್.ಎಂ.ಚನ್ನಯ್ಯಸ್ವಾಮಿ ಮಾತನಾಡಿ, ಕರೊನಾ ನಿಮಿತ್ತ ಎರಡು ವರ್ಷಗಳಿಂದ ಪುರಾಣಕ್ಕೆ ಅವಕಾಶ ದೊರೆತಿರಲಿಲ್ಲ. ಈ ಬಾರಿ ಶ್ರಾವಣ ಮಾಸಾದ್ಯಂತ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರ ಲೀಲಾಮೃತ ಪುರಾಣ ಪ್ರವಚನ ಹಮ್ಮಿಕೊಂಡಿದೆ. ಸರ್ವ ಸಮುದಾಯದವರು ನಿತ್ಯ ಸಂಜೆ ಪುರಾಣ ಪ್ರವಚನದಲ್ಲಿ ಪಾಲ್ಗೊಳ್ಳುವಂತೆ ಕೋರಿದರು.

    ಪಾಠಶಾಲೆ ಪದಾಧಿಕಾರಿಗಳಾದ ಇಟಗಿ ಬಸವರಾಜಗೌಡ ಜಿ.ಜಿ.ಆನಂದಮೂರ್ತಿ, ಜಿ.ಎಚ್.ಶಶಿಧರಗೌಡ, ಜವುಕಿನ ಶಂಕರ್, ಡಾ.ಜಗನ್ನಾಥ ಹಿರೇಮಠ, ಎಂ.ಎಸ್.ಶಶಿಧರಶಾಸ್ತ್ರಿ, ಘನಮಠದಯ್ಯಶಾಸ್ತ್ರಿ, ಕಲ್ಗುಡಿ ವಿಶ್ವನಥ, ಗೊಂದಿ ಚಂದ್ರಣ್ಣ, ಪ್ರಮುಖರಾದ ಪಿ.ಮೂಕಯ್ಯಸ್ವಾಮಿ, ಎಸ್.ಡಿ.ಬಸವರಾಜ್, ಕೆ.ಎಂ.ಚಂದ್ರಶೇಖರಶಾಸ್ತ್ರಿ, ಅಮರೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts