More

    ಕುರಿಗಳ ರಕ್ಷಣೆಗೆ ವೈದ್ಯರು ಸೂಕ್ತ ಚಿಕಿತ್ಸೆ ನೀಡುವಂತೆ ಕುರಿಗಾರರ ಆಗ್ರಹ


    ಕಂಪ್ಲಿ: ತಾಲೂಕಿನ ಹಳೇ ನೆಲ್ಲೂಡಿ ಗ್ರಾಮದ ಹೊರವಲಯದಲ್ಲಿ ಬೀಡು ಬಿಟ್ಟಿದ್ದ ಕುರಿ ಮಂದೆಗಳಲ್ಲಿ ಕುರಿಗಳು ಕೆಲ ದಿನಗಳಿಂದ ಸಾವಿಗೀಡಾಗುತ್ತಿದ್ದು, ವೈದ್ಯರು ಸೂಕ್ತ ಚಿಕಿತ್ಸೆ ನೀಡುವಂತೆ ಕುರಿಗಾರರು ಬುಧವಾರ ಆಗ್ರಹಿಸಿದರು.

    ಕುರಿಗಳನ್ನು ಕಳೆದುಕೊಂಡ ಸಂತ್ರಸ್ತರ ಪರವಾಗಿ ಕುರಿಗಾರ ಗುಬಾಜಿ ಗೂಳೆಪ್ಪ ಮಾತನಾಡಿ, ಕುರಿಗಳ ಬಾಯಲ್ಲಿ ನೊರೆ ಬಂದು, ಹೊಟ್ಟೆ ಹುಬ್ಬಿ ಸಾಯುತ್ತಿವೆ. ಒಂದು ತಿಂಗಳಲ್ಲಿ 300ಕ್ಕೂ ಅಧಿಕ ಕುರಿಗಳು ಸತ್ತಿವೆ. ಎರಡು ದಿನಗಳಲ್ಲಿ ಕುರಿಗಾರರಾದ ಗಂಗಾವತಿ ಮಾಬುಸಾಬ್, ಸಾದಪ್ಪ, ಗುಬಾಜಿ ಗಾಳೆಪ್ಪ, ಮುದೆಪ್ಪ, ಗುಬಾಜಿ ರಾಮಣ್ಣನ ತಲಾ 8 ಕುರಿಗಳು, ಬಳ್ಳಾಪುರದ ನೆಲ್ಲೂಡಿ ಲಕ್ಕಪ್ಪನ 6, ಮೂಲಿಮನಿ ಸಿದ್ದಲಿಂಗಯ್ಯನ 7, ಛಲುವಾದಿ ಕಕನಕಮ್ಮರ 5, ಮೈಲಾರಪ್ಪರ 3 ಸೇರಿ ಅನೇಕರ ಕುರಿಗಳು ಸಾವಿಗೀಡಾಗಿವೆ. ವೈದ್ಯರನ್ನು ನಾವೇ ಗಾಡಿಯಲ್ಲಿ ಹಟ್ಟಿಗೆ ಕರೆದುಕೊಂಡು ಬಂದು ಕುರಿಗಳಿಗೆ ಚಿಕಿತ್ಸೆ ಕೊಟ್ಟ ನಂತರ ಅವರನ್ನು ಮರಳಿ ನಾವೇ ಬಿಟ್ಟು ಬರಬೇಕಾಗಿದೆ. ವೈದ್ಯರು ಕುರಿಗಳನ್ನು ಪರೀಕ್ಷಿಸಿ ಸೂಕ್ತ ಚಿಕಿತ್ಸೆ ನೀಡಬೇಕು. ಸತ್ತ ಕುರಿಗಳಿಗೆ ನಷ್ಟ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

    ಕಂಪ್ಲಿಯ ಮುಖ್ಯ ಪಶು ವೈದ್ಯಾಧಿಕಾರಿ ಬಸವರಾಜ್ ಕುರಿಹಟ್ಟಿಗೆ ಭೇಟಿ ನೀಡಿ ಕುರಿಗಳನ್ನು ಪರೀಕ್ಷಿಸಿದರು. ಬಳಿಕ ಮಾತನಾಡಿ, ನೀಲಿ ನಾಲಿಗೆ ರೋಗಕ್ಕೆ ತುತ್ತಾಗಿ ಕುರಿಗಳು ಸಾಯುತ್ತಿವೆ. ನೀಲಿ ರೋಗಕ್ಕೆ ಕುರುಡು ನೊಣ ಕಾರಣವಾಗಿದ್ದು, ಕುರಿಯಿಂದ ಕುರಿಗೆ ವೈರಸ್ ಹರಡಿಸುತ್ತದೆ. ಇದನ್ನು ತಪ್ಪಿಸಲು ಪ್ರತಿ ಡಿಸೆಂಬರ್, ಜನವರಿ ತಿಂಗಳಲ್ಲಿ ಕುರಿ ಮಂದೆ ಬಳಿ ಬೇವಿನಸೊಪ್ಪಿನ ಹೊಗೆ ಹಾಕಬೇಕು. ಆರು ತಿಂಗಳಿಗೊಮ್ಮೆ ನೀಲಿ ನಾಲಿಗೆ ರೋಗ ವಿರುದ್ಧ ಲಸಿಕೆ ಹಾಕಿಸಬೇಕು. ಅನುಗ್ರಹ ಯೋಜನಡಿ ಸತ್ತ ಕುರಿಗಳಿಗೆ ಪರಿಹಾರ ಒದಗಿಸಲು 2021ರ ನವೆಂಬರ್‌ನಲ್ಲಿ 110, ಡಿಸೆಂಬರ್‌ನಲ್ಲಿ 210 ಸತ್ತ ಕುರಿಗಳಿಗೆ ನಷ್ಟ ಪರಿಹಾರಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ತಿಂಗಳಲ್ಲಿ 150 ಕುರಿಗಳು ಸಾವಿಗೀಡಾಗಿವೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts