More

    ಅಂಗನವಾಡಿ ಕೇಂದ್ರದ ಕಟ್ಟಡ ಶಿಥಿಲ; ಆತಂಕದಲ್ಲಿ ನೆಲ್ಲೂಡಿ ಗ್ರಾಮದ ಮಕ್ಕಳ ಕಲಿಕೆ

    ಕಂಪ್ಲಿ: ತಾಲೂಕಿನ ಹಳೆನೆಲ್ಲೂಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿನ ಒಂದನೇ ಅಂಗನವಾಡಿ ಕೇಂದ್ರ ಕಟ್ಟಡದ ಛಾವಣಿ ಸಿಮೆಂಟ್ ಹಕ್ಕಳೆ ಉದುರುತ್ತಿದ್ದು, ಕಟ್ಟಡ ಬೀಳುವ ಆತಂಕ ಎದುರಾಗಿದೆ.

    ಕೇಂದ್ರದಲ್ಲಿ ಮೂರು ವರ್ಷದೊಳಗಿನ 41ಮಕ್ಕಳು, 3ರಿಂದ 6ವರ್ಷದೊಳಗಿನ 23ಮಕ್ಕಳು, 20ಗರ್ಭಿಣಿಯರು, 11ಬಾಣಂತಿಯರು ದಾಖಲಾಗಿದ್ದಾರೆ. ಇರುವ ಒಂದೇ ಕೋಣೆಯಲ್ಲಿ ಮಕ್ಕಳ ಆಟ-ಪಾಠದೊಂದಿಗೆ ಕೇಂದ್ರದ ಎಲ್ಲ ಚಟುವಟಿಕೆಗಳು ನಡೆಯುತ್ತಿವೆ. ಇಕ್ಕಟ್ಟಾದ ಸ್ಥಳದಲ್ಲೇ ಕುಳಿತುಕೊಳ್ಳುವ ಸ್ಥಿತಿ ಮಕ್ಕಳಿಗೆ ಎದುರಾಗಿದೆ. ಶೌಚಗೃಹ, ಮೂತ್ರಗೃಹ ಇಲ್ಲ. ಬಯಲು ಅನಿವಾರ್ಯವಾಗಿದೆ. ಈಗಿನ ಕೇಂದ್ರ ಬೇರೆಡೆ ಸ್ಥಳಾಂತರ ಮಾಡಿ, ಹಳೆಯ ಕಟ್ಟಡ ತೆರವುಗೊಳಿಸಿ ಹೊಸದನ್ನು ನಿರ್ಮಿಸಬೇಕು. ಇತ್ತ ಅಧಿಕಾರಿಗಳು ಜನಪ್ರತಿನಿಧಿಗಳು ಗಮನಿಸಬೇಕು ಎಂಬುದು ಪಾಲಕರ ಒತ್ತಾಯ.

    2023ರ ಜ. 6ರಂದು ಮೇಲ್ವಿಚಾರಕಿ ಅಂಗನವಾಡಿ ಕಟ್ಟಡವನ್ನು ವೀಕ್ಷಿಸಿದ್ದಾರೆ. ಚಕ್‌ಬಂದಿ ಹಾಕಿಕೊಡಲು ಗ್ರಾಪಂ ಸಿಬ್ಬಂದಿಗೆ ತಿಳಿಸಲಾಗಿದೆ. ಬಾಡಿಗೆ ಕಟ್ಟಡ ಒದಗಿಸಲು ಗ್ರಾಪಂ ಸದಸ್ಯರ ಗಮನಕ್ಕೆ ತರಲಾಗಿದೆ. ಕಟ್ಟಡಕ್ಕೆ ಸ್ವಂತ ನಿವೇಶನ ನೀಡಲು ಅನೇಕ ಬಾರಿ ಅಧಿಕಾರಿಗಳಿಗೆ ಮೌಖಿಕವಾಗಿ ಕೋರಲಾಗಿದೆ. ಗ್ರಾಪಂ ಇನ್ನೂ ಸ್ಪಂದಿಸಿಲ್ಲ. ದುರಸ್ತಿಗೆ ಬಂದ ಛಾವಣಿ ಇದ್ದರೂ ಹೊಂದಾಣಿಕೆಯಿಂದ ಕೇಂದ್ರ ನಡೆಸುತ್ತಿದ್ದೇನೆ.
    | ಕೆ.ಸುಧಾಬಾಯಿ, ಅಂಗನವಾಡಿ ಕಾರ್ಯಕರ್ತೆ, ಹಳೆನೆಲ್ಲೂಡಿ.

    ಅಂಗನವಾಡಿಯ ಶಿಥಿಲ ಕೊಠಡಿ ಗಮನಿಸಿದ್ದೇನೆ. ಕೂಡಲೇ ಕೇಂದ್ರವನ್ನು ಬಾಡಿಗೆ ಕಟ್ಟಡಕ್ಕೆ ವರ್ಗಾಯಿಸುವಂತೆ ಸಿಡಿಪಿಒ,ಅಂಗನವಾಡಿ ಮೇಲ್ವಿಚಾರಕಿ ಹಾಗೂ ಕಾರ್ಯಕರ್ತೆಯರಿಗೆ ಸೂಚಿಸಿದ್ದೇನೆ. ಅಂಗನವಾಡಿ ಕಟ್ಟಡಕ್ಕೆ ನಿವೇಶನ ನೀಡಲು ಗ್ರಾಮದಲ್ಲಿ ಸ್ಥಳವಿಲ್ಲ. ನಿವೇಶನ ನೀಡಲು ಭೂದಾನಿಗಳು ಮುಂದೆ ಬರಬೇಕು.
    | ಬಸಪ್ಪ ನೆಲ್ಲೂಡಿ ಪಿಡಿಒ

    ಅಂಗನವಾಡಿ ಕೇಂದ್ರ ಕಟ್ಟಡವನ್ನು ಮರು ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಮಂಜೂರಾತಿಯೂ ದೊರೆತಿದೆ. ಈ ಕುರಿತು ಕ್ರಮವಹಿಸಲಾಗುವುದು. ಕಟ್ಟಡ ಇಲ್ಲದಿದ್ದಲ್ಲಿ ಮಾತ್ರ ಬಾಡಿಗೆ ಕಟ್ಟಡ ಪಡೆದುಕೊಳ್ಳಲು ಅವಕಾಶವಿದೆ.
    | ಉಷಾ, ಬಳ್ಳಾರಿ ಗ್ರಾಮೀಣ ಸಿಡಿಪಿಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts