ಕಂಪ್ಲಿ: ಹಂಪಿ ಉತ್ಸವದ ಮಾದರಿಯಲ್ಲಿ ಕಂಪ್ಲಿ ಮತ್ತು ಕುರುಗೋಡು ಉತ್ಸವಗಳನ್ನು ಆಚರಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.
ತಾಲೂಕಿನ ರೆಗ್ಯುಲೇಟರ್ ಕ್ಯಾಂಪಿನ ಸಹಿಪ್ರಾ ಶಾಲೆ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ 2021-22ನೇ ಸಾಲಿನ ಕೆಕೆಆರ್‌ಡಿಬಿ ಮೈಕ್ರೋ ಯೋಜನಡಿಯ 27.32ಲಕ್ಷ ರೂ. ವೆಚ್ಚದ ಎರಡು ಶಾಲಾ ಕೊಠಡಿಗಳು ಹಾಗೂ ಸ್ಮಾರ್ಟ್‌ಕ್ಲಾಸ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಕಂಪ್ಲಿ ಉತ್ಸವನ್ನು ತರಾತುರಿಯಲ್ಲಿ ಬೇಕಾಬಿಟ್ಟಿಯಾಗಿ ಆಚರಿಸಬಾರದು. ಪಟ್ಟಣ ಸೇರಿ ತಾಲೂಕಿನ ಜನಪ್ರತಿನಿಧಿಗಳು, ಮುಖಂಡರು, ಪ್ರಗತಿಪರ ಸಂಘಟನೆಗಳು, ನಾಗರಿಕರು, ಚಿಂತಕರು ಒಗ್ಗೂಡಿ ಸಮಿತಿ ರಚಿಸಿಕೊಂಡು ಸರ್ಕಾರವನ್ನು ಒತ್ತಾಯಿಸಬೇಕಿದೆ ಎಂದರು.
ಮುಖ್ಯಶಿಕ್ಷಕ ಶಂಕರಲಿಂಗಪ್ಪ ಉಪ್ಪಿನಮೇಟಿಗೌಡ್ರು, ಶಿಕ್ಷಕರಾದ ಕೆ.ಮಾಲಿಕ್, ಪಿ.ಸಂತೋಷಕುಮಾರ್, ಗ್ರಾಪಂ ಸದಸ್ಯ ಗೋಪಾಲ್, ಪ್ರಮುಖರಾದ ಅಂಜಿನಪ್ಪ, ಪಂಪಾಪತಿ, ಹನುಮಂತಪ್ಪ, ಹುಲುಗಪ್ಪ ಎಸ್‌ಡಿಎಂಸಿ ಪದಾಧಿಕಾರಿಗಳು ಇತರರು ಇದ್ದರು.