More

    4.8 ಟನ್ ಮಾವಿನಹಣ್ಣು, ಇಬ್ಬರು ಪೊಲೀಸರ ವಶಕ್ಕೆ! ಕಾರಣ ತಿಳಿದ್ರೆ, ಹಣ್ಣು ಮುಟ್ಟುವುದೇ ಬೇಡ ಅಂತೀರಾ

    ಹೈದಾರಾಬಾದ್: ಬೇಸಿಗೆ ಕಾಲ ಬಂತು ಎಂದರೆ ಸಾಕು ರಸಭರಿತ ಮಾವಿನಹಣ್ಣಿಗೆ ಬೇಡಿಕೆ ಹೆಚ್ಚಾಗುತ್ತದೆ. ಯಾಕಂದ್ರೆ, ಈ ಸಮಯದಲ್ಲಿ ಅತೀ ಹೆಚ್ಚಾಗಿ ಸಿಗುವ ಹಣ್ಣು ಅಂದ್ರೆ ಅದು ಮಾವು ಮಾತ್ರ. ಅದರಲ್ಲೂ ವಿಧವಿಧವಾದ ಮಾವುಗಳು ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆಯುತ್ತಿದ್ದು, ಈ ವೆರೈಟಿಯ ಮ್ಯಾಂಗೋ ಸವಿಯಬೇಕು ಎಂದು ಬಹಳ ಆಸೆಯಿಂದ ಜನರು, 1 ಕೆಜಿ ಜಾಗದಲ್ಲಿ 3-4 ಕಿಲೋ ಖರೀದಿ ಮಾಡುತ್ತಾರೆ. ಈ ಮೂಲಕ ಸಿಹಿಯಾದ ಹಣ್ಣನ್ನು ಸವಿಯುವ ಆಸೆಯನ್ನು ತೀರಿಸಿಕೊಳ್ಳುತ್ತಾರೆ.

    ಇದನ್ನೂ ಓದಿ: ಪ್ರಜ್ವಲ್​ರಿಂದ 400 ಮಹಿಳೆಯರ ಅತ್ಯಾಚಾರ: ಪ್ರಧಾನಿ ಮೋದಿ ಕ್ಷಮೆಯಾಚಿಸಲು ರಾಹುಲ್ ಒತ್ತಾಯ!

    ವ್ಯಾಪಾರಿಗಳು ಸಹ ಅಧಿಕ ಸಂಖ್ಯೆಯಲ್ಲಿ ಆಗಮಿಸುವ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು, ಬಗೆಬಗೆಯ ಮಾವುಗಳನ್ನು ಮಾರಾಟ ಮಾಡುತ್ತಾರೆ. ಈ ಮೂಲಕ ಜನರನ್ನು ತಮ್ಮತ್ತ ಆಕರ್ಷಿಸುವ ಕೆಲವು ವ್ಯಾಪಾರಿಗಳು, ಮಾವು ನೈಸರ್ಗಿಕವಾಗಿ ಹಣ್ಣಾಗುವ ಮುನ್ನವೇ ಅದಕ್ಕೆ ಕೆಮಿಕಲ್ ಸಿಂಪಡಿಸಿ, ವೇಗವಾಗಿ ಹಣ್ಣಾಗುವಂತೆ ಮಾಡುತ್ತಾರೆ. ಈ ಮುಖೇನ ಗ್ರಾಹಕರ ಜೀವಕ್ಕೆ ಆಪತ್ತು ತರುತ್ತಾರೆ.

    ಇದೇ ರೀತಿ ಹೈದರಾಬಾದ್​ನ ಬೊರಾಬಂದನ್​ನಲ್ಲಿದ್ದ ಹಣ್ಣಿನ ಮಳಿಗೆಗಳ ಮೇಲೆ ಪೊಲೀಸರು ದಾಳಿ ಮಾಡಿದ್ದು, ಎರಡು ಮಳಿಗೆಗಳಲ್ಲಿ ಈಥಲಿನ್​ ಬಳಸಿ ಅಧಿಕ ಸಂಖ್ಯೆಯ ಮಾವು ಹಣ್ಣು ಮಾಡುತ್ತಿರುವುದು ತಿಳಿದುಬಂದಿದೆ. ದಾಳಿ ನಡೆಸುವ ಮುನ್ನ ಕೆಮಿಕಲ್​ನಿಂದ ಹಣ್ಣು ಮಾಡಲಾಗಿದ್ದ 160 ಟ್ರೇ ಮಾವಿನಹಣ್ಣನ್ನು ಪೊಲೀಸರು ಪರಿಶೀಲಿಸಿದ್ದು, ಪ್ರತಿ ಟ್ರೇನಲ್ಲಿ 20 ಕೆಜಿ ಹಣ್ಣು ಮತ್ತು ಈಥಲಿನ್ ಪ್ಯಾಕೆಟ್​ಗಳಿರುವುದು ಪತ್ತೆಯಾಗಿದೆ.

    ಇದನ್ನೂ ಓದಿ: ಜಿ.ಪಂ. ಸಿಇಒ ಭರತ್ ಎಸ್ ಅವರಿಂದ ನರೇಗಾ ಕಾಮಗಾರಿ ಸ್ಥಳ ಪರಿಶೀಲನೆ

    ಹಣದ ದಾಹಕ್ಕೆ ಬಿದ್ದ ಆರೋಪಿಗಳು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ನೀಡಿರುವ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಹಿನ್ನೆಲೆ ಪೊಲೀಸರು ಇಬ್ಬರನ್ನು ಸದ್ಯ ಬಂಧಿಸಿದ್ದು, ಸುಮಾರು 4.8 ಟನ್ ಮಾವಿನಹಣ್ಣನ್ನು ವಶಪಡಿಸಿಕೊಂಡು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ,(ಏಜೆನ್ಸೀಸ್).

    ಹರ್ಷಲ್ ಪಟೇಲ್ ವಿರುದ್ಧ ಸಿಡಿದೆದ್ದ ಯಜುವೇಂದ್ರ ಚಹಲ್! ಕಾಪಿರೈಟ್​​ ಕೇಸ್​ಗೆ ಆಗ್ರಹಿಸಿದ ಸ್ಟಾರ್ ಬೌಲರ್

    ಇಬ್ಬರ ಜೀವನದಲ್ಲಿ ಮಧ್ಯಪ್ರವೇಶಿಸುವ ಹಕ್ಕು ಯಾವನಿಗೂ ಇಲ್ಲ: ಸಿಡಿದೆದ್ದ ಗೌತಮ್​ ಗಂಭೀರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts