More

    ಜೀವನದ ಅಂಗವಾಗಲಿ ಕ್ರೀಡಾಭ್ಯಾಸ

    ಕಂಪ್ಲಿ: ಕ್ರೀಡಾಭ್ಯಾಸ ಕೇವಲ ಕ್ರೀಡಾಕೂಟಕ್ಕೆ ಮಾತ್ರ ಸೀಮಿತವಾಗಿರದೆ ನಿತ್ಯ ಜೀವನದ ಅವಿಭಾಜ್ಯ ಅಂಗವಾಗಬೇಕು ಎಂದು ತಹಸೀಲ್ದಾರ್ ಗೌಸಿಯಾಬೇಗಂ ಹೇಳಿದರು. ಷಾ.ಮಿಯಾಚಂದ್ ಪಿಯು ಕಾಲೇಜು ಆವರಣದಲ್ಲಿ ಜೆವಿಸಿ ಪಿಯು ಕಾಲೇಜು ಮತ್ತು ಡಿಎಚ್‌ಎಸ್ ಪಿಯು ಕಾಲೇಜು ಆಶ್ರಯದಲ್ಲಿ ಮಂಗಳವಾರ ತಾಲೂಕು ಮಟ್ಟದ ಪಿಯ ಕಾಲೇಜುಗಳ ಕ್ರೀಡಾಕೂಟಕ್ಕೆ ಕ್ರೀಡಾಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

    ಸೂಕ್ತ ಕ್ರೀಡೆ ಆಯ್ಕೆಮಾಡಿ ದಿನವೂ ಅಭ್ಯಾಸ ಮೂಲಕ ಕೌಶಲ ಮತ್ತು ಚಾತುರ್ಯ ಕರಗತ ಮಾಡಿಕೊಳ್ಳಬೇಕು. ಸೋಲು-ಗೆಲುವು ಸಮವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕೆಂದರು. ವೀವಿ ಅಧ್ಯಕ್ಷ ಪಿ.ಮೂಕಯ್ಯಸ್ವಾಮಿ, ವಿದ್ಯಾವಿಕಾಸ ಎಜುಕೇಷನಲ್ ಟ್ರಸ್ಟ್ ಕಾರ್ಯದರ್ಶಿ ಬಸವರಾಜಸ್ವಾಮಿ, ಪ್ರಮುಖರಾದ ಯು.ಅಶೋಕ್, ಬಿ.ಬೀರಲಿಂಗೇಶ್ವರ, ಡಾ.ಸಂದೀಪಕುಮಾರ್, ಬಸವರಾಜ ನಾಯಕರ, ಬಿ.ಮಲ್ಲಿನಾಥ, ಬಂಗಿ ಸರೋಜ ಹೆಗಡೆ, ಎಲ್.ವಾಮದೇವಮೂರ್ತಿ, ಕೆ.ಎಚ್.ವಿಂದ್ಯಾ, ಎಂ.ಶಿವಬಸವನಗೌಡ, ಕಾಳಿ ಗಗನ, ಮಾಲನ್ ಬೀ, ಪ್ರಮುಖರಾದ ಮೆಟ್ರಿ ಗಂಗಾಧರ, ಎಸ್.ಡಿ.ಬಸವರಾಜ್, ಈಶ್ವರಶ್ರೇಷ್ಠಿ, ಡಿ.ಗುರು ಸೇರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts