More

  ಪಿಂಚಣಿ ವಂಚಿತ ನೌಕರರ ಸಮಾವೇಶ ನಾಳೆ

  ಕಂಪ್ಲಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತರ ನೌಕರರ ಸಂಘದ ಬೃಹತ್ ಸಮಾವೇಶವನ್ನು ನ.5ರಂದು ಶಿವಮೊಗ್ಗದ ತೇವರಚಟ್ನಹಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ರಾಜ್ಯ ಸಹ ಕಾರ್ಯದರ್ಶಿ ಅಂಬಿಗರ ಮಂಜುನಾಥ ತಿಳಿಸಿದ್ದಾರೆ.

  2006ರ ಪೂರ್ವ ಹಾಗೂ ನಂತರ ನೇಮಕವಾದ ಸಾವಿರಾರು ನೌಕರರು ಪಿಂಚಣಿ ವಂಚಿತರಾಗಿ ಕೆಲಸ ಮಾಡುತ್ತಿದ್ದಾರೆ. ಒಪಿಎಸ್ ಮರು ಜಾರಿ, ನಿಶ್ಚಿತ ಪಿಂಚಣಿ, ಅನುದಾನಿತ ನೌಕರರ ಸೇವಾ ನಿಯಂತ್ರಣ ಕಾಯ್ದೆ 2014 ರದ್ದುಗೊಳಿಸಲು ಆಗ್ರಹಿಸಿ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದು, ಸರ್ಕಾರ ಸ್ಪಂದಿಸುತ್ತಿಲ್ಲ.

  ಹೀಗಾಗಿ ಬೃಹತ್ ಸಮಾವೇಶ ಮೂಲಕ ಸರ್ಕಾರದ ಗಮನ ಸೆಳೆಯಲಾಗುವುದು. ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೌಕರರು ಭಾಗವಹಿಸಬೇಕೆಂದು ಕೋರಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts