More

    ಒನಕೆ ಓಬವ್ವ ದೇಶಪ್ರೇಮ, ಸಮಯಪ್ರಜ್ಞೆ ಅನುಕರಣೀಯ

    ಕಂಪ್ಲಿ: ಇಲ್ಲಿನ ತಹಸೀಲ್ದಾರ್ ಸಭಾಂಗಣದಲ್ಲಿ ಶುಕ್ರವಾರ ವೀರವನಿತೆ ಒನಕೆ ಓಬವ್ವ ಹಾಗೂ ದಾಸಶ್ರೇಷ್ಠ ಕನಕದಾಸರ ಜಯಂತ್ಯುತ್ಸವವನ್ನು ಸರಳ, ಸಡಗರ, ಸಂಭ್ರಮಗಳಿಂದ ಆಚರಿಸಲಾಯಿತು.

    ತಹಸೀಲ್ದಾರ್ ಗೌಸಿಯಾಬೇಗಂ ಮಾತನಾಡಿ, ದೇಶಪ್ರೇಮ, ಸಮಯಪ್ರಜ್ಞೆ, ವಿವೇಚನೆ ಹಾಗೂ ವಿರೋಚಿತ ಗುಣಗಳಿಂದಾಗಿ ವೀರವನಿತೆ ಒನಕೆ ಓಬವ್ವ ಆದರ್ಶ ಮಹಿಳೆಯಾಗಿದ್ದಾಳೆ. ಕನಕದಾಸರ ತತ್ವ ಚಿಂತನೆ, ಕೀರ್ತನೆಗಳು ಸರ್ವಸಮಾನತೆಯ ಸಮಾಜ ನಿರ್ಮಿಸಲು ಪ್ರೇರೇಪಿಸುತ್ತವೆ ಎಂದರು.

    ಪುರಸಭೆ ಉಪಾಧ್ಯಕ್ಷೆ ನಿರ್ಮಲಾ ಕೆ.ವಸಂತ್, ಸ್ಥಾಯಿಸಮಿತಿ ಅಧ್ಯಕ್ಷ ಸಿ.ಆರ್.ಹನುಮಂತ, ಡಿಟಿ ಬಿ.ರವೀಂದ್ರಕುಮಾರ್, ಛಲವಾದಿ ಸಮಾಜದ ಪ್ರಮುಖರಾದ ಎಂ.ಸಿ.ಮಾಯಪ್ಪ, ಬಿ.ಚನ್ನಬಸವ, ಸಿ.ವೆಂಕಟೇಶ್, ರಾಮಸ್ವಾಮಿ, ಕನಕ ನೌಕರ ಸಂಘದ ತಾಲೂಕು ಅಧ್ಯಕ್ಷ ಜಿ.ಕುಮಾರಸ್ವಾಮಿ, ಹಾಲುಮತ ಸಮಾಜದ ಪ್ರಮುಖರಾದ ಬಿ.ಕೆ.ದೇವೇಂದ್ರ, ರಮೇಶ್, ಬಳ್ಳಾರಿ ಶೇಖರ್, ಕುರಿ ಸಿದ್ದಪ್ಪ, ಮುತ್ತಣ್ಣ, ಮೂಲೆಮನಿ ಮಂಜುನಾಥ, ವಿರುಪಣ್ಣ, ಕುರಿ ಮಂಜುನಾಥ, ಡಿಂಡಿ ಮಹರ್ಷಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts